ಆಟೋ ಟಾಪ್ ಮೇಲೆ ಜೀವ ಒತ್ತೆಯಿಟ್ಟು ಶಾಲೆಯತ್ತ ಮಕ್ಕಳ ಪ್ರಯಾಣ

Public TV
1 Min Read

– ಬಸ್ ಇಲ್ಲದೆ ಗ್ರಾಮೀಣ ವಿದ್ಯಾರ್ಥಿಗಳ ಪರದಾಟ

ಯಾದಗಿರಿ: ರಾಜ್ಯಾದ್ಯಂತ ಶಾಲೆಗಳು ಆರಂಭಗೊಂಡಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ವರದಾನವಾಗಿದೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಮಕ್ಕಳಿಗೆ ಮಾತ್ರ ಇದು ಅಕ್ಷರಶಃ ಶಾಪವಾಗಿ ಪರಿಣಮಿಸಿದೆ. ಜಿಲ್ಲೆಯ ಸೈದಾಪುರ, ವಡಗೇರಾ, ಗುರುಮಿಠಕಲ್ ಭಾಗದ ಮಕ್ಕಳು ಶಾಲೆಗೆ ಹೋಗಬೇಕಾದರೆ, ಜೀವ ಕೈಯಲ್ಲಿಡಿದು ಸುಮಾರು 7-8 ಕಿಲೋಮೀಟರ್ ಪ್ರಯಾಣ ಮಾಡಬೇಕಾಗಿದೆ.

students

ಹೌದು, ಗ್ರಾಮಗಳಲ್ಲಿ ಬಸ್‍ಗಳ ಅಭಾವ ಇರುವುದರಿಂದ ಮಕ್ಕಳು ಮೂರು ಗಾಲಿ ಆಟೋದ ಟಾಪ್ ಮೇಲೆ ಕುಳಿತು ಶಾಲೆಗೆ ಬರಬೇಕಾಗಿದೆ. ಆಟೋದ ಮೇಲೆ ಯಾವುದೇ ಸೇಫ್ಟಿ ಇಲ್ಲದೆ, ನೇತಾಡುತ್ತಾ ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದಾರೆ. ಇದನ್ನೂ ಓದಿ: ಹಾನಗಲ್‌ನಲ್ಲಿ ಕಾಂಗ್ರೆಸ್‌ಗೆ ಗೆಲುವು – ತವರು ಜಿಲ್ಲೆಯಲ್ಲೇ ಸಿಎಂಗೆ ಮುಖಭಂಗ

ಇದು ಕೇವಲ ಇಂದು ನಿನ್ನೆ ಸಮಸ್ಯೆ ಅಷ್ಟೇ ಅಲ್ಲ. ಯಾದಗಿರಿ ಜಿಲ್ಲೆಯ ಬಹುತೇಕ ಹಳ್ಳಿಗಳು ಇನ್ನೂ ಬಸ್ ಮುಖ ಸಹ ನೋಡಿಲ್ಲ. ಇಂದಿಗೂ ಸಹ ಮಕ್ಕಳು ಶಾಲೆಗೆ ನಡೆದುಕೊಂಡು ಬರುವ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಪುನೀತ್ ಸಮಾಧಿಗೆ ಹಾಲು ತುಪ್ಪ ಕಾರ್ಯ ನೆರವೇರಿಸಿದ ಕುಟುಂಬಸ್ಥರು

Share This Article
Leave a Comment

Leave a Reply

Your email address will not be published. Required fields are marked *