– ಇಬ್ಬರು ಆರೋಪಿಗಳು ಅರೆಸ್ಟ್
ಚಿಕ್ಕಮಗಳೂರು: ಕಾರಿನಲ್ಲಿ ದನಗಳನ್ನು ಕದ್ದೊಯ್ಯುತ್ತಿದ್ದಾಗ ದಾಳಿ ನಡೆಸಿದ ಪೊಲೀಸರ (Police) ಮೇಲೆ ಕಳ್ಳರು ರಾಡ್‍ನಿಂದ ಹಲ್ಲೆ ನಡೆಸಲು ಮುಂದಾಗಿರುವುದು ಕಳಸ (Kalasa) ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.
ಕಳ್ಳರು ಕದ್ದಿದ್ದ ನಾಲ್ಕು ಹಸುಗಳನ್ನು ಝೈಲೋ ಕಾರಿನಲ್ಲಿ ತುಂಬಿಕೊಂಡು ಹೋಗುತ್ತಿದ್ದರು. ಪೊಲೀಸರು, ಕಾರನ್ನು ಅಡ್ಡ ಹಾಕಿದಾಗ, ದುಷ್ಕರ್ಮಿಗಳು ರಾಡ್‍ನಿಂದ ದಾಳಿ ನಡೆಸಲು ಮುಂದಾಗಿದ್ದಾರೆ. ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರನ್ನು ಚೇಸ್ ಮಾಡಿಕೊಂಡು ಹೋಗಿದ್ದಾರೆ. ಈ ವೇಳೆ ಕಳ್ಳರು ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ಇದನ್ನೂ ಓದಿ: ನಾಯಕತ್ವ ಬದಲಾವಣೆ ಆಗಲ್ಲ, ಸಂಖ್ಯಾಬಲದ ಚರ್ಚೆ ಎಲ್ಲಿ ಬರುತ್ತೆ?- ಪ್ರಿಯಾಂಕ್ ಖರ್ಗೆ
ರಾತ್ರಿ ವೇಳೆಯೇ ಹುಡುಕಾಡಿ, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕಾರು, ರಾಡ್, 4 ಮೊಬೈಲ್, 4 ಹಸುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 2 ಬಾರಿ ಟಿಕೆಟ್ ಕ್ಯಾನ್ಸಲ್ ಮಾಡಿದ್ರೂ ಡಿಕೆಶಿ ಭೇಟಿಗೆ ಅವಕಾಶ ನೀಡದ ರಾಹುಲ್!