ಅನರ್ಹ ಶಾಸಕ ಸುಧಾಕರ್‌ರಿಂದ ಕ್ಷೇತ್ರದ ಜನತೆಗೆ ಗಿಫ್ಟ್ ಮೇಲೆ ಗಿಫ್ಟ್

Public TV
1 Min Read

ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಡಾ.ಸುಧಾಕರ್ ಅವರು ಕ್ಷೇತ್ರದ ಜನತೆಗೆ ಗಿಫ್ಟ್ ಮೇಲೆ ಗಿಫ್ಟ್ ನೀಡುತ್ತಿದ್ದಾರೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಲಿ ಅಧ್ಯಕ್ಷ ಡಾ.ಕೆ.ಸುಧಾಕರ್ ಅವರು ಗೌರಿ ಹಬ್ಬದ ನಿಮಿತ್ತ ಗುರುವಾರವಷ್ಟೇ ಮಹಿಳೆಯರಿಗೆ ಅರಿಶಿಣ, ಕುಂಕುಮ, ಬಳೆ ಸಮೇತ ಸೀರೆ ನೀಡಿದ್ದರು. ಈ ಬೆನ್ನಲ್ಲೇ ಇಂದು ಕ್ಷೇತ್ರದ ಯುವಕರಿಗೆ ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ: ಅನರ್ಹ ಶಾಸಕ ಸುಧಾಕರಿಂದಲೂ ಮಹಿಳೆಯರಿಗೆ ಸೀರೆ, ಕುಂಕುಮ, ಬಳೆ ವಿತರಣೆ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳ ಹಾಗೂ ನಗರದಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲು ಮುಂದಾಗಿರುವ ಯುವಕರಿಗೆ ಗಣೇಶ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಸುಧಾಕರ್ ಅವರು ಕಳೆದ 2 ವರ್ಷಗಳಿಂದಲೂ ಮಣ್ಣಿನ ಗಣಪಗಳನ್ನು ಉಡುಗೊರೆಯಾಗಿ ನೀಡುತ್ತಾ ಬಂದಿದ್ದಾರೆ. ಅದರಂತೆ ಈ ಬಾರಿಯೂ ಗಣೇಶನ ಮೂರ್ತಿಗಳನ್ನು ವಿತರಣೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಸುಧಾಕರ್, ಪ್ರತಿ ವರ್ಷದಂತೆ ಈ ಬಾರಿಯೂ ಕ್ಷೇತ್ರದ ಯುವಕರಿಗೆ ಪರಿಸರ ಸ್ನೇಹಿ ಗಣೇಶ್ ಮೂರ್ತಿಗಳನ್ನು ಉಡಗೊರೆಯಾಗಿ ನೀಡುತ್ತಿದ್ದೇನೆ. ರಾಜ್ಯದ ಎಲ್ಲಾ ಜನರು ಸಹ ಮಣ್ಣಿನ ಗಣಪನನ್ನೇ ಪ್ರತಿಷ್ಠಾಪನೆ ಮಾಡಿ ಪರಿಸರದ ಜೊತೆಗೆ ನದಿ-ಜಲಮೂಲಗನ್ನ ಉಳಿಸಿಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಮೂರ್ತಿಗಳನ್ನು ಕೂರಿಸಬಾರದರು. ಅಂತಹ ಗಣೇಶ ಮೂರ್ತಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *