ಅಪ್ರಾಪ್ತೆಯನ್ನು ಮದುವೆಯಾಗಿ ರೇಪ್ ಮಾಡಿದ್ದ ವ್ಯಕ್ತಿಯ ಬಂಧನ

Public TV
1 Min Read

ಮುಂಬೈ: ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಮದುವೆಯಾಗಿ ಹಲವಾರು ಬಾರಿ ಅತ್ಯಾಚಾರ ಮಾಡಿದ ಆರೋಪದ ಮೇಲೆ 27 ವರ್ಷದ ವ್ಯಕ್ತಿಯನ್ನು ಬಂಧಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಶುಕ್ರವಾರ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಜನವರಿಯಲ್ಲಿ ಅಪ್ರಾಪ್ತೆಗೆ ಬಾಲ್ಯವಿವಾಹ ನಿಶ್ಚಯವಾಗಿತ್ತು. ಮಗುವಿಗೆ ಜನ್ಮ ನೀಡುವ ಮೊದಲು, ಆಸ್ಪತ್ರೆಯ ವೈದ್ಯರು ತಾಯಿಯ ವಯಸ್ಸನ್ನು ಕೇಳಿದಾಗ, ಆಕೆಯ ಪತಿ ಹಾಗೂ ಅತ್ತೆಗೆ 20 ವರ್ಷ ವಯಸ್ಸಾಗಿದೆ ಎಂದು ವೈದ್ಯರಿಗೆ ತಿಳಿಸಿದ್ದರು.

ಆದರೆ, ವೈದ್ಯರು ಬಾಲಕಿಯ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿದಾಗ ಆಕೆಯ ನಿಜವಾದ ವಯಸ್ಸು ಬಹಿರಂಗವಾಗಿದೆ. ಅದರಲ್ಲಿ ಅವಳು ಜೂನ್ 2006ರಲ್ಲಿ ಜನಿಸಿರುವುದು ತಿಳಿದುಬಂದಿದೆ. ವೈದ್ಯರು ತಕ್ಷಣವೇ ಅಗ್ರಿಪಾದ ಪೊಲೀಸರಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ವಿಧಾನಸಭೆ ಕಲಾಪ – ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ‘ಕೈ’ ಪ್ಲಾನ್

RAPE CASE

ಅಪ್ರಾಪ್ತೆಯ ಕುಟುಂಬಸ್ಥರು ಸ್ಥಿತಿವಂತರಲ್ಲದ ಕಾರಣ ಮಗಳ ಶಿಕ್ಷಣವನ್ನು ನಿಲ್ಲಿಸಿ ಆರೋಪಿಯೊಂದಿಗೆ ಅವಳನ್ನು ಮದುವೆಯಾದಳು. ಬಾಲಕಿ ಐದನೇ ತರಗತಿವರೆಗೆ ಓದಿದ್ದಾಳೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದಿದೆ. ಇದನ್ನೂ ಓದಿ: ಸುವರ್ಣಸೌಧಕ್ಕೆ ಮಾಧ್ಯಮಗಳ ನಿರ್ಬಂಧ ಸಂವಿಧಾನದ ಒಂದು ಕಾಲು ಮುರಿಯುವ ಪ್ರಯತ್ನದಂತೆ: ಎಚ್‍ಡಿಕೆ

ಈ ಕುರಿತು ಬಾಲಕಿಯ ತಾಯಿ, ಗಂಡ ಮತ್ತು ಅವನ ಹೆತ್ತವರು ಹಾಗೂ ವಿವಾಹವನ್ನು ನೆರವೇರಿಸಿದ ಧರ್ಮಗುರುಗಳ ವಿರುದ್ಧ ದೂರು ದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *