ಚಿಕ್ಕಬಳ್ಳಾಪುರ: ಇಂಡೋ ಟೆಬೆಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್‍ನಲ್ಲಿ (ITBP) ಸೇವೆ ಸಲ್ಲಿಸುತ್ತಿದ್ದ ಯೋಧ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ನಡೆದಿದೆ.
ಗಂಗಾಧರಪ್ಪ ಮೃತ ಯೋಧ. ಇಂದು ಮೃತ ಯೋಧನ (Soldier) ಹುಟ್ಟೂರು ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಗ್ರಾಮದಲ್ಲಿ ಸೇನಾ ಗೌರವಗಳೊಂದಿಗೆ ಯೋಧ ಗಂಗಾಧರಪ್ಪಗೆ ಅಂತಿಮ ನಮನ ಸಲ್ಲಿಸಲಾಯಿತು. ಇದನ್ನೂ ಓದಿ: ಗಂಡ-ಹೆಂಡ್ತಿ ಜಗಳ ಬಗೆಹರಿಸೋ ನೆಪದಲ್ಲಿ ಮಹಿಳೆ ಜೊತೆಗೆ ಲವ್ವಿ-ಡವ್ವಿ; ಪೊಲೀಸಪ್ಪನ ಕಾಮದಾಸೆಗೆ ಸುಂದರ ಕುಟುಂಬ ಬೀದಿಗೆ
ಐಟಿಬಿಪಿಯ ಗಾಂಗ್ಟೋಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಗಂಗಾಧರಪ್ಪ ಕರ್ತವ್ಯ ಮುಗಿಸಿ ಮಲಗಿದ್ದ ವೇಳೆ ಹಾಗೆಯೇ ಮೃತಪಟ್ಟಿದ್ರು. ಹೀಗಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಸೇನಾ ಅಧಿಕಾರಿಗಳು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯವಾದಿಗಳ ಹೆಮ್ಮೆ ಮುಖರ್ಜಿ ಕನಸು ಮೋದಿಯಿಂದ ನನಸು: ಯಡಿಯೂರಪ್ಪ
ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಗಂಗಾಧರಪ್ಪ ಮೃತಪಡುವ ಮುನ್ನ ರಾತ್ರಿ ಮನೆಯವರ ಜೊತೆ ಫೋನ್ ಮೂಲಕ ಮಾತನಾಡಿದ್ರು. ಬೆಳಗ್ಗೆ ಮನೆಯವರಿಗೆ ಸಾವಿನ ಸುದ್ದಿ ತಿಳಿದು ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ಪಾರ್ಥೀವ ಶರೀರ ಆಗಮಿಸಿದ್ದು ಅಲ್ಲಿಂದ ಗೌರಿಬಿದನೂರು ತಾಲೂಕು ತೊಂಡೆಬಾವಿ ಗ್ರಾಮಕ್ಕೆ ಸೇನಾ ವಾಹನದ ಮೂಲಕ ಕರೆತರಲಾಯಿತು. ನಂತರ ಸೇನಾ ಗೌರವಗಳೊಂದಿಗೆ ಗಂಗಾಧರಪ್ಪ ಅಂತಿಮ ಕ್ರಿಯಾವಿಧಿವಾನಗಳನ್ನ ನೇರವೇರಿಸಲಾಯಿತು. ಇದನ್ನೂ ಓದಿ: ಇರಾನ್-ಇಸ್ರೇಲ್ ಯುದ್ಧದ ಬಳಿಕ ನೆತನ್ಯಾಹು-ಟ್ರಂಪ್ ಫಸ್ಟ್ ಮೀಟ್ – ಜು.7ರಂದು ವೈಟ್‌ಹೌಸ್‌ನಲ್ಲಿ ಮಹತ್ವದ ಭೇಟಿ