ಚಿಕ್ಕಬಳ್ಳಾಪುರ ಹೂ ಬೆಳೆಗಾರರಿಗೆ ಬಂಪರ್ – ಇತಿಹಾಸದಲ್ಲೇ ಮೊದಲ ಬಾರಿಗೆ 400ರ ಗಡಿ ದಾಟಿದ ಗುಲಾಬಿ

Public TV
2 Min Read

– ಮಲ್ಲಿಗೆ, ಕನಕಾಂಬರ ಕೆಜಿಗೆ 1,000-1,200 ರೂ.

ಚಿಕ್ಕಬಳ್ಳಾಪುರ: ಕೇವಲ 10 ದಿನಗಳ ಹಿಂದೆಯಷ್ಟೇ ಆ ಭಾಗದ ರೈತರು (Farmers) ತಾವೇ ಬೆಳೆದಿದ್ದ ಹೂಗಳನ್ನ ತಿಪ್ಪೆಗೆ ಬಿಸಾಡುತ್ತಿದ್ರು. ಕಾರಣ ಪಿತೃಪಕ್ಷ ಅಂತ, ಆಗ ಹೂಗಳನ್ನೇ ಖರೀದಿ ಮಾಡೋರೆ ಇರಲಿಲ್ಲ. ಆದರೀಗ ನವರಾತ್ರಿ ದಸರಾ ಹಬ್ಬ ಆ ರೈತರಿಗೆ ಪಾಲಿಗೆ ಬಂಪರ್ ಲಾಭ ತಂದಿದೆ. ತಿಪ್ಪೆಗೆ ಬಿಸಾಡುತ್ತಿದ್ದ ಹೂಗಳಿಗೆ ಚಿನ್ನದ ಬೆಲೆ ಬಂದಿದ್ದು, ಇತಿಹಾಸದಲ್ಲೇ ಕಂಡು ಕೇಳರಿಯದ ಬೆಲೆಗೆ ಗುಲಾಬಿ ಹೂ (Rose Flower) ಮಾರಾಟವಾಗಿದೆ. ಇದರಿಂದ ರೈತರು ಫುಲ್‌ ಖುಷ್‌ ಆಗಿದ್ದಾರೆ.

ಹೂವು ಖರೀದಿ ಮಾಡುವವರೇ ಇಲ್ಲದೇ ರಾಶಿ-ರಾಶಿ ಹೂ ತಿಪ್ಪೆಗೆ ಬಿಸಾಡಿರೋದು ಒಂದು ಕಡೆಯಾದ್ರೆ, ಅದೇ ಹೂವಿಗೆ ಇತಿಹಾಸದಲ್ಲೇ ಕಂಡು ಕೇಳರಿಯದ ಬೆಲೆ ಬಂದಿರೋದು ಚಿಕ್ಕಬಳ್ಳಾಪುರದಲ್ಲಿ (Chikkaballapura(. ಕೇವಲ 10 ದಿನಗಳ ಹಿಂದೆ ರೈತರು ಮಾರುಕಟ್ಟೆಗೆ ಹೂ ತಂದ್ರೂ ಕೇಳೋರೆ ಇರಲಿಲ್ಲ. ಹೀಗಾಗಿ ತಂದಿದ್ದ ಹೂವನ್ನೇ ಮಾರುಕಟ್ಟೆಯಲ್ಲೇ ತಿಪ್ಪೆಗೆ ಬಿಸಾಡಿ ಹೋಗಿದ್ರು. ಇದನ್ನೂ ಓದಿ: ಇಸ್ರೇಲ್‌ ಭೀಕರ ವಾಯುದಾಳಿಗೆ 22 ಮಂದಿ ಬಲಿ – 117 ಮಂದಿಗೆ ಗಾಯ, ಹಿಜ್ಬುಲ್ಲಾ ಟಾಪ್‌ ಲೀಡರ್‌ ಸೇಫ್‌

ಇದೀಗ ದಸರಾ ಹಬ್ಬದ ಅಂಗವಾಗಿ ಹೂಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇದ್ರಿಂದ ಹೂಗಳ ಬೆಲೆ ಗಗನಕ್ಕೇರಿದ್ದು ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಲ್ಲಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 1 ಕೆಜಿ ಗುಲಾಬಿ ಹೂವಿನ ಬೆಲೆ 400 ರಿಂದ 500 ರೂ. ವರೆಗೂ ಮಾರಾಟವಾಗಿದೆ. ಇನ್ನೂ ತರಹೇವಾರಿ ಸೇವಂತಿಗೆ ಹೂಗಳು ಕೆಜಿಗೆ 250 ರಿಂದ 350 ರೂಪಾಯಿಯವರೆಗೂ ಮಾರಾಟವಾಗುತ್ತಿವೆ. ಅದ್ರಲ್ಲೂ ಕೆಜಿ ಕನಕಾಂಬರ 1,000 ರೂಪಾಯಿಯಿಂದ 1,200 ರೂ. ವರೆಗೆ ಮಾರಾಟವಾಗುತ್ತಿದ್ರೆ ಮಲ್ಲಿಗೆ ಹೂ 1 ಕೆಜಿಗೆ 1,000 ರೂಪಾಯಿಯಾಗಿದೆ. ಇದ್ರಿಂದ ಹೂ ಬೆಳೆದ ರೈತರಿಗೆ ಸಂತಸವೋ ಸಂತಸ ಎಂಬಂತಾಗಿದೆ.

ಇನ್ನೂ ಹೋಲ್ ಸೇಲ್ ಹೂವಿನ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿದೆ. ಇತ್ತ ಚಿಲ್ಲರೆ ಮಾರುಕಟ್ಟೆಯಲ್ಲೂ ಒನ್ ಟು ಡಬಲ್ ಆಗಿದ್ದು ರೈತರಿಗೆ ಲಾಭ ಗ್ರಾಹಕರಿಗೆ ಜೇಬಿಗೆ ಕತ್ತರಿ ಎಂಬಂತಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಗುಲಾಬಿ 800 ರೂಪಾಯಿ, ಸೇವಂತಿಗೆ 500 ರೂಪಾಯಿ, ಮಲ್ಲಿಗೆ ಕನಕಾಂಬರ ಕೇಳೋ ಹಾಗೆ ಇಲ್ಲ ಅನ್ನೋ ಅಷ್ಟು ರೇಟ್ ಅಂತ ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಭಾರತದ ರಾಜ್ಯಗಳಲ್ಲಿ ಆಚರಿಸಲಾಗುವ ವಿಭಿನ್ನ ರೀತಿಯ ದಸರಾ ಹೇಗಿರುತ್ತೆ?

ಎಚ್‌ಎನ್ ವ್ಯಾಲಿ ನೀರು ಕೆರೆಗಳಿಗೆ ಬಂದಿದ್ದೇ ಚಿಕ್ಕಬಳ್ಳಾಪುರದ ರೈತರು ಯಥೇಚ್ಛವಾಗಿ ಹೂ ಬೆಳೆಯುತ್ತಿದ್ದಾರೆ. ಇದ್ರಿಂದ ಚಿಕ್ಕಬಳ್ಳಾಪುರದ ಹೂವಿನ ಮಾರುಕಟ್ಟೆಗೆ ದೇಶದ ನಾನಾ ರಾಜ್ಯಗಳಿಂದಲೂ ವರ್ತಕರು ಆಗಮಿಸಿ ಹೂ ಖರೀದಿಗೆ ಮುಗಿಬಿದ್ದಿದ್ದು ಹೂವಿನ ಬೆಲೆ ಆಕಾಶಕ್ಕೇರಿದೆ. ಇದನ್ನೂ ಓದಿ: ನವರಾತ್ರಿಯ 9ನೇ ದಿನ ಆಯುಧ ಪೂಜೆ – ಖಾಸಾ ಆಯುಧಗಳಿಗೆ ರಾಜವಂಶಸ್ಥ ಯದುವೀರ್ ಪೂಜೆ

Share This Article