ಅಪಘಾತದಲ್ಲಿ ಗಾಯಗೊಂಡಿದ್ದ ಶಿವಾತ್ಮನಂದ ಸರಸ್ವತಿ ಶ್ರೀಗಳು ಇನ್ನಿಲ್ಲ

Public TV
1 Min Read

ಚಿಕ್ಕಬಳ್ಳಾಪುರ: ಅಪಘಾತಕ್ಕೀಡಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಾತ್ಮನಂದ ಸರಸ್ವತಿ ಶ್ರೀಗಳು ವಿಧಿವಶರಾಗಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಬಳಿಯ ಜ್ಞಾನಾನಂದ ಆಶ್ರಮದ ಶ್ರೀಗಳು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದಾರೆ.

ಶ್ರೀಗಳು ವೇದ ಭಗವಾನ್ ಎಂಬ ಪುಸ್ತಕ ಬರೆದಿದ್ದಾರೆ. ಈ ಪುಸ್ತಕದ ಪ್ರಿಂಟಿಂಗ್ ಮಾಡಿಸಲು ಕಳೆದ ಸೋಮವಾರ ಗೋಪಾಲ್ ಚಾರ್ ಎಂಬ ಮಠದ ಭಕ್ತರ ಬೈಕಿನಲ್ಲಿ ತೆರಳುತ್ತಿದ್ದರು. ಹೀಗೆ ಹೋಗುತ್ತಿದ್ದಾಗ ಬೆಂಗಳೂರಿನ ಮಾಗಡಿ ರೋಡ್ ಬಳಿ ಶ್ರೀಗಳು ಬೈಕಿನಿಂದ ಕೆಳಗೆ ಬಿದ್ದಿದ್ದರು. ಹಿಂಬದಿ ಕೂತಿದ್ದ ಶ್ರೀಗಳು ಹಂಪ್ ನಲ್ಲಿ ಆಯತಪ್ಪಿ ಕೆಳಗೆ ಬಿದ್ದಿದ್ರು. ಪರಿಣಾಮ ಗಾಯಗೊಂಡು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ. ಇದನ್ನೂ ಓದಿ: ನಮ್ಮಿಂದ ಸಚಿವರಾಗಿರೋದು, ನೀವು ಮೇಲಿಂದ ಇಳಿದು ಬಂದಿಲ್ಲ- ಮಿನಿಸ್ಟರ್ಸ್ ವಿರುದ್ಧ ಶಾಸಕರ ಆಕ್ರೋಶ

ಸದ್ಯ ಶ್ರೀಗಳ ಪಾರ್ಥೀವ ಶರೀರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿದೆ. 10 ಗಂಟೆಗೆ ನಂದಿ ಗ್ರಾಮದ ಜ್ಞಾನಾನಂದ ಆಶ್ರಮಕ್ಕೆ ಆಗಮನ ಆಗಲಿದ್ದು, 10 ಗಂಟೆಯಿಂದ ಭಕ್ತರು ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಂಜೆ 03 ರಿಂದ ಗಂಟೆ ಯೊಳಗೆ ಅಂತಿಮ ವಿಧಿ ವಿಧಾನ ಕಾರ್ಯ ನಡೆಯಲಿದೆ. ಇದನ್ನೂ ಓದಿ: ಗಮನಿಸಿ, ಡಿ.29ಕ್ಕೆ ಕೆಪಿಎಸ್‍ಸಿ ಮರುಪರೀಕ್ಷೆ – ಯಾವೆಲ್ಲ ದಾಖಲೆ ಸಲ್ಲಿಸಬೇಕು?

Share This Article
Leave a Comment

Leave a Reply

Your email address will not be published. Required fields are marked *