ಹರ್ಷ ಸ್ವಂತದ, ಸ್ವಾರ್ಥದ ಹಿನ್ನೆಲೆ ಕೊಲೆಯಾಗಿಲ್ಲ, ಅವನ ಸಾವು ವ್ಯರ್ಥ ಆಗಬಾರದು: ಮುತಾಲಿಕ್

Public TV
2 Min Read

ಶಿವಮೊಗ್ಗ: ಇತ್ತೀಚೆಗೆ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷ ಮನೆಗೆ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ನೀಡಿದ್ದಾರೆ.

ಬಳಿಕ ಮಾತನಾಡಿದ ಅವರು, ಕೊಲೆ ಮಾಡಿದವರನ್ನು ಎನ್‍ಕೌಂಟರ್ ಮಾಡಿ. ಏಕೆ ಮಾಡಬಾರದು, ಬೇರೆಯವರಿಗೆ ಹೊಡೀತೀರಾ, ಇವರನ್ನ ಸಾಯಿಸಿ, ಕೋಕಾ ಕಾಯ್ದೆ ಹಾಕಿ. ನಮ್ಮ ಸಹನೆ ಮೀರಿ ಹೋಗಿದೆ. 10 ವರ್ಷ ಕಾಯಲ್ಲ, ಕಾಯೋಕೂ ಆಗಲ್ಲ. ವರ್ಷದೊಳಗೆ ತೀರ್ಪು ಬರಬೇಕು ಎಂದು ಕಿಡಿಕಾರಿದರು.

ಕಾಂಗ್ರೆಸ್ ಇರುವುದೇ ಮುಸ್ಲಿಮರಿಗಾಗಿ. ಸಿದ್ದರಾಮ್ಮಯ್ಯ ಸಿಎಂ ಆಗಿದ್ದಾಗ 250 ಪಿಎಫ್‍ಐ ಕೇಸ್ ವಾಪಸ್ ಪಡೆದಿದ್ದರು. ಸಿದ್ದರಾಮಯ್ಯನವರೇ ನಿಮ್ಮದು ಇದೇ ದೇಶ, ಅವರು ನಿಮ್ಮನ್ನೂ ಬಿಡಲ್ಲ. ಸಿದ್ದು ನಿಮ್ಮ ಹೆಸರಲ್ಲೇ ರಾಮ ಇದ್ದಾನೆ, ಅವರು ನಿಮ್ಮನ್ನು ಬಿಡಲ್ಲ ಎಂದು ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಚಿಕ್ಕಬಳ್ಳಾಪುರದ 7 ಮಂದಿ ವಿದ್ಯಾರ್ಥಿಗಳ ಪರದಾಟ

ಹರ್ಷ ಸ್ವಂತದ, ಸ್ವಾರ್ಥದ ಹಿನ್ನೆಲೆ ಕೊಲೆಯಾಗಿಲ್ಲ. ಅವನ ಸಾವು ವ್ಯರ್ಥ ಆಗಬಾರದು. ಹಣ, ಹುಡುಗಿ, ಜಮೀನು ವಿಚಾರದಲ್ಲಿ ಹರ್ಷ ಕೊಲೆಯಾಗಿಲ್ಲ. ಹಿಂದುತ್ವದ ಹಿನ್ನೆಲೆ ಕೊಲೆ ಆಗಿದ್ದು, ಅವನು ಹಿಂದೂ ಕಾರ್ಯಕರ್ತ. ಬೇರೆ ಕೊಲೆ ಕೇಸ್ ತರ 302 ಕೇಸ್ ಹಾಕಿ ಕೈ ತೊಳೆದುಕೊಳ್ಳಬಾರದು. ರಾಕ್ಷಸಿ ಸ್ವರೂಪದಲ್ಲಿ ಹರ್ಷನ ಕೊಲೆಯಾಗಿದೆ. ತರಬೇತಿ ಪಡದೆವರೇ ಕೊಲೆ ಮಾಡಿದ್ದಾರೆ. ಅವರ ಮಧ್ಯೆ ದ್ವೇಷ ಇತ್ತು ಎಂದು ಹೇಳಿ ಕೇಸ್ ಮುಚ್ಚಿಹಾಕಲು ಬಿಡಲ್ಲ. ಅವರ ಹಿಂದೆ ಇರುವ ಇಸ್ಲಾಮಿಕ್ ಶಕ್ತಿಯೂ ಇದೆ, ಅವರನ್ನೂ ಬಂಧಿಸಬೇಕು ಎಂದು ಮುತಾಲಿಕ್ ಆಕ್ರೋಶ ಹೊರಹಾಕಿದರು.

ಡಿಜೆ ಹಳ್ಳಿ-ಕೆಜೆ ಹಳ್ಳಿಯಲ್ಲಿ ಪೊಲೀಸ್ ಸ್ಟೇಷನ್, ಮನೆ ಸುಟ್ಟರೂ ಜಾಮೀನು ಪಡೆದು ಹೊರಗಿದ್ದಾರೆ. ರುದ್ರೇಶ್, ರಾಜು, ಕುಟ್ಟಪ್ಪ ಕೊಂದವರೂ ಜಾಮೀನು ಪಡೆದು ಹೊರಗಡೆ ಓಡಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ಜಾಮೀನು ನೀಡುವ ಸೆಕ್ಷನ್ ಹಾಕಿದರೆ ಹಿಂದೂ ಸಮಾಜ ಬಿಡಲ್ಲ. ಎಸ್.ಡಿ.ಪಿ.ಐ, ಪಿ.ಎಫ್.ಐ. ಎಸ್.ಎಫ್.ಐ ಯಾರೇ ಆದರೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅವರು ಸಂವಿಧಾನ, ಕೋರ್ಟ್ ಗೆ ಬೆಲೆ ನೀಡುವಂತೆ ಮಾಡಿ ಎಂದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವೆಬ್ ಪೋರ್ಟಲ್ ಪ್ರಾರಂಭ

ಹಿಜಬ್ ಸಂಬಂಧ ನ್ಯಾಯಾಲಯಕ್ಕೆ ಹೋದವರು ಯಾರು. ಕೋರ್ಟ್ ಆದೇಶ ಉಲ್ಲಂಘಿಸಿದ್ದು ಯಾರು?. 144 ಸೆಕ್ಷನ್ ಧಿಕ್ಕರಿಸಿ ಆಯ್ತು, ಷರಿಯತ್, ಕುರಾನ್ ಮುಖ್ಯ ಅಂದ್ರೆ ನಿಮ್ಮ ದೇಶಕ್ಕೆ ಹೋಗಬಹುದು. ಶವಯಾತ್ರೆಯಲ್ಲಿ ಭಾಗಿಯಾದ ಕಾರ್ಯಕರ್ತರ ಮೇಲೆ ಕೇಸ್ ಹಾಕಂಗಿಲ್ಲ. ನಮಗೆ ಕಣ್ಣೀರಾಕಲು ಅವಕಾಶ ಇಲ್ವಾ, ನಮ್ ಕೈಯಲ್ಲಿ ಮಚ್ವು, ಲಾಂಗ್ ಇರಲಿಲ್ಲ ಎಂದು ಗರಂ ಆದರು.

Share This Article
Leave a Comment

Leave a Reply

Your email address will not be published. Required fields are marked *