ಜಿಎಸ್‌ಟಿ ಮಾಡಿರೋದು ಕೇಂದ್ರ ಸರ್ಕಾರ – ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್‌ ನೋಟಿಸ್‌ ವಿಚಾರಕ್ಕೆ ಸಿಎಂ ರಿಯಾಕ್ಷನ್‌

Public TV
2 Min Read

ಮೈಸೂರು: ಜಿಎಸ್‌ಟಿ (GST) ಮಾಡಿರೋದು ಕೇಂದ್ರ ಸರ್ಕಾರ, ಜಿಎಸ್‌ಟಿ ಕೌನ್ಸಿಲ್‌ ಕೇಂದ್ರ ಸರ್ಕಾರದ ಅಧೀನದಲ್ಲೇ ಇರೋದು. ತೆರಿಗೆ ಹಾಕುವುದೂ ಅವರೇ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಇದನ್ನೂ ಓದಿ: ಜಿಎಸ್‌ಟಿ ಸಂಗ್ರಹಣೆಯಲ್ಲಿ ಪ್ರಥಮ ಸ್ಥಾನ ಗಳಿಸಿ – ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸಿಎಂ ಕರೆ

ಹೌದು. ಪ್ರಧಾನಿ ಮೋದಿ (Narendra Modi( ಕನಸಿನ ಯೋಜನೆ ಡಿಜಿಟಲ್ ಇಂಡಿಯಾದ ಯುಪಿಐ (UPI) ಪೇಮೆಂಟ್‌ಗೆ ಇತ್ತೀಚೆಗೆ ವಿಘ್ನ ಎದುರಾಗಿದೆ. ಬೇಕರಿ, ಟೀ-ಕ್ಯಾಂಡಿಮೆಂಟ್ಸ್, ತರಕಾರಿ, ಬೀಡ, ಹೂವಿನ ಅಂಗಡಿ, ಹಾಲು ಮಾರೋವ್ರು, ಡಾಬಾದವರು. ಹೀಗೆ.. ಎಲ್ಲರಿಗೂ ಯುಪಿಐ ವಹಿವಾಟು ಆಧರಿಸಿ ಲಕ್ಷಲಕ್ಷ ಟ್ಯಾಕ್ಸ್ (Tax) ಕಟ್ಟುವಂತೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಈ ಬೆನ್ನಲ್ಲೇ ಬಿಹಾರದ ಚುನಾವಣೆಗೆ ರಾಜ್ಯದಲ್ಲಿ ಜಿಎಸ್‌ಟಿ ವಸೂಲಿ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಬಿಜೆಪಿ ಮಾಡಿದೆ. ಇದಕ್ಕೆ ಸಿಎಂ ತಿರುಗೇಟು ನೀಡಿದ್ದು, ಕೇಂದ್ರ ಸರ್ಕಾರದ ಮೇಲೆಯೇ ಗೂಬೆ ಕೂರಿಸಿದ್ದಾರೆ.

ಸಣ್ಣ ವ್ಯಾಪಾರಸ್ಥರಿಗೂ ಲಕ್ಷ ಲಕ್ಷ ನೋಟಿಸ್‌ ನೀಡಿದ್ದಾರೆ ಅನ್ನೋ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಜಿಎಸ್‌ಟಿ ಮಾಡಿರೋದು ಕೇಂದ್ರ ಸರ್ಕಾರ. ಜಿಎಸ್‌ಟಿ ಮಂಡಳಿ ಕೇಂದ್ರದ ಅಧೀನದಲ್ಲಿದೆ. ಜಿಎಸ್‌ಟಿ ಹಾಕುವುದೂ ಕೇಂದ್ರ ಸರ್ಕಾರವೇ (Central Government). ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತನಾಡ್ತೀವಿ. ನಮ್ಮ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೂ ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ನಾನು ಅವಮಾನ ಮಾಡಿಲ್ಲ, ನಮ್ಮ ಸಂಬಂಧ ಕೆಡಿಸಲು ಬಿಜೆಪಿ ಕುತಂತ್ರ: ಸಿದ್ದರಾಮಯ್ಯ

ಬಹಿರಂಗ ಚರ್ಚೆಗೆ ʻಸಿದ್ಧʼ
ಇನ್ನೂ ಗ್ಯಾರಂಟಿ ಕುರಿತ ಬಿಜೆಪಿ ಟೀಕೆಗೆ ಉತ್ತರ ಕೊಟ್ಟ ಸಿದ್ದರಾಮಯ್ಯ, ಬಿಜೆಪಿ ಹೇಳೋದು ಬರೀ ಸುಳ್ಳು. ಗ್ಯಾರಂಟಿ ಯೋಜನೆಯನ್ನು ಯಾಕೆ ಬಿಜೆಪಿ ಕಾಪಿ ಮಾಡಿದೆ. ಅನೇಕ ಬಾರಿ ಬಿಜೆಪಿ ಅವರನ್ನ ಅಭಿವೃದ್ಧಿ ವಿಚಾರವಾಗಿ ಬಹಿರಂಗ ಚರ್ಚೆಗೆ ಕರೆದಿದ್ದೇನೆ, ಅವರು ಬಂದಿಲ್ಲ. ಸುಳ್ಳು ಹೇಳುವವರು ಯಾವತ್ತೂ ಚರ್ಚೆಗೆ ಬರಲ್ಲ. ಅವರು ಬಂದ್ರೆ ನಾನು ಚರ್ಚೆಗೆ ರೆಡಿ ಎಂದು ಸವಾಲು ಎಸೆದರು.

ಇದೇ ವೇಳೆ, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ರನ್ನ ಪಕ್ಕದಲ್ಲೇ ನಿಲ್ಲಿಸಿಕೊಂಡು ನಿನ್ನೆಯ ಘಟನೆಗೆ ಸ್ಪಷ್ಟೀಕರಣ ಕೊಟ್ಟರು. ನಾನು ಡಿಕೆ ಶಿವಕುಮಾರ್‌ಗೆ ಅವಮಾನ ಮಾಡಿಲ್ಲ. ಅವರು ಸಭೆಯಲ್ಲಿ ಇಲ್ಲದ ಕಾರಣ ಅವರ ಹೆಸರು ಹೇಳಲಿಲ್ಲ ಅಷ್ಟೆ. ಇದರಲ್ಲಿ ಅವಮಾನದ ಪ್ರಶ್ನೆ ಎಲ್ಲಿಂದ ಬಂತು? ಬಿಜೆಪಿ ನನ್ನ ಮತ್ತು ಡಿಸಿಎಂ ಸಂಬಂಧ ಕೆಡಿಸಿ ಅದರ ರಾಜಕೀಯ ಲಾಭ ಪಡೆಯುವ ಭ್ರಮೆಯಲ್ಲಿ ಇದ್ದಾರೆ ಅಂತ ಕಿಡಿ ಕಾರಿದರು. ಇದನ್ನೂ ಓದಿ: ಡಿಜಿಟಲ್ ಪೇಮೆಂಟ್ ಕೋಲಾಹಲ – ಲಕ್ಷ, ಲಕ್ಷ ಟ್ಯಾಕ್ಸ್ ನೋಟಿಸ್‌ ಕಂಡು ಹೌಹಾರಿದ ಜನ; ಕ್ಯಾಶ್‌ ವಹಿವಾಟಿಗೆ ದುಂಬಾಲು

Share This Article