ರಾಮಲಲ್ಲಾ ಪ್ರತಿಷ್ಠಾಪನೆ, ಇತರೆ ಪೂಜೆಗಳ ಬಗ್ಗೆ ಪ್ರಧಾನ ಅರ್ಚಕರು ವಿವರಿಸಿದ್ದು ಹೀಗೆ

Public TV
2 Min Read

ಅಯೋಧ್ಯೆ: 2024 ರ ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾಪನೆ (Pran Prathistha Ceremony) ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿವೆ. ಅಯೋಧ್ಯೆ ನಗರದಲ್ಲಿ ಆಸೀನನಾಗುವ ರಾಮನಿಗೆ ಭವ್ಯವಾದ ಮಂದಿರವು ಸಿದ್ಧವಾಗುತ್ತಿದೆ. ಈ ಸಂಬಂಧ ಅಂದು ಏನೇನು ಪೂಜೆಗಳು ನಡೆಯುತ್ತವೆ ಎಂಬುದನ್ನು ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ (Acharya Satyendra Das) ಅವರು ಮಾಹಿತಿ ನೀಡಿದ್ದಾರೆ.

ಪೂಜೆಗೆ ಸಂಬಂಧಿಸಿದ ಮಾಹಿತಿಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡ ಅವರು, ಪ್ರಾಣ ಪ್ರತಿಷ್ಠಾಪನಾ ಒಂದು ಸಮಗ್ರ ಆಚರಣೆಯಾಗಿದೆ. ಹೀಗಾಗಿ ಪೂಜೆಗಳು ಜನವರಿ 15 – 16 ರಿಂದಲೇ ಪ್ರಾರಂಭವಾಗಲಿದೆ. ಜನವರಿ 14 ರಂದು ಧನುರ್ಮಾಸ  ಕೊನೆಗೊಳ್ಳುವ ಕಾರಣ ಆಚರಣೆಗಳು ಆರಂಭವಾಗಲಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಪ್ರಧಾನಿ ಮೋದಿ 11 ದಿನಗಳ ವ್ರತದ ಮಹತ್ವ ಏನು?

ಧನುರ್ಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಹೀಗಾಗಿ ಅದು ಮುಗಿದ ನಂತರವೇ ರಾಮ ಲಲ್ಲಾನನ್ನು ಪ್ರತಿಷ್ಠಾಪಿಸಲಾಗುತ್ತದೆ. ಬಾಲರಾಮನ ಪ್ರತಿಮೆಯನ್ನು ನಗರ ಪ್ರವಾಸಕ್ಕಾಗಿ ತೆಗೆದುಕೊಳ್ಳಲಾಗುತ್ತದೆ. ಬಳಿಕ ಇತರೆ ಧಾರ್ಮಿಕ ವಿಧಿ-ವಿಧಾನಗಳೂ ನಡೆಯಲಿವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಗುಜರಾತ್‌ನಿಂದ ಅಯೋಧ್ಯೆಗೆ ಆಗಮಿಸಿದೆ 500 ಕೆಜಿಯ ಬೃಹತ್ ನಗಾರಿ

ಜನವರಿ 22 ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಬ ಮೋದಿಯವರು ಈಗಾಗಲೇ ವ್ರತ ಕೈಗೊಂಡಿದ್ದಾರೆ. ಇಂದು ವ್ರತ ಆಚರಿಸಲಿರುವ ಪ್ರಧಾನಿಯವರು ಈ ಸಂಬಂಧ ಆಡಿಯೋ ಸಂದೇಶವೊಂದನ್ನು ಕಳುಹಿಸಿದ್ದಾರೆ. ಅದರಲ್ಲಿ ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠೆಗೆ ಕೇವಲ 11 ದಿನಗಳು ಉಳಿದಿವೆ. ಶುಭ ಸಮಾರಂಭಕ್ಕೆ ಸಾಕ್ಷಿಯಾಗುವ ಸೌಭಾಗ್ಯ ನನ್ನದು. ಸಮಾರಂಭದಲ್ಲಿ ಭಾರತದ ಜನರನ್ನು ಪ್ರತಿನಿಧಿಸಲು ಭಗವಂತ ನನ್ನನ್ನು ಕೇಳಿದ್ದಾನೆ. ಅದನ್ನು ಗಮನದಲ್ಲಿಟ್ಟುಕೊಂಡು ನಾನು ಇಂದಿನಿಂದ 11 ದಿನಗಳ ವಿಶೇಷ ಆಚರಣೆಯನ್ನು ಪ್ರಾರಂಭಿಸುತ್ತಿದ್ದೇನೆ. ಇದಕ್ಕಾಗಿ ನಾನು ನಿಮ್ಮೆಲ್ಲರ ಆಶೀರ್ವಾದವನ್ನು ಕೋರುತ್ತೇನೆ. ಈ ಕ್ಷಣದಲ್ಲಿ ನನ್ನ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ತುಂಬಾ ಕಷ್ಟ, ಆದರೆ ನಾನು ನನ್ನ ಕಡೆಯಿಂದ ಪ್ರಯತ್ನಿಸಿದ್ದೇನೆ ಎಂದಿದ್ದಾರೆ.

Share This Article