Udupi | ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದು ಮಗು ಸಾವು

1 Min Read

ಉಡುಪಿ: ತಾಯಿಯ (Mother) ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು (Child) ಸಾವನ್ನಪ್ಪಿರುವ ಘಟನೆ ಉಡುಪಿ (Udupi) ನಗರದ ಕಿನ್ನಿಮೂಲ್ಕಿ (Kinnimulki) ಬಳಿ ನಡೆದಿದೆ.

ಕೀರ್ತನ ಮೃತ ಮಗು. ನೀರು ಸೇದುತ್ತಿದ್ದ ವೇಳೆ ತಾಯಿಯ ಕೈಯಿಂದ ಜಾರಿ ಮಗು ಬಾವಿಯೊಳಗೆ ಬಿದ್ದಿದೆ. ಆಯತಪ್ಪಿ ಬಿದ್ದ ಮಗುವಿನ ರಕ್ಷಣೆಗೆ ತಕ್ಷಣವೇ ತಾಯಿ ಬಾವಿಗಿಳಿದಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಮೂಲದ ಬಿ.ಕಾಂ ವಿದ್ಯಾರ್ಥಿನಿ ಚಿಕ್ಕಮಗಳೂರಲ್ಲಿ ಹೃದಯಾಘಾತಕ್ಕೆ ಬಲಿ

ತಾಯಿ ನಯನ ಹಗ್ಗದ ಸಹಾಯದಿಂದ ಬಾವಿಗಿಳಿದಿದ್ದಾರೆ. ಆದರೆ ಅಷ್ಟುಹೊತ್ತಿಗಾಗಲೇ ಮಗು ಕೊನೆಯುಸಿರೆಳೆದಿತ್ತು. ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ – ಇಂದಿನಿಂದ ಕೋರ್ಟ್ ಟ್ರಯಲ್ ಆರಂಭ

Share This Article