16 ಕೋಟಿ ಬೆಲೆಯ ಇಂಜೆಕ್ಷನ್‍ಗೆ ಬಡದಂಪತಿಯ ಪರದಾಟ

Public TV
1 Min Read

ಚಿಕ್ಕಬಳ್ಳಾಪುರ: ಹೆತ್ತ ಮಗನನ್ನು ಉಳಿಸಿಕೊಳ್ಳೋಕೆ 16 ಕೋಟಿ ದುಬಾರಿ ಬೆಲೆಯ ಇಂಜೆಕ್ಷನ್‍ಗೆ ಬಡದಂಪತಿ ಪರದಾಡುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಬಳಿ ಧನಸಹಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಲ್ಲಸಂದ್ರ ಗ್ರಾಮದ ದಂಪತಿ ನಂದೀಶ್ ಹಾಗೂ ಸೌಮ್ಯಲತಾ ದಂಪತಿಯ ಮಗ ಯಶ್ವಿಕ್‍ಗೆ ಎಸ್‍ಎಂಎ ಖಾಯಿಲೆ ಆವರಿಸಿದೆ. ಎಸ್‍ಎಂಎ ಅಂದರೆ ಸ್ಪೈನಲ್ ಮಸ್ಕುಲರ್ ಅಟ್ರೋಫಿ ಇದು ದೇಹದ ಸ್ನಾಯುಗಳನ್ನ ದುರ್ಬಲಗೊಳಿಸುವ ನರಸಂಬಂಧಿತ ಕಾಯಿಲೆಯಾಗಿದೆ. ಇದನ್ನೂ ಓದಿ: ಕಿರಿಕ್ ಪ್ರಶ್ನೆಯನ್ನು ಕೇಳಿದ ಅಭಿಮಾನಿಯ ಬಾಯಿ ಮುಚ್ಚಿಸಿದ ಸಮಂತಾ

1000 ಮಕ್ಕಳಲ್ಲಿ ಒಬ್ಬರಿಗೆ ಈ ಖಾಯಿಲೆ ತಗಲುವ ಸಾಧ್ಯತೆಯಿದ್ದು, ಈ ಕಾಯಿಲೆಗೆ ಗುರಿಯಾದ ಮಗು 2 ವರ್ಷಕ್ಕಿಂತ ಹೆಚ್ಚು ಬದುಕುವುದಿಲ್ಲ ಅಂತ ಹೇಳಲಾಗುತ್ತೆ. ಇನ್ನೂ ಈ ಖಾಯಿಲೆ ಗುಣಪಡಿಸಲು ಇರುವ ಏಕೈಕ ಔಷಧಿ ಝೊಲ್ಗೆನ್ಸಾ ಇಂಜೆಕ್ಷನ್. ಇದು ಅಮೇರಿಕಾದಲ್ಲಿ ಮಾತ್ರ ಲಭ್ಯವಿದ್ದು, ಒಂದು ಇಂಜೆಕ್ಷನ್‍ನ ಬೆಲೆ 16 ಕೋಟಿ ರೂಪಾಯಿ ಇದೆ. ಇದನ್ನೂ ಓದಿ: ಈ ಹುಡುಗಿಗೆ ಜಿಮ್ ನಲ್ಲಿ ಸಿಕ್ತಂತೆ ನಟಿಸೋಕೆ ಅವಕಾಶ

ಗ್ರಾಮ ಪಂಚಾಯತಿ ಕರ ವಸೂಲಿಗಾರನಾಗಿರುವ ಯಶ್ವಿಕ್ ತಂದೆ ತಾಯಿಗೆ ಈ ಹಣ ಭರಿಸಲು ಶಕ್ತರಾಗಿಲ್ಲ. ಹೀಗಾಗಿ ಸಾರ್ವಜನಿಕರು ಸಹಾಯ ಮಾಡುವಂತೆ ಬಡ ದಂಪತಿ ಅಂಗಲಾಚುತ್ತಿದ್ದಾರೆ. ಅವರ ಮೊಬೈಲ್ ಸಂಖ್ಯೆ 9148495959 ಆಗಿದ್ದು ಯುಪಿಐ ಮೂಲಕ ವರ್ಗಾವಣೆ ಮಾಡಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *