ನೀವು ಇರುವಲ್ಲಿಯೇ ಸುರಕ್ಷಿತವಾಗಿರಿ, ಬಾರ್ಡರ್ ದೇಶಗಳಿಗೆ ಹೋಗಬೇಡಿ: ಸುಧಾಕರ್

Public TV
1 Min Read

ಚಿಕ್ಕಬಳ್ಳಾಪುರ: ಉಕ್ರೇನ್‍ನಲ್ಲಿರೋ ಕನ್ನಡಿಗರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಈಗಾಗಲೇ ನಾನು ಹಾಗೂ ಸಿಎಂ ಕೇಂದ್ರ ವಿದೇಶಾಂಗ ಇಲಾಖೆ ಹಾಗೂ ಉಕ್ರೇನ್‍ನ ಭಾರತದ ರಾಯಭಾರಿ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಅಂತ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಾರೂ ಕೂಡ ನೀವಾಗೇ ನೀವೆ ತೀರ್ಮಾನ ಮಾಡಿಕೊಂಡು ರುಮೇನಿಯಾ, ಪೊಲೆಂಡ್ ಸೇರಿದಂತೆ ಇತರೆ ಬಾರ್ಡರ್ ಏರಿಯಾಗಳಿಗೆ ಹೋಗುವ ಪ್ರಯತ್ನ ಮಾಡಬೇಡಿ. ನಮ್ಮ ಭಾರತ ಸರ್ಕಾರ ವಿವಿಧ ಹಂತಗಳಲ್ಲಿ ಇತರೆ ದೇಶಗಳ ಜೊತೆ ಮಾತುಕತೆ ಮಾಡುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ:  ಉಕ್ರೇನ್‌ ಯುದ್ಧ ಭೀಕರತೆ ನಡುವೆಯೂ ಹಸೆಮಣೆ ಏರಿ ಜೋಡಿ ಸಂಭ್ರಮ

ನೀವು ಎಲ್ಲಿದ್ದೀರೋ ಅಲ್ಲೇ ಸುರಕ್ಷಿತವಾಗಿ ಇರಿ. ಕೆಲವೇ ದಿನಗಳಲ್ಲಿ ಕದನ ವಿರಾಮ ಆಗುವ ಅಪೇಕ್ಷೆ ನಮ್ಮದು.ಕದನ ವಿರಾಮದ ನಂತರೆ ಭಾರತಕ್ಕೆ ಬರುವವರನ್ನು ಕರೆತರಲು ಸರ್ಕಾರ ಬದ್ಧವಾಗಿದೆ. ಅಲ್ಲೇ ಉಳಿಯುವವರಿಗೆ ರಕ್ಷಣೆ ಕೊಡುವ ಕೆಲಸ ಸಹ ಮಾಡಲಿದ್ದೇವೆ. ವಿದ್ಯಾರ್ಥಿಗಳ ಪೋಷಕರಲ್ಲಿ ನಾನು ಮನವಿ ಮಾಡ್ತೇನೆ ಆತಂಕ ಬೇಡ, ಇದುವರೆಗೂ ಯಾವ ವಿದ್ಯಾರ್ಥಿಗೂ ತೊಂದರೆ ಆಗಿಲ್ಲ, ನಮ್ಮ ಸರ್ಕಾರ ವಿದ್ಯಾರ್ಥಿಗಳ ರಕ್ಷಣೆಗೆ ಬದ್ದವಾಗಿದೆ ಎಂದು ಅಭಯ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *