– ಬಂಧಿತರ ಸಂಖ್ಯೆ 12ಕ್ಕೆ ಏರಿಕೆ
ಚಿಕ್ಕಮಗಳೂರು: ಕಾಂಗ್ರೆಸ್ (Congress) ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯ ಗಣೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು (Police) 6 ಮಂದಿಯನ್ನು ತಮಿಳುನಾಡಿನ ಮಧುರೈನಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಎ2 ನಿತಿನ್, ಎ4 ದರ್ಶನ್, ಎ5 ಅಜಯ್ ಸೇರಿದಂತೆ ದರ್ಶನ್ ನಾಯ್ಕ್, ಯೋಗೇಶ್, ಫೈಸಲ್ ಎಂದು ಗುರುತಿಸಲಾಗಿದೆ. ಡಿ.5ರ ರಾತ್ರಿ ಸಖರಾಯಪಟ್ಟಣದಲ್ಲಿ ಗಣೇಶ್ ಹತ್ಯೆ ನಡೆದಿತ್ತು. ಆರೋಪಿಗಳ ಬಂಧನಕ್ಕೆ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿತ್ತು. ಗಣೇಶ್ ಕೊಲೆ ಪ್ರಕರಣದಲ್ಲಿ ಇಲ್ಲಿಯವರೆಗೂ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಕೇಸ್ – ಐವರು ಅರೆಸ್ಟ್, ಮೂವರಿಗಾಗಿ ಶೋಧ
ಪೊಲೀಸ್ ಕಸ್ಟಡಿಯಲ್ಲಿರುವ ಎ1 ಸಂಜಯ್ ಎ3 ನಾಗಭೂಷಣ್, ಎ6 ಮಿಥುನ್ ಸೇರಿದಂತೆ 6 ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಇದನ್ನೂ ಓದಿ: 2 ಗುಂಪುಗಳ ಮಧ್ಯೆ ಮಾರಾಮಾರಿ – ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ

