ಹೆಲಿಕಾಪ್ಟರ್‌ನಿಂದ ಇಳಿದು ಗುಂಡು ಹಾರಿಸಿ ಫಿಲ್ಮಿ ಸ್ಟೈಲ್‌ ಹೈಜಾಕ್‌ – ಭಾರತಕ್ಕೆ ಬರುತ್ತಿದ್ದ ಹಡಗು ಅಪಹರಣದ ವಿಡಿಯೋ ರಿಲೀಸ್‌

Public TV
2 Min Read

– ಯೆಮೆನ್‌ ಬಂಡುಕೋರರಿಂದ ಸರಕು ಸಾಗಾಣೆ ಹಡಗು ಅಪಹರಣ
– ಇಸ್ರೇಲ್‌ ದಾಳಿಗೆ ಪ್ರತೀಕಾರವಾಗಿ ಹೈಜಾಕ್‌

ಸನಾ: ಹಡಗಿನ ಮೇಲೆ ಇಳಿದ ಹೆಲಿಕಾಪ್ಟರ್‌. ರೈಫಲ್‌ ಹಿಡಿದು ಘೋಷಣೆ ಕೂಗುತ್ತಾ ಇಳಿದ ಬಂಡುಕೋರರು. ಹಡಗಿನ ಕ್ಯಾಬಿನ್‌ ನುಗ್ಗಿ ಬೆದರಿಕೆ. ಶರಣಾದ ಹಡಗಿನ ಸಿಬ್ಬಂದಿ. ಇದು ಯಾವುದೋ ಸಿನಿಮಾದ ಕಥೆಯಲ್ಲ. ಯೆಮೆನ್‌ (Yemen) ಬಂಡುಕೋರರು ಹಡಗನ್ನುಅಪಹರಿಸಿ ಪರಿ ಇದು.

ಭಾರತಕ್ಕೆ (India) ಬರುತ್ತಿದ್ದ ಸರಕು ಹಡಗು ಗ್ಯಾಲಕ್ಸಿ ಲೀಡರ್‌ (Galaxy Leader) ಅಪಹರಣ ಕೊನೆಯ ಕ್ಷಣಗಳ ವಿಡಿಯೋವನ್ನು ಯೆಮೆನ್ ಮೂಲದ ಹೌತಿ ಬಂಡುಕೋರರು (Houthi Rebels) ಬಿಡುಗಡೆ ಮಾಡಿದ್ದಾರೆ. ಟರ್ಕಿಯಿಂದ (Turkey) ಭಾರತಕ್ಕೆ ಬರುತ್ತಿದ್ದ ಹಡಗನ್ನು ಭಾನುವಾರ ಅಪಹರಣ ಮಾಡಲಾಗಿತ್ತು. ಈಗ ಹೌತಿ ಬಂಡುಕೋರರು ಎರಡು ನಿಮಿಷಗಳ ಹಡಗನ್ನು ಹೈಜಾಕ್ (Hijack) ಮಾಡುವ ಭಯಾನಕ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ ಬಂದ ಬಂಡುಕೋರರು ಹಡಗಿನ ಮೇಲೆ ದಾಳಿ ಮಾಡಿ ಹೈಜಾಕ್‌ ಮಾಡಿದ್ದಾರೆ. ಹಡಗಿನ ಡೆಕ್‌ನಲ್ಲಿ ಲ್ಯಾಂಡ್‌ ಆದ ಹೆಲಿಕಾಪ್ಟರ್‌ನಿಂದ 10ಕ್ಕೂ ಹೆಚ್ಚು ಬಂಡುಕೋರರು ಘೋಷಣೆಗಳನ್ನು ಕೂಗುತ್ತಾ ಗುಂಡು ಹಾರಿಸುತ್ತಾ ನಿಯಂತ್ರಣ ಕೇಂದ್ರಕ್ಕೆ ಬಂದಿದ್ದಾರೆ. ಬಂಡುಕೋರರನ್ನು ನೋಡಿದ ಸಿಬ್ಬಂದಿ ಶಾಕ್‌ ಆಗಿ ಕೈಯನ್ನು ಮೇಲಕ್ಕೆ ಎತ್ತಿ ಶರಣಾಗಿದ್ದಾರೆ.  ಇದನ್ನೂ ಓದಿ: ಗಾಜಾದ ಆಸ್ಪತ್ರೆಯನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವೀಡಿಯೋ ಸಾಕ್ಷಿ

ಹಮಾಸ್ ವಿರುದ್ಧದ ಯುದ್ಧದ ಪ್ರತೀಕಾರವಾಗಿ ಇಸ್ರೇಲಿ ಹಡಗುಗಳನ್ನು ಗುರಿಯಾಗಿಸಿಕೊಂಡು ನಾವು ದಾಳಿ ಮಾಡುತ್ತೇವೆ ಎಂದು ಹೌತಿ ಬಂಡುಕೋರರು ಎಚ್ಚರಿಕೆ ನೀಡಿದ್ದಾರೆ.

ಹಡಗಿನ ಹೈಜಾಕ್ ಬಳಿಕ ಇದು ಆರಂಭ ಮಾತ್ರ ಎಂದು ಎಂದು ಹೌತಿ ತಿಳಿಸಿದ್ದು, ಕೆಂಪು ಸಮುದ್ರ ಮಾರ್ಗದಲ್ಲಿ ಬರುವ ಎಲ್ಲಾ ಇಸ್ರೇಲಿ ಹಡಗುಗಳನ್ನೂ ಅಪಹರಿಸುವುದಾಗಿ ಬೆದರಿಕೆ ಹಾಕಿದೆ. ಗಾಜಾ ಮೇಲಿನ ದಾಳಿ ನಿಲ್ಲಿಸುವವರೆಗೂ ಮತ್ತಷ್ಟು ಕಡಲ ದಾಳಿಗಳನ್ನು ನಡೆಸುವುದಾಗಿ ಹೌತಿ ಬಂಡುಕೋರರು ಘೋಷಣೆ ಮಾಡಿದ್ದಾರೆ.

ಹಡಗು ಇಸ್ರೇಲಿಗೆ ಸೇರಿದ್ದು ಎಂದು ಹೌತಿ ಹೇಳಿದೆ. ಆದರೆ ಈ ಹೇಳಿಕೆಯನ್ನು ಇಸ್ರೇಲ್‌ ನಿರಾಕರಿಸಿದೆ. ಇದರಲ್ಲಿ ಇಸ್ರೇಲ್‌ ಪ್ರಜೆಗಳು ಯಾರು ಇರಲಿಲ್ಲ. ಅಪಹರಣಕ್ಕೊಳಗಾದ ಹಡಗು ತನ್ನದ್ದಲ್ಲ ಎಂದು ಇಸ್ರೇಲ್‌  ತಿಳಿಸಿದೆ.

ಅಪಹರಣಕ್ಕೊಳಗಾದ ಹಡಗಿನ ಮೇಲೆ ಬಹಾಮಾಸ್ ಧ್ವಜವಿತ್ತು. ಹಡಗಿನಲ್ಲಿ ವಿವಿಧ ರಾಷ್ಟ್ರಗಳಿಗೆ ಸೇರಿದ ಸುಮಾರು 25 ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ಖಲಿಸ್ತಾನಿಗಳಿಂದ ಹಿಂದೂ ದೇವಾಲಯಗಳ ಟಾರ್ಗೆಟ್: ಕ್ರಮಕ್ಕೆ ಕೆನಡಾ ಸಂಸದ ಒತ್ತಾಯ

ಇದು ಬ್ರಿಟಿಷ್ ಕಂಪನಿಯ ಒಡೆತನದಲ್ಲಿದ್ದು, ಇಸ್ರೇಲಿ ಉದ್ಯಮಿ ಅಬ್ರಹಾಂ “ರಾಮಿ” ಉಂಗಾರ್ ಅವರೂ ಕೂಡ ಈ ಹಡಗಿನ ಸಹ ಮಾಲೀಕರು ಎಂದು ಹೇಳಲಾಗಿದೆ. ಅಪಹರಣದ ಸಮಯದಲ್ಲಿ ಹಡಗನ್ನು ಜಪಾನಿನ ನಿಪ್ಪನ್‌ ಯೂಸೆನ್‌ ಕಂಪನಿಗೆ ಗುತ್ತಿಗೆಗೆ ನೀಡಲಾಗಿತ್ತು. ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋ ಮೇಲೆ ಹೌತಿ ಬಂಡುಕೋರರದಿಂದ ಡ್ರೋನ್ ದಾಳಿ – ಹೊತ್ತಿ ಉರಿದ ಘಟಕಗಳು

ಸದ್ಯ ಹಡಗು ಎಲ್ಲಿದೆ?
ಹಡಗಿನ ಜೊತೆ ಸಂವಹನ ಸಂಪೂರ್ಣ ಕಡಿತಗೊಂಡಿದೆ. ಸದ್ಯ ಇದು ಯೆಮೆನ್‌ನಲ್ಲಿರುವ ಹುದೈದಾ ಬಂದರಿನಲ್ಲಿದೆ ಎಂದು ಗ್ಯಾಲಕ್ಸಿ ಲೀಡರ್‌ ನಿರ್ವಹಣೆ ಮಾಡುತ್ತಿರುವ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

 

Share This Article