-ರೈತರ ಸಂಕಷ್ಟಕ್ಕೆ ಸ್ಪಂದಿಸಿದ ವರುಣರಾಯ
ಚಿಕ್ಕಬಳ್ಳಾಪುರ: ಜಿಲ್ಲೆಯ ರೈತರು ನೀರು ಕಂಡರೆ ಸಾಕು ಚಿನ್ನದ ರಾಶಿ ಕಂಡಷ್ಟೆ ಸಂತಸಪಡುತ್ತಾರೆ. ಮೊದಲೇ ನದಿ, ನಾಲೆ ಸೇರಿದಂತೆ ಶಾಶ್ವತ ನೀರಿನ ಮೂಲಗಲೇ ಇಲ್ಲ, ಇಲ್ಲಿಯ ರೈತರ ನೀರಿನ ವೀಕ್ ನೇಸ್ ಬಳಸಿಕೊಳ್ಳುವ ಜನಪ್ರತಿನಿಧಿಗಳು ಆ ನೀರು ತರ್ತಿವಿ, ಈ ನೀರು ತರ್ತಿವಿ ಎಂದು ಹೇಳಿ ಚುನಾವಣೆಗಳಲ್ಲಿ ಮತಗಿಟ್ಟಿಸಿಕೊಳ್ಳುತ್ತಾರೆ. ಆದರೆ ಇದುವರೆಗೂ ಯಾವ ನೀರನ್ನು ತರಲಿಲ್ಲ. ಕಳೆದ ವಾರದಿಂದ ಸುರಿದ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶೇ.40 ಕೆರೆ ಕುಂಟೆಗಳು ನೀರಿನಿಂದ ತುಂಬಿ ಕಂಗೊಳಿಸುತ್ತಿವೆ.
ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿದ್ರೂ, ಚಿಕ್ಕಬಳ್ಳಾಪುರದಲ್ಲಿ ನೀರಿಗೆ ಹಾಹಾಕಾರ, ಕೃಷಿ ತೋಟಗಾರಿಕೆ ಇರಲಿ, ಕುಡಿಯಲು ನೀರು ಇಲ್ಲದೆ ಜನ ಪರಿತಪಿಸುತ್ತಿದ್ದಾರೆ. ಇದನ್ನೇ ಬಳಸಿಕೊಳ್ಳುವ ಇಲ್ಲಿಯ ರಾಜಕಾರಣಿಗಳು ಜಿಲ್ಲೆಗೆ ಎತ್ತಿನಹೊಳೆ, ಎಚ್.ಎನ್.ವ್ಯಾಲಿ, ಮೇಕೆದಾಟು ಸೇರಿದಂತೆ ಅದು ತರ್ತಿವಿ ಇದು ತರ್ತಿವಿ ಅಂತ ಅಂಗೈಯಲ್ಲೆ ಅರಮನೆ ತೋರಿಸಿ ಮತಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ನೀರು ಮಾತ್ರ ತರಲೇ ಇಲ್ಲ, ಆದ್ರೆ ಎಲ್ಲರೂ ಕೈ ಕೊಟ್ರು ಮಳೆರಾಯ ಮಾತ್ರ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದು ಮೊನ್ನೆ ಸುರಿದ ಮಳೆಗೆ ಕೆರೆ ಕುಂಟೆಗಳು ನೀರಿನಿಂದ ಕಂಗೊಳಿಸುತ್ತಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯ 200 ಕೆರೆಗಳಲ್ಲಿ 50ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿದು ಬಂದಿದ್ದು, ರೈತರ ಮೊಗದಲ್ಲಿ ಹರ್ಷ ಮೂಡುವಂತೆ ಮಾಡಿದೆ. ಇಷ್ಟು ದಿನ ನೀರಿಲ್ಲದಿರುವಾಗ ಕೆಲವು ರೈತರು ಕೆರೆ ಕುಂಟೆಗಳ ಅಂಗಳವನ್ನು ಒತ್ತುವರಿ ಮಾಡಿಕೊಂಡು ಬೆಳೆ ಇಟ್ಟಿದ್ದಾರೆ. ಕೆರೆಗಳ ಒತ್ತುವರಿ ತೆರವು ಮಾಡಿ ಕೆರೆಗಳ ರಕ್ಷಣೆಗೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಸಗೊಬ್ಬರಕ್ಕಾಗಿ ಹಗಲು ರಾತ್ರಿ ಕ್ಯೂನಲ್ಲಿ ನಿಲ್ಲುತ್ತಿರುವ ರೈತರು
ಕೆರೆಗಳಲ್ಲಿ ನೀರಲ್ಲ ನೀರು ಬರಲ್ಲ ಅಂತ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೆಲವು ಕೆರೆಗಳ ಅಂಗಳವನ್ನು ವಿವಿಧ ಇಲಾಖೆಗಳ ಕಚೇರಿ ಕಟ್ಟಡ ನಿರ್ಮಾಣಕ್ಕೆ ಎರವಲು ನೀಡಿದೆ. ಆದ್ರೆ ಈಗ ಮಳೆಯಾಗಿ ಕೆರೆಗಳಿಗೆ ನೀರು ಬರುತ್ತಿರುವದರಿಂದ ಸರ್ಕಾರ ಕೆರೆಗಳ ರಕ್ಷಣೆಗೆ ಮುಂದಾಗಬೇಕು ಜಿಲ್ಲೆಯ ಜನರು ಕೇಳುತ್ತಿದ್ದಾರೆ.