ದೇವಿರಮ್ಮ ಬೆಟ್ಟ ಏರುವಾಗ ಇಬ್ಬರು ಅಸ್ವಸ್ಥ – ಬೆಟ್ಟದಿಂದ ಹೊತ್ತುತಂದ ಅಗ್ನಿಶಾಮಕ ಸಿಬ್ಬಂದಿ

Public TV
1 Min Read

ಚಿಕ್ಕಮಗಳೂರು: ದೇವಿರಮ್ಮ ಬೆಟ್ಟ (Deviramma Betta) ಹತ್ತಿದ್ದ ಇಬ್ಬರು ಭಕ್ತರು ಅಸ್ವಸ್ಥರಾಗಿದ್ದಾರೆ. ಓರ್ವ ಯುವತಿ ಹಾಗೂ ಓರ್ವ ಪುರುಷ ಅಸ್ವಸ್ಥರಾಗಿದ್ದಾರೆ.

ಬೆಟ್ಟ ಏರಲಾಗದೆ ಯುವತಿ ಮಧ್ಯದಲ್ಲೇ ಕುಸಿದು ಬಿದ್ದಿದ್ದಾಳೆ. ಯುವತಿಯನ್ನು ಬೆಟ್ಟದ ಕೆಳ ಭಾಗಕ್ಕೆ ಅಗ್ನಿಶಾಮಕ ಸಿಬ್ಬಂದಿ ಹೊತ್ತು ತಂದಿದ್ದಾರೆ. ವ್ಯಕ್ತಿಯೊಬ್ಬರು ಜಾರಿಕೆಯಲ್ಲಿ ಕಾಲು ಉಳುಕಿಸಿಕೊಂಡು ಪರದಾಡಿದ್ದಾರೆ. ಅವರನ್ನು ಸ್ಟ್ರೆಚರ್‌ನಲ್ಲಿ ಅಗ್ನಿಶಾಮಕ ಸಿಬ್ಬಂದಿ ಮೇಲಿಂದ ಬೆಟ್ಟದ ಕೆಳಗೆ ಹೊತ್ತು ತಂದಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಬಿಂಡಿಗ ದೇವಿರಮ್ಮನ ದರ್ಶನಕ್ಕೆ ಕಾದು ನಿಂತ ಸಾವಿರಾರು ಭಕ್ತರಿಗೆ ಮಳೆ ಸವಾಲು

ಬೆಟ್ಟ ಹತ್ತಿದ ಭಕ್ತರು ಇಳಿಯುವಾಗ ಭಾರೀ ಜಾರಿಕೆಯಿಂದ ತೆವಳಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅರ್ಧ ಬೆಟ್ಟಕ್ಕೆ ಹಗ್ಗ ಹಾಕಿ, ಕಾವಲಿಗೆ ಪೊಲೀಸರು ನಿಂತಿದ್ದಾರೆ. ಹಗ್ಗ ಹಾಕದೇ ಇದ್ದಿದ್ದರೆ ಸಾಕಷ್ಟು ಜನ ಜಾರಿ ಬೀಳುವ ಸಾಧ್ಯತೆ ಇತ್ತು.

ಏನಾದರೂ ಆರೋಗ್ಯ ಸಮಸ್ಯೆ ಹಾಗೂ ಅವಘಡ ಸಂಭವಿಸಿದರೆ ತಕ್ಷಣ ಕ್ರಮಕೈಗೊಳ್ಳಲು ಸ್ಥಳದಲ್ಲೇ ಐದು ಆಂಬುಲೆನ್ಸ್‌ಗಳನ್ನು ಇರಿಸಲಾಗಿದೆ. ಇದನ್ನೂ ಓದಿ: 

Share This Article