ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಝೆನ್ ಕಾರೊಂದು ರಸ್ತೆ ಮಧ್ಯೆಯೇ ಪಲ್ಟಿಯೊಡೆದು, ಸುಮಾರು 50 ಮೀಟರ್‌ನಷ್ಟು ದೂರ ಹೋಗಿ ಬಿದ್ದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹ್ಯಾಂಡ್‍ಪೋಸ್ಟ್ ಸಮೀಪದ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.
ಬಾಂಬ್ ಬ್ಲಾಸ್ಟ್ ಆದಂತೆ ಶಬ್ಧ ಬಂದು ಧೂಳೆದ್ದಿರೋದನ್ನ ಗಮನಿಸಿದರೆ ನೋಡುಗರಿಗೆ ಎದೆ ಝಲ್ ಎನ್ನುವಂತಿದೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಝೆನ್ ಕಾರು ಪಲ್ಟಿಯಾದ ರಭಸಕ್ಕೆ ಉರುಳಿಕೊಂಡು ಹೋಗಿ ನಿಂತಿದ್ದ ಇನ್ನೊವಾ ಕಾರಿ ಡಿಕ್ಕಿಯೊಡೆದಿದೆ. ಎರಡು ಕಾರು ಕೂಡ ಬಹುತೇಕ ಜಖಂ ಆಗಿವೆ.
ಹ್ಯಾಂಡ್ ಪೋಸ್ಟ್ ಸಮೀಪದ ಕೃಷ್ಣಾಪುರ ಗ್ರಾಮದ ಹಾರ್ಡ್‍ವೇರ್ ಅಂಗಡಿ ಬಳಿ ನಿಂತಿದ್ದ ಇನೋವಾ ಕಾರಿಗೆ ಝೆನ್ ಡಿಕ್ಕಿಯೊಡೆದಿದೆ. ಇನೋವಾ ಕಾರು ಹಾರ್ಡ್‍ವೇರ್ ಮಾಲೀಕನಿಗೆ ಸೇರಿದ್ದು. ರಸ್ತೆ ಪಕ್ಕದಲ್ಲಿ ನಿಂತಿದ್ದ ಕಾರಿನ ಅಕ್ಕಪಕ್ಕ ಅದೃಷ್ಟವಶಾತ್ ಯಾರೂ ಇರಲಿಲ್ಲ. ಇದ್ದಿದ್ದರೆ ಭಾರೀ ದೊಡ್ಡ ಪ್ರಮಾಣದ ಅನಾಹುತ ಸಂಭವಿಸಿರುತ್ತಿತ್ತು. ಇದನ್ನೂ ಓದಿ: ಡಿಕೆಶಿ ಗೂಂಡಾ, ಸಿದ್ದರಾಮಯ್ಯ ಜಾತಿವಾದಿ: ಈಶ್ವರಪ್ಪ
ಸಿಸಿಟಿವಿಯಲ್ಲಿ ಸೆರೆಯಾಗಿರೋ ಈ ಭಯಾನಕ ದೃಶ್ಯವನ್ನ ನೋಡಿದರೆ ಸಿನಿಮಾ ಚಿತ್ರೀಕರಣದ ವೇಳೆ ಡೂಪ್ ಮಾಡುವಂತೆ ಕಾಣುತ್ತದೆ. ಕಾರು ಪಲ್ಟಿಯಾದ ರಭಸಕ್ಕೆ ಕಾರಿನ ಚಾಲಕನಿಗೆ ತುಸು ಹೆಚ್ಚಾಗಿ ಗಾಯವಾಗಿದ್ದು, ಆತನನ್ನ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗಂಡನ ವೀರ್ಯವನ್ನು ಕೇಕ್‍ನಲ್ಲಿ ಮಿಕ್ಸ್ ಮಾಡಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶಿಕ್ಷಕಿಗೆ 40 ವರ್ಷ ಜೈಲು