ಚಿಕ್ಕಬಳ್ಳಾಪುರ | ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಪಲ್ಟಿ – 9 ವರ್ಷದ ಬಾಲಕಿ ಸಾವು

1 Min Read

ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು (Car ) ಡಿಕ್ಕಿಯಾಗಿ ಪಲ್ಟಿಯಾದ (Accident) ಪರಿಣಾಮ 9 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಕೊತ್ತನೂರು ಗ್ರಾಮದ ಬಳಿ ನಡೆದಿದೆ.

ಮೃತ ಬಾಲಕಿಯನ್ನು ಅಂಕಿತಾ (9) ಎಂದು ಗುರುತಿಸಲಾಗಿದೆ. ಬಾಲಕಿ ಕಲಬುರಗಿ ಜಿಲ್ಲೆಯ ಚಿಂಚೋಳಿ ಮೂಲದ ರಾಜೇಂದ್ರ ಹಾಗೂ ಭಾಗ್ಯಮ್ಮ ದಂಪತಿ ಮಗಳು ಎಂದು ತಿಳಿದುಬಂದಿದೆ. ಕುಟುಂಬ ಹೊಸಕೋಟೆಯಲ್ಲಿ ವಾಸವಾಗಿತ್ತು. ಜಾತ್ರೆಗೆ ತೆರಳಿದ್ದ ಭಾಗ್ಯಮ್ಮ ಸಂಬಂಧಿಕ ಮಹೇಶ್ ಎಂಬವರಿಗೆ ಸೇರಿದ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಮಕ್ಕಳೊಂದಿಗೆ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಲವ್ ಜಿಹಾದ್ ಕೇಸಲ್ಲಿ ಜಿಮ್ ಟ್ರೈನರ್‌ಗೆ ಸಂಕಷ್ಟ – ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ ಸಂತ್ರಸ್ತೆ

ಲಾರಿ ಒವರ್ ಟೇಕ್ ಮಾಡುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಹಾರಿ ಪಲ್ಟಿಯಾಗಿದೆ. ಈ ವೇಳೆ ಬಾಲಕಿ ಸಾವನ್ನಪ್ಪಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಪರಿಚಿತ ವಾಹನ ಡಿಕ್ಕಿ – ತೀವ್ರವಾಗಿ ಗಾಯಗೊಂಡು 3 ವರ್ಷದ ಗಂಡು ಚಿರತೆ ಸಾವು

Share This Article