ತಂದೆಯ ಕಾರು ಹರಿದು ಪುಟ್ಟ ಕಂದಮ್ಮ ದುರ್ಮರಣ

Public TV
1 Min Read

ಬೆಂಗಳೂರು: ಆಕಸ್ಮಿಕವಾಗಿ ತಂದೆಯಿಂದಲೇ ಕಾರು (Car) ಹರಿದು ಮಗು (Child) ಸಾವನ್ನಪ್ಪಿರೋ ಘಟನೆ ಹೆಚ್‌ಎಸ್‌ಆರ್ ಲೇಔಟ್‌ನ (HSR Layout) ಆಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಒಂದೂವರೆ ವರ್ಷದ ಶೈಜಾ ಜನ್ನತ್ ಮೃತ ಕಂದಮ್ಮ. ಏಪ್ರಿಲ್ 21ರ ರಾತ್ರಿ 11:30ಕ್ಕೆ ಘಟನೆ ನಡೆದಿದೆ. ಸಂಬಂಧಿಗಳ ಮದುವೆಗೆ ಎಂದು ಚನ್ನಪಟ್ಟಣಕ್ಕೆ ಹೋಗಿದ್ದ ಕುಟುಂಬ ವಾಪಸ್ ಆಗಿತ್ತು. ಕಾರಿನಿಂದ ಇಳಿದು ಎಲ್ಲರೂ ಮನೆ ಒಳಗೆ ಹೋಗಿದ್ದರು. ಮಗುವಿನ ತಂದೆ ಕಾರಿನಿಂದ ಲಗೇಜ್ ತೆಗೆದು ಮನೆಯೊಳಗೆ ಇಡುತ್ತಿದ್ದರು. ಈ ವೇಳೆ ಮಗು ತಂದೆಯ ಹತ್ತಿರ ಓಡಿ ಬಂದಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ಅಟ್ಟಹಾಸ – ಗುಂಡಿನ ದಾಳಿಗೆ ಓರ್ವ ಬಲಿ

ಕಾರಿನಲ್ಲಿದ್ದ ಲಗೇಜ್ ಮನೆಯೊಳಗೆ ಇಡುತ್ತಿದ್ದಾಗ ಮಗು ಕಾರಿನ ಡೋರ್ ಬಳಿಯೇ ನಿಂತಿತ್ತು. ಆದರೆ ಇದನ್ನು ತಂದೆ ಗಮನಿಸಿರಲಿಲ್ಲ. ಲಗೇಜ್ ತೆಗೆದು ಕಾರು ಚಾಲನೆ ಮಾಡಿದ ಸಂದರ್ಭ ಆಕಸ್ಮಿಕವಾಗಿ ಕಾರು ಮಗು ಮೇಲೆ ಹರಿದಿದೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮದುವೆ ಮಂಟಪಕ್ಕೆ ನುಗ್ಗಿ ವಧುವನ್ನು ಎಳೆದೊಯ್ಯಲು ಯತ್ನಿಸಿದ ಆಕೆಯ ಕುಟುಂಬ!

ಈ ಕುರಿತು ಹೆಚ್‌ಎಸ್‌ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತೈವಾನ್​ನಲ್ಲಿ 24 ಗಂಟೆಯೊಳಗೆ 80ಕ್ಕೂ ಹೆಚ್ಚು ಬಾರಿ ಕಂಪಿಸಿದ ಭೂಮಿ!

Share This Article