ಚಿಕ್ಕಬಳ್ಳಾಪುರ ರೇಪ್‌ ಕೇಸ್‌ | ಅನ್ಯಕೋಮಿನ ವ್ಯಕ್ತಿಯಿಂದ ಕೃತ್ಯ – ಸಂತ್ರಸ್ತೆ ನೆರವಿಗೆ ಧಾವಿಸಿದ ಮಹಿಳೆ ಹೇಳಿದ್ದೇನು?

Public TV
3 Min Read

– ಡ್ರಾಪ್ ಕೊಡುವ ನೆಪದಲ್ಲಿ ನಡೆದೇಹೋಯ್ತು ಕೃತ್ಯ
– ಹೊಸ ಬಟ್ಟೆ ತರ್ತೀನಿ ಅಂತ ಸ್ನೇಹಿತನನ್ನ ಕರೆಸಿ ಮತ್ತೆ ರೇಪ್‌

ಚಿಕ್ಕಬಳ್ಳಾಪುರ: ಆಕೆ ಬಿಕಾಂ ಪದವೀಧರೆ (BCom Graduate) ಕೆಲಸ ಹುಡುಕೋಣ ಅಂತ ಹಳ್ಳಿಯಿಂದ ನಗರಕ್ಕೆ ಬಂದಿದ್ಲು. ಆದ್ರೆ ಕೆಲಸ ಸಿಗಲಿಲ್ಲ ಹೀಗಾಗಿ ಮರಳಿ ಹಳ್ಳಿಯತ್ತ ನಡೆದುಕೊಂಡು ಹೋಗ್ತಿದ್ದ ಯುವತಿಗೆ ದಾರಿ ಮಧ್ಯೆ ಡ್ರಾಪ್ (Bike Drop) ಕೋಡೋದಾಗಿ ಹೇಳಿ ಕರೆದೊಯ್ದ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಪಾಪಿ ತಾನು ಮಾತ್ರವಲ್ಲದೇ ಸ್ನೇಹಿತನನ್ನ ಕರೆದುಕೊಂಡು ಹೋಗಿ ಮತ್ತೆ ಮತ್ತೆ ಆಕೆ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಇಡೀ ಸಮಾಜವೇ ತಲೆತಗ್ಗಿಸುವಂತಹ ಹೇಯ ಕೃತ್ಯ ನಡೆದಿದ್ದು ಚಿಕ್ಕಬಳ್ಳಾಪುರದಲ್ಲಿ. ಹೌದು. ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದ ಕಣಿವೆ ಪ್ರದೇಶದ ಬಡಾವಣೆಯೊಂದರಲ್ಲಿ ಕಾಮುಕನೊಬ್ಬ ಡ್ರಾಪ್ ಕೊಡುವ ನೆಪದಲ್ಲಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಡ್ರಾಪ್ ಕೊಡುವ ನೆಪದಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್, ಇಬ್ಬರು ಅರೆಸ್ಟ್

ಸಂತ್ರಸ್ತೆ ಚಿಕ್ಕಬಳ್ಳಾಪುರದ (Chikkaballapura) ಹಳ್ಳಿಯೊಂದರ ನಿವಾಸಿ. ಬಿಕಾಂ ಪಧವೀಧರೆಯಾಗಿದ್ದು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ಕೆಲಸ ಹುಡುಕಿಕೊಂಡೇ ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾಳೆ. ಕೆಲಸ ಸಿಗದೇ ಇದ್ದಾಗ ತಮ್ಮೂರಿಗೆ ತಮ್ಮೂರಿಗೆ ವಾಪಸ್ ಹೋಗೋಣ ಅಂತ ಚಿಕ್ಕಬಳ್ಳಾಪುರ ಗೌರಿಬಿದನೂರು ಮಾರ್ಗದಲ್ಲಿ ಹೆಜ್ಜೆ ಹಾಕಿದ್ದಳು. ಇದೇ ದಾರಿಯಲ್ಲಿ ಸಾಗುತ್ತಿದ್ದ ಚಿಕ್ಕಬಳ್ಳಾಪುರದ ಟ್ರ‍್ಯಾಕ್ಟರ್ ಮೆಕ್ಯಾನಿಕ್ ಸಿಖಂದರ್ ಎಂಬಾತ ರಸ್ತೆಯಲ್ಲಿ ಒಂಟಿ ಯುವತಿ ಕಂಡು ಡ್ರಾಪ್ ಕೊಡುವ ನೆಪದಲ್ಲಿ ಸ್ಕೂಟಿ ಹತ್ತಿಸಿಕೊಂಡಿದ್ದಾನೆ. ಸೀದಾ ಗೌರಿಬಿದನೂರು ಮಾರ್ಗದ ಕಣಿವೆ ಇಳಿತಿದ್ದಂತೆ ಬಡಾವಣೆಯೊಂದರೊಳಗೆ ಸ್ಕೂಟಿ ತಿರುಗಿಸಿ ಅಲ್ಲೇ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ಇದನ್ನೂ ಓದಿ: ಆರ್‌ಎಸ್‌ಎಸ್ ಬ್ಯಾನ್ ಮಾಡ್ಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? – ಪ್ರಿಯಾಂಕ್ ಖರ್ಗೆ

ʻಬಂಗಾರʼ ಬದುಕು ಕಸಿದ ಕಾಮುಕರು
ಇನ್ನೂ ಅತ್ಯಾಚಾರ ಮಾಡಿದ ಕಾಮುಕರು ಆಕೆಯ ಕಿವಿಯಲ್ಲಿದ್ದ ಬಂಗಾರದ ಒಲೆ ಕಸಿದುಕೊಂಡಿದ್ದಾರೆ. ನಂತರ ಆಕೆಗೆ ಹೊಸ ಬಟ್ಟೆ ತರುವುದಾಗಿ ಹೇಳಿ ಹೋಗಿದ್ದಾನೆ. ನಂತರ ಚಿಕ್ಕಬಳ್ಳಾಪುರಕ್ಕೆ ಹೋಗಿ ತನ್ನ ಸ್ನೇಹಿತ ಜನಾರ್ಧನಾಚಾರಿ ಎಂಬಾತನನ್ನು ಕರೆದುಕೊಂಡು ಬಂದು ಪುನಃ ಆಕೆಯನ್ನ ಅದೇ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮತ್ತೆ ಇಬ್ಬರು ಅತ್ಯಾಚಾರ ಎಸಗಿದ್ದಾರೆ.

ರಾತ್ರಿವರೆಗೆ ಶಾಕ್‌ನಲ್ಲೇ ಇದ್ದ ಯುವತಿ
ಎರಡು ಬಾರಿ ಅತ್ಯಾಚಾರ ಮಾಡಿದ ಆರೋಪಿಗಳು ಸೀದಾ ಅಕೆಯನ್ನ ಕರೆತಂದು ಕೊನೆಗೆ ಪೆಟ್ರೋಲ್ ಬಂಕ್‌ವೊಂದರ ಬಳಿ ಬಿಟ್ಟು ಎಸ್ಕೇಪ್ ಅಗಿದ್ದಾರೆ. ಘಟನೆಯಿಂದ ಶಾಕ್‌ಗೆ ಗುರಿಯಾಗಿ ರಾತ್ರಿ ಆದ್ರೂ ಅಲ್ಲೇ ಇದ್ದ ಯುವತಿ ಕಂಡು ಶಿಲ್ಪಗೌಡ ಎಂಬ ಮಹಿಳೆ ಈಕೆಯನ್ನು ವಿಚಾರಿಸಿ ಉಪಚರಿಸಿದಾಗ ಯುವತಿ ನಡೆದ ಘಟನೆ ವಿವರಿಸಿದ್ದಾಳೆ. ಈ ಸಂಬಂಧ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಸಂತ್ರಸ್ತ ಯುವತಿಗೆ ಚಿಕಿತ್ಸೆ ನೀಡಿ ಮಹಿಳಾ ಸ್ವಾಧಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತ – ಸಿಬಿಐ ತನಿಖೆಗೆ ಸುಪ್ರೀಂ ಆದೇಶ

ಘಟನೆ ಕುರಿತು ʻಪಬ್ಲಿಕ್‌ ಟಿವಿʼಜೊತೆಗೆ ಮಾತನಾಡಿರುವ ಮಹಿಳೆ ಶಿಲ್ಪಗೌಡ, ಮುಸ್ಲಿಂ ವ್ಯಕ್ತಿಯೊಬ್ಬ ನಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ, ಡ್ರಾಪ್‌ ಕೊಡ್ತೀನಿ ಅಂತ ಆಕೆಯನ್ನ ಕರೆದುಕೊಂಡು ಹೋಗಿದ್ದಾನೆ. ಅಲ್ಲೊಂದು ಅಜ್ಜಿ ಮನೆ ಬಳಿ ಕೂರಿಸಿದ್ದಾನೆ. ನಮ್ಮ ತೋಟದಲ್ಲೇ ಅವರ ತಂದೆ-ತಾಯಿ ಕೆಲಸ ಮಾಡ್ತಿದ್ದಾರೆ, ಈಕೆಗೆ ಮೆಂಟಲ್‌ ಕಂಡೀಷನ್‌ ಸರಿಯಿಲ್ಲ ಅಂತ ಕೂರಿಸಿರುತ್ತಾನೆ. ಬಳಿಕ ಸ್ನೇಹಿತನನ್ನ ಕರೆದುಕೊಂಡು ಬಂದು ಕಣಿವೆ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡ್ತಾರೆ. ಆಕೆ ಕಿರುಚಿದಾಗ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ. ಚಿನ್ನ ಕಸಿದು ಪೆಟ್ರೋಲ್‌ ಬಂಕ್‌ ಬಳಿ ಆಕೆಯನ್ನ ಬಿಟ್ಟು ಹೋಗಿದ್ದಾರೆ. ಶಾಕ್‌ನಲ್ಲಿದ್ದ ಯುವತಿ ಇಡೀ ರಾತ್ರಿ ಅಲ್ಲೇ ಮಲಗಿದ್ದಾಳೆ. ಅಸಹಾಯಕತೆಯಿಂದ ಏನೂ ಮಾಡೋದಕ್ಕೆ ಆಗಿಲ್ಲ. ಮರುದಿನ ಉಪಚರಿಸಿದ ನಂತರ ಆಕೆ ಘಟನೆ ವಿವರಿಸಿದ್ದಾಳೆ ಎಂದು ತಿಳಿಸಿದ್ದಾರೆ. ಬಳಿಕ ಪೊಲೀಸರು 24 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ್ದಾರೆ.

Share This Article