ಚಿಕ್ಕಮಗಳೂರು | ಲೈಫ್ ಲೈನ್ ಫೀಡ್ಸ್ ಕಂಪನಿ ಮೇಲೆ ಐಟಿ ದಾಳಿ

Public TV
1 Min Read

ಚಿಕ್ಕಮಗಳೂರು: ತೆರಿಗೆ ವಂಚನೆ (Tax Evasion) ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚಿಕ್ಕಮಗಳೂರಿನ (Chikkamagaluru) ಲೈಫ್ ಲೈನ್ ಫೀಡ್ಸ್ (ಇಂಡಿಯಾ) ಪ್ರೈವೇಟ್ ಕಂಪನಿ (Life Line Feeds (India) Pvt Ltd) ಮೇಲೆ ದಾಳಿ ಮಾಡಿದ್ದಾರೆ.

ಕಂಪನಿಯ ಮಾಲೀಕ ಕಿಶೋರ್ ಕುಮಾರ್ ಹೆಗ್ಡೆಯವರ ಮನೆ, ನಗರದ ರತ್ನಗಿರಿ ರಸ್ತೆಯಲ್ಲಿರುವ ಕಛೇರಿ ಸೇರಿದಂತೆ ಫಾರಂ ಹೌಸ್ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಂಪನಿ ಮಾಲೀಕರ ಸಮ್ಮುಖದಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. 12ಕ್ಕೂ ಹೆಚ್ಚು ವಾಹನಗಳಲ್ಲಿ ಬಂದ 40ಕ್ಕೂ ಹೆಚ್ಚು ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಕಾಲಿಟ್ಟಿದ್ದಾಳೆ ನಕಲಿ ನಂದಿನಿ – 1.5 ಕೋಟಿ ಮೌಲ್ಯದ 8 ಸಾವಿರ ಲೀಟರ್ ತುಪ್ಪ ಸೀಜ್

ಪೊಲೀಸ್ ಇಲಾಖೆಗೆ ಯಾವುದೇ ಮಾಹಿತಿ ನೀಡದೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೈಫ್ ಲೈನ್ ಫೀಡ್ಸ್ (ಇಂಡಿಯಾ) ಪ್ರೈವೇಟ್ ಕಂಪನಿ ದೇಶ-ವಿದೇಶಗಳಿಗೆ ಲೈಫ್ ಲೈನ್ ಫೀಡ್ಸ್ (ಇಂಡಿಯಾ) ಪ್ರೈವೇಟ್ ಕಂಪನಿ ಕೋಳಿ ರಫ್ತು ಮಾಡುತ್ತಿದೆ. ಇದನ್ನೂ ಓದಿ:

Share This Article