ವಿದ್ಯುತ್ ತಂತಿ ತಗುಲಿ ಲಾರಿಗೆ ಬೆಂಕಿ – ಲಕ್ಷಾಂತರ ರೂ. ಮೌಲ್ಯದ ಮೆಣಸಿನಕಾಯಿ ಭಸ್ಮ

Public TV
1 Min Read

ಬಳ್ಳಾರಿ: ವಿದ್ಯುತ್ ತಂತಿ ತಗುಲಿದ ಪರಿಣಾಮ ಲಾರಿಯೊಂದು ಹೊತ್ತಿ ಉರಿದ ಘಟನೆ ಕುರಗೋಡ ತಾಲ್ಲೂಕಿನ ಸಿದ್ದಮನಹಳ್ಳಿ ಹೊರವಲಯದಲ್ಲಿ ನಡೆದಿದೆ. ಲಾರಿಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೆಣಸಿನಕಾಯಿ ಬೆಂಕಿಗೆ ಆಹುತಿಯಾಗಿದ್ದು (Fire Accident) ರೈತರು (Farmers) ಕಂಗಾಲಾಗಿದ್ದಾರೆ.

ಸಿದ್ದಮನಹಳ್ಳಿ ಸೇರಿದಂತೆ ಅಕ್ಕಪಕ್ಕದ ರೈತರು ಬೆಳೆದ ಮೆಣಸಿನಕಾಯಿ ತುಂಬಿಕೊಂಡು ಲಾರಿ ಬೆಂಗಳೂರಿನ ಕಡೆ ಹೊರಟಿತ್ತು. ಈ ವೇಳೆ ಗ್ರಾಮದ ಹೊರವಲಯದಲ್ಲಿ ಲಾರಿಗೆ ವಿದ್ಯುತ್ ತಂತಿ ತಗುಲಿದೆ. ಪರಿಣಾಮ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಲಾರಿ ಚಾಲಕ ಹಾಗೂ ಕ್ಲೀನರ್ ಲಾರಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: ಹೆಂಡತಿ ಎಂಪಿ ಆಗಲಿ ಎಂಬ ಆಸೆಯಿದೆ- ಪಾಲಿಟಿಕ್ಸ್ ಬಗ್ಗೆ ಶಿವಣ್ಣ ಮಾತು

ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸಿದ್ದಾರೆ. ಅಷ್ಟರಲ್ಲಾಗಲೇ ಲಾರಿ ಹಾಗೂ ಅದರಲ್ಲಿದ್ದ ಮೆಣಸಿನಕಾಯಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಇದನ್ನೂ ಓದಿ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಯಾತ್ರಾರ್ಥಿ ಟಾಯ್ಲೆಟ್‌ನಲ್ಲಿ ಸಾವು

Share This Article