ಬೆಂಗಳೂರು: ಮಳೆರಾಯನ ಆರ್ಭಟಕ್ಕೆ ಕೊಡಗು ಸಂಪೂರ್ಣ ನಲುಗಿ ಹೋಗಿದೆ. ಕೊಡವರಿಗಾಗಿ ನೂರಾರು ಮಂದಿ ತಮ್ಮ ಕೈಲಾದ ಸಹಾಯಹಸ್ತ ನೀಡುತ್ತಿದ್ದಾರೆ. ಸಿಲಿಕಾನ್ ಸಿಟಿಯ ಒಂದು ಶಾಲೆಯ ಮಕ್ಕಳು ವಿಭಿನ್ನವಾಗಿ ಕೊಡವರ ಸಹಾಯಕ್ಕೆ ನಿಂತಿದ್ದಾರೆ.
ಇಲ್ಲಿನ ಇಂದಿರಾನಗರದ ಸೆವೆನ್ ಸೆನ್ಸ್ ಮಾಂಟೆಸ್ಸರಿ ನಲ್ಲಿ ಮಕ್ಕಳು ತಮ್ಮ ಮನೆಯಿಂದಲೇ ಮಾಡಿದ್ದ ತಿಂಡಿಯನ್ನು ತಂದು ಮಾರಾಟ ಮಾಡುವುದರ ಮೂಲಕ ಬಂದ ಹಣವನ್ನು ಕೊಡಗಿನ ಸಂತ್ರಸ್ತರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಕೊಡಗಿನಲ್ಲಿ ಪ್ರವಾಹಕ್ಕೆ ಒಳಗಾಗಿ ನಿರಾಶ್ರಿತರಾಗಿರುವವರಿಗೆ ಒಬ್ಬೊಬ್ಬರು ಒಂದೊಂದು ರೀತಿ ಸಹಾಯ ಮಾಡುತ್ತಿದ್ದಾರೆ. ಆದರೆ ಈ ಮಕ್ಕಳು ಪಾಪ್ ಕಾರ್ನ್, ಕೇಕ್, ಜ್ಯೂಸ್, ಬಿಸ್ಕತ್, ವಡೆ, ಪಕೋಡಾ, ಚಾಕ್‍ಲೇಟ್‍ಗಳನ್ನು ಮಾರುವ ಮೂಲಕ ಸಂತ್ರಸ್ತರಿಗೆ ನಿಧಿ ಸಂಗ್ರಹಿಸಿದ್ದಾರೆ.
ಮಕ್ಕಳು ಪೋಷಕರ ಸಹಾಯದಿಂದ ತಯಾರಿಸಿದ ತಿಂಡಿ ತಿನ್ನಿಸುಗಳು ಸಖತ್ ಟೇಸ್ಟ್ ಆಗಿದ್ದು, ಪೋಷಕರು ದುಡ್ಡು ಕೊಟ್ಟು ಖರೀದಿಸುವ ಮೂಲಕ ಸಂತ್ರಸ್ತರಿಗೆ ನೆರವಿನ ಹಸ್ತಚಾಚಿದ್ದಾರೆ.
ಕೊಡವರ ನೋವಿಗೆ ವಿನೂತನ ರೀತಿಯಲ್ಲಿ ಸೆವೆನ್ ಸೆನ್ಸ್ ಮಾಂಟೆಸ್ಸರಿ ಸ್ಪಂದಿಸಿದೆ. ನಮ್ಮ ಮಕ್ಕಳಲ್ಲಿ ಉದಾರ ಗುಣ ಬೆಳೆಸುವ ಮೂಲಕ ಮಾನವೀಯತೆ ಮೆರೆದಿದೆ ಎಂದು ಪೋಷಕರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=7RNfFi-5IAw