ಕೈಕಾಲು ಕಟ್ಟಿ, ಕಂಪಾಸ್‌ನಿಂದ ಚುಚ್ಚಿ ಚಿತ್ರಹಿಂಸೆ – ನರ್ಸಿಂಗ್‌ ಕಾಲೇಜಿನಲ್ಲಿ ರ‍್ಯಾಗಿಂಗ್‌ ಕ್ರೂರತೆಯ ವಿಡಿಯೋ ವೈರಲ್‌

Public TV
2 Min Read

ತಿರುವನಂತಪುರಂ: ಕೇರಳದ ಕೊಟ್ಟಾಯಂ (Kottayam) ನರ್ಸಿಂಗ್‌ ಕಾಲೇಜಿನಲ್ಲಿ ಭಯಾನಕ ರ‍್ಯಾಗಿಂಗ್ (Ragging) ಮಾಡಿದ ಆರೋಪದ ಮೇಲೆ ಐವರು ವಿದ್ಯಾರ್ಥಿಗಳನ್ನು ಬಂಧಿಸಿದ ಬೆನ್ನಲ್ಲೇ ರ‍್ಯಾಗಿಂಗ್‌ ಕ್ರೂರತೆಯ ವಿಡಿಯೋ ಹೊರಬಿದ್ದಿದೆ.

ಐವರು ಹಿರಿಯ ವಿದ್ಯಾರ್ಥಿಗಳು ತಮ್ಮ ಮೂವರು ಜೂನಿಯರ್‌ ವಿದ್ಯಾರ್ಥಿಗಳಿಗೆ ಎಷ್ಟರಮಟ್ಟಿಗೆ ಚಿತ್ರಹಿಂಸೆ ನೀಡಿದ್ದಾರೆ? ಅನ್ನೋದನ್ನ ಈ ವೀಡಿಯೋ ಬಹಿರಂಗಪಡಿಸಿದೆ. ಕಿರಿಯ ವಿದ್ಯಾರ್ಥಿಯನ್ನ ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಡಂಬಲ್ಸ್ ನೇತು ಹಾಕಿ ಟಾರ್ಚರ್ ಮಾಡೋದಕ್ಕೂ ಮುನ್ನವೇ ಇನ್ನೂ ಬೇರೆ ರೀತಿಯಲ್ಲಿ ಅವರಿಗೆ ಚಿತ್ರಹಿಂಸೆ ನೀಡಲಾಗಿತ್ತು ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ನಾಲ್ಕು ಗಿನ್ನಿಸ್ ದಾಖಲೆಗೆ ತಯಾರಿ

ಹೌದು. ಮೊದಲು ಮೂವರು ಕಿರಿಯರಲ್ಲಿ ಓರ್ವನನ್ನ ಹಾಸಿಗೆ ಮೇಲೆ ಮಲಗಿಸಿದ್ದಾರೆ. ಕೈಕಾಲುಗಳನ್ನ ಹಾಸಿಗೆ ತುದಿಗೆ ಕಟ್ಟಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ಆತನ ತೊಡೆಯ ಭಾಗಕ್ಕೆ ಕಂಪಾಸ್‌ನಿಂದ ಚುಚ್ಚಿದ್ದಾನೆ. ಸಂತ್ರಸ್ತ ವಿದ್ಯಾರ್ಥಿ (Medical Student) ಚೀರಾಡಿದರೂ ಬಿಡದೇ ಅತನ ಮೈಮೇಲೆ ಬಿಳಿ ಲೋಷನ್‌ ಸುರಿದಿದ್ದಾರೆ. ಬಳಿಕ ಮರ್ಮಾಂಗಕ್ಕೆ ಡಂಬಲ್ಸ್‌ಗಳನ್ನ ನೇತುಹಾಕಿ, ಎದೆಯ ಭಾಗಕ್ಕೆ ಬಟ್ಟೆ ಕ್ಲಿಪ್‌ಗಳನ್ನ ಕಚ್ಚಿಸಿದ್ದಾರೆ. ಬಳಿಕ ಕ್ಲಿಪ್‌ ಹಿಡಿದು ಎಳೆದಾಡಿದ್ದಾರೆ. ವಿದ್ಯಾರ್ಥಿ ಕೂಗಿಕೊಂಡರೂ ಬಿಡದೇ ಆತನನ್ನ ಟಾರ್ಚರ್‌ ಮಾಡಿ, ಕೇಕೆ ಹಾಕಿದ್ದಾರೆ.  ಇದನ್ನೂ ಓದಿ: ಫೆ.15ರಂದು ಅಶ್ವಿನಿ ವೈಷ್ಣವ್ ರಾಜ್ಯ ಭೇಟಿ – ಕೇಂದ್ರ ಬಜೆಟ್ ಕುರಿತು ಸಂವಾದ

ಈ ಸಂಬಂಧ ಅದೇ ಕಾಲೇಜಿನ ಪ್ರಥಮ ವರ್ಷದ ಮೂವರು ವಿದ್ಯಾರ್ಥಿಗಳು ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿದ ಪೊಲೀಸರು ಹಿರಿಯ ವಿದ್ಯಾರ್ಥಿಗಳಾದ ಸ್ಯಾಮ್ಯುಯೆಲ್ ಜಾನ್ಸನ್ (20), ರಾಹುಲ್ ರಾಜ್ (22), ಜೀವಾ (18), ರಿಜಿಲ್ ಜಿತ್ (20) ಮತ್ತು ವಿವೇಕ್ (21)ರನ್ನ ಬಂಧಿಸಿದ್ದಾರೆ. ಈ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನ ಅಮಾನತುಗೊಳಿಸಿದೆ.

ಈ ನಡುವೆ ಮದ್ಯ ಖರೀದಿಸಲು ಕಿರಿಯ ವಿದ್ಯಾರ್ಥಿಗಳಿಂದ ಹಣ ಕೇಳಿದ್ದಾರೆ, ಅವರು ನಿರಾಕರಿಸಿದ್ದಕ್ಕಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಅರೋಪ ಕೇಳಿಬಂದಿದೆ. ಮತ್ತೊಬ್ಬ ವಿದ್ಯಾರ್ಥಿ ತನ್ನ ತಂದೆಯೊಂದಿಗೆ ಹೇಳಿಕೊಂಡ ನಂತರ ವಿಷಯ ಗೊತ್ತಾಗಿದೆ. ಬಳಿಕ ದೂರು ದಾಖಲಿಸಲು ಮಗನಿಗೆ ಪ್ರೋತ್ಸಾಹ ನೀಡಿದ್ದಾರೆ. ಇದನ್ನೂ ಓದಿ: ಏಡ್ಸ್‌ ಸೋಂಕಿಗೆ ಒಳಗಾದ ಸಿಆರ್‌ಪಿಎಫ್‌ ಸಿಬ್ಬಂದಿಗೆ ಬಡ್ತಿ ನಿರಾಕರಣೆ – ತಾರತಮ್ಯದ ಸ್ಪಷ್ಟ ನಿದರ್ಶನ ಎಂದ ಹೈಕೋರ್ಟ್‌

Share This Article