ಕಮ್ಯೂನಿಸ್ಟ್ ಸಿದ್ಧಾಂತಕ್ಕೆ ಅನುಗುಣವಾಗಿ ಕುರಾನ್ ಅಧ್ಯಾಯವನ್ನೇ ಬದಲಿಸಲು ಮುಂದಾದ ಚೀನಾ

Public TV
2 Min Read

ಬೀಜಿಂಗ್: ಚೀನಾದ ಝಿಂಜಿಯಾಂಗ್ ಪ್ರಾಂತ್ಯದಲ್ಲಿ ನೆಲೆಸಿರುವ ಅಲ್ಪಸಂಖ್ಯಾತ ಉಯಿಘರ್ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎನ್ನುವ ಆರೋಪದ ಮಧ್ಯೆ ಚೀನಾ ಸರ್ಕಾರ ಧರ್ಮ ಗ್ರಂಥಗಳಾದ ಕುರಾನ್ ಮತ್ತು ಬೈಬಲಿನ ಕೆಲ ಅಧ್ಯಾಯಗಳನ್ನು ಪುನರ್ ರಚಿಸಲು ಮುಂದಾಗಿದೆ.

ಕಮ್ಯೂನಿಸ್ಟ್ ಸರ್ಕಾರ ಪಕ್ಷದ ಸಿದ್ಧಾಂತಗಳಿಗೆ ವಿರುದ್ಧವಾಗಿ ಧರ್ಮಗ್ರಂಥಗಳಲ್ಲಿ ಪ್ರಸ್ತಾಪಗೊಂಡಿರುವ ಅಂಶಗಳನ್ನು ತೆಗೆದು ಹಾಕಲು ನಿರ್ಧರಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಪಕ್ಷ ಪರಿಷ್ಕೃತ ಆವೃತ್ತಿಗಳಲ್ಲಿ ಪಕ್ಷದ ಸಿದ್ಧಾಂತಗಳಿಗೆ ವಿರುದ್ಧದ ಅಂಶಗಳು ಇರುವುದಿಲ್ಲ ಎಂದು ಹೇಳಿದೆ. ಅಲ್ಲದೇ ಈ ಬದಲಾವಣೆಗಳನ್ನು ಸಮಯದ ಪ್ರಗತಿಗೆ ಅನುಗುಣವಾಗಿ ವಿಷಯಗಳನ್ನು ಗುರಿಯಾಗಿಸಿ ಸಮಗ್ರ ಮೌಲ್ಯಮಾಪನ ಮಾಡುವ ಯೋಜನೆಯ ಭಾಗ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಅಂತಾರಾಷ್ಟ್ರಿಯ ಮಾನವಹಕ್ಕುಗಳ ಸಂಸ್ಥೆಯೂ ಕೂಡ ಚೀನಾ ಸರ್ಕಾರವನ್ನು ಝಿಂಜಿಯಾಂಗ್ ಸೇರಿದಂತೆ ಕ್ಸಿನ್‍ಜಿಯಾಂಗ್ ಪ್ರದೇಶದ ಮುಸ್ಲಿಂರ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯ ಸೇರಿದಂತೆ ಬಂಧನಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡುತಿತ್ತು. ಈ ಎಲ್ಲಾ ಬೆಳವಣಿಗೆಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ ನೀಡಿದ ವರದಿಯ ಬಳಿಕ ನಡೆದಿದ್ದು, ಸುಮಾರು 20 ಲಕ್ಷ ಮಂದಿ ಮುಸ್ಲಿಮರನ್ನು ಭಯೋತ್ಪಾದನಾ ನಿಗ್ರಹ ಅಭಿಯಾನದಡಿ ಅಕ್ರಮ ಬಂಧನದಲ್ಲಿರಿಸಲಾಗಿದೆ ಎಂದು ತನ್ನ ವರದಿಯಲ್ಲಿ ಪ್ರಸ್ತಾಪ ಮಾಡಿತ್ತು.

ಚೀನಾ ಸರ್ಕಾರ ವೃತ್ತಿಪರ ತರಬೇತಿ ಕೇಂದ್ರಗಳ ಹೆಸರಿನಲ್ಲಿ ಸರಿಸುಮಾರು 10 ಲಕ್ಷ ಉಯಿಘರ್ ಮುಸ್ಲಿಮರು ಹಾಗೂ ಇತರೆ ಮುಸ್ಲಿಮರನ್ನು ಬಂಧಿಸಿದೆ. ಆದರೆ ವಿಶ್ವಕ್ಕೆ ಚೀನಾ ಸರ್ಕಾರ ಮಾತ್ರ ಈ ಕೇಂದ್ರಗಳಲ್ಲಿ ಪ್ರಜೆಗಳಿಗೆ ವಿಶೇಷ ಹಾಗೂ ಮೂಲಭೂತ ಕೌಶಲ್ಯಗಳ ತರಬೇತಿ ನೀಡಿ ಅವರ ಚಿಂತನೆಯನ್ನು ಬದಲಿಸುತ್ತೇವೆ ಎಂದು ಹೇಳುತ್ತಿದೆ.

ಚೀನಾ ಸರ್ಕಾರ ಈ ನಡೆಯನ್ನು ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಉಗ್ರಗಾಮಿ ನೀತಿಯ ದೌರ್ಜನ್ಯದ ಒಂದು ಭಾಗವಾಗಿದೆ ಎಂದಿವೆ. ಅಲ್ಲದೇ ಮುಸ್ಲಿಮರನ್ನು ಬಂಧಿಸುವುದು ಮಾತ್ರವಲ್ಲದೇ ತರಬೇತಿ ಕೇಂದ್ರಗಳಲ್ಲಿ ಜನಿಸುವ ಮಕ್ಕಳಿಗೆ ಮುಸ್ಲಿಂ ಹೆಸರುಗಳನ್ನು ನಮೂದಿಸುವುದು ನಿಷೇಧಿಸುತ್ತಿದೆ. ಅಲ್ಲಿನ ಮಂದಿಗೆ ಕ್ರೂರ ಚಿತ್ರಹಿಂಸೆಯನ್ನು ನೀಡುತ್ತಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗುತ್ತಿದೆ.

2014ರಿಂದಲೂ ಚೀನಾ ಇಂತಹ ಪುನರ್ ವಸತಿ ಕೇಂದ್ರಗಳನ್ನು ತೆರೆದಿತ್ತು. ಈ ವೇಳೆ ತನ್ನ ನಡೆಗೆ ಸಮರ್ಥನೆ ನೀಡಿದ್ದ ಚೀನಾ ಧಾರ್ಮಿಕ ಭಯೋತ್ಪಾದನೆ ಮತ್ತು ಪ್ರತ್ಯೇಕತವಾದ ಹೆಸರಿನಲ್ಲಿ ನಡೆಯುತ್ತಿರುವ ದಾಳಿಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ ಎಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *