ಚಿಕ್ಕಬಳ್ಳಾಪುರ: ಇರಾನ್ ಇಸ್ರೇಲ್ ಯುದ್ಧದಿಂದಾಗಿ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳು (LPG cylinder) ಸಿಗದೇ ಹೋಟೆಲ್‌ಗಳು ಬಂದ್ ಆಗುವಂತಾಗಿದೆ. ಆದ್ರೆ ಹೋಟೆಲ್ ಬಂದ್ ಮಾಡೋಕು ಆಗದೇ ಸುಮ್ಮನೆ ಇರಲೂ ಆಗದೆ ಇರೋ ಕೆಲ ಹೋಟೆಲ್, ಡಾಬಾ ಮಾಲೀಕರು ಸೌದೆ ಒಲೆ ಮೊರೆ ಹೋಗಿದ್ದಾರೆ.
ಇನ್ನೂ ಕೆಲವರು ಗೃಹಬಳಕೆ ಸಿಲಿಂಡರ್ ಗಳನ್ನೇ ಹೋಟೆಲ್ ಡಾಬಾ ಗಳಲ್ಲಿ ಬಳಕೆ ಮಾಡುತ್ತಿದ್ದಾರೆ. ಇದ್ರಿಂದ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಅಧಿಕಾರಿಗಳು ಹಲವೆಡೆ ದಾಳಿ ನಡೆಸಿ ನೂರಾರು ಸಿಲಿಂಡರ್‌ಗಳನ್ನ ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಇರಾನ್ ಅಧ್ಯಕ್ಷರ ಜೊತೆಗೆ ಪ್ರಧಾನಿ ಮೋದಿ ಮಾತು – ಮೂಲ ಸೌಕರ್ಯಗಳ ಮೇಲಿನ ದಾಳಿಗೆ ಖಂಡನೆ
ಹೌದು. ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಜಂಟಿ ದಾಳಿ ನಡೆಸಿದ್ದೇ ಜಾಗತಿಕ ಮಟ್ಟದಲ್ಲಿ ಅನಿಲ ಕೊರತೆಯಲ್ಲಿ ಏರುಪೇರಾಗಿದೆ. ಭಾರತದಲ್ಲೂ ಎಲ್‌ಪಿಜಿ ಅನಿಲದ ಅಭಾವ ಕೊರತೆ ತೀವ್ರ ಮಟ್ಟದಲ್ಲಿ ಎದುರಾಗಿದ್ದು, ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳು ಸಪ್ಲೈ ಇಲ್ಲದೆ ಹೋಟೆಲ್‌ಗಳನ್ನೇ ಬಂದ್ ಮಾಡಲಾಗಿದೆ. ಹಲವರು ಸೌದೆ ಒಲೆಯ ಮೂಲಕವೇ ಹೋಟೆಲ್ ನಡೆಸುವಂತಾಗಿದೆ. ಇನ್ನೂ ಕೆಲವರು ಗೃಹಬಳಕೆ ಸಿಲಿಂಡರ್ ಗಳನ್ನ ಬಳಸಿಕೊಂಡು ಹೋಟೆಲ್ ನಲ್ಲಿ ಅಡುಗೆ, ಟೀ ಕಾಫಿ ತಯಾರಿ ಮಾಡಲು ಮುಂದಾಗಿದ್ದಾರೆ.
ಈ ಬಗ್ಗೆ ದೂರುಗಳ ಕೇಳಿ ಬಂದ ಹಿನ್ನಲೆ ಚಿಕ್ಕಬಳ್ಳಾಪುರ ತಹಶೀಲ್ದಾರ್ ರಶ್ಮಿ, ಚಿಕ್ಕಬಳ್ಳಾಪುರ ತಾಲೂಕಿನ ಹೋಟೆಲ್ ಹಾಗೂ ಡಾಬಾಗಳ ಮೇಲೆ ರೇಡ್ ಮಾಡಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಹಲವು ಸಿಲಿಂಡರ್ ಗಳನ್ನ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೋಲಾರ ಎಪಿಎಂಸಿಗೂ ತಟ್ಟಿದ ವಾರ್ ಎಫೆಕ್ಟ್ – ಟೊಮಾಟೊ ಇಲ್ಲದೆ ಮಾರುಕಟ್ಟೆ ಖಾಲಿ ಖಾಲಿ
ಇನ್ನೂ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲೂ ಸಹ ತಹಶೀಲ್ದಾರ್ ಸಿಬ್ಗುತ್ತಲ್ಲಾ ಸಹ ದಾಳಿ ಮಾಡಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 45 ಸಿಲಿಂಡರ್ ಗಳನ್ನ ಸೀಜ್ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಮಾರ್ಚ್ 20ರ ವರೆಗೆ ಬರೋಬ್ಬರಿ 135 ಸಿಲಿಂಡರ್ ಗಳನ್ನ ಸೀಜ್ ಮಾಡಿ ಹೋಟಲ್ ಡಾಬಾ ಮಾಲೀಕರ ವಿರುದ್ಧ ಪ್ರಕರಣಗಳನ್ನ ದಾಖಲಿಸಲಾಗಿದೆ. ಇನ್ನೂ ಚಿಕ್ಕಬಳ್ಳಾಪುರ ನಗರದ ಭಗವತಿ ಹೋಟೆಲ್‌ನಲ್ಲಿ ಖಾಲಿ ವಾಣಿಜ್ಯ ಸಿಲಿಂಡರ್ ಗಳನ್ನ ಸಹ ಹೆಚ್ಚಿನ ಸಂಖ್ಯೆಯಲ್ಲಿ ಇಟ್ಟುಕೊಂಡಿದ್ದು, ಖಾಲಿ ಸಿಲಿಂಡರ್ ಗಳನ್ನ ಸಹ ದಾಸ್ತಾನು ಮಾಡಿಕೊಳ್ಳುವುದು ನಿಯಮ ಬಾಹಿರ ಅಂತ ಅವುಗಳನ್ನ ಸಹ ತಹಶೀಲ್ದಾರ್ ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಅಧಿಕಾರಿಗಳ ನಡೆಗೆ ಹೋಟೆಲ್ ಮಾಲೀಕ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಪವಿತ್ರ ರಂಜಾನ್ ಹಬ್ಬದಂದು ಭಾವೈಕ್ಯತೆ ಮೆರೆದ ಮುಸ್ಲಿಂ ಬಾಂಧವರು – 3 ಸಾವಿರ ಮಠಕ್ಕೆ ತೆರಳಿ ನಮನ



