ಎಡಿಜಿಪಿ ಕುಮಾರಸ್ವಾಮಿಯನ್ನ ಹಂದಿ ಎಂದಿದ್ದಾರಾ? – ಸಿದ್ದರಾಮಯ್ಯ ಪ್ರಶ್ನೆ

Public TV
2 Min Read

– ಸ್ನೇಹಮಹಿ ಕೃಷ್ಣ ಯಾರು ಎಂಬುದೇ ಗೊತ್ತಿಲ್ಲ ಎಂದ ಸಿಎಂ
– ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸಲ್ಲ

ಮೈಸೂರು: ಎಡಿಜಿಪಿ ಚಂದ್ರಶೇಖರ್‌ (ADGP Chandrasekhar) ಮತ್ತು ಕುಮಾರಸ್ವಾಮಿ ನಡುವೆ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ (Siddaramaiah) ಅವರು, ಕುಮಾರಸ್ವಾಮಿಯನ್ನು ಎಡಿಜಿಪಿ ಹಂದಿ ಎಂದು ಕರೆದಿದ್ದಾರಾ? ಇಲ್ಲಾ ತಾನೇ. ಅವರು ಇಂಗ್ಲೀಷ್‌ನ ಬರ್ನಾಡ್ ಶಾರ ವ್ಯಾಕ್ಯವನ್ನ ಉಲ್ಲೇಖಿಸಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳಿಕ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ಮತ್ತು ಕುಮಾರಸ್ವಾಮಿ ನಡುವೆ ಜಟಾಪಟಿ ವಿಚಾರ ಉತ್ತರಿಸಿದರು. ಕುಮಾರಸ್ವಾಮಿಯನ್ನು ಎಡಿಜಿಪಿ ಹಂದಿ ಎಂದು ಕರೆದಿದ್ದಾರಾ? ಇಲ್ಲಾ ತಾನೇ. ಅವರು ಇಂಗ್ಲೀಷ್‌ನ ಬರ್ನಾಡ್ ಶಾರ ವ್ಯಾಕ್ಯವನ್ನ ಉಲ್ಲೇಖಿಸಿದ್ದಾರೆ ಅಷ್ಟೇ. ಕುಮಾರಸ್ವಾಮಿ ಎಡಿಜಿಪಿ ಮೇಲೆ ಕೆಲವೊಂದಿಷ್ಟು ಆರೋಪ ಮಾಡಿದ್ದರು. ಅದಕ್ಕೆ ಕೆಲವು ಉತ್ತರಗಳನ್ನ ಕೊಟ್ಟಿದ್ದಾರೆ. ಹಂದಿ ಎನ್ನುವ ಪದವನ್ನು ಕುಮಾರಸ್ವಾಮಿ ಅವರಿಗೆ ಬಳಸಿದ್ದಾರೆ ಎಂದು ಹೇಗೆ ಹೇಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ನಾನು ಈ ವಿಚಾರದ ಬಗ್ಗೆ ಸುದೀರ್ಘ ವಿವರಣೆ ನೀಡುವುದಿಲ್ಲ. ಅದರಲ್ಲೂ ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿದ್ದೇನೆ. ಕುಮಾರಸ್ವಾಮಿ ತಪ್ಪು ಮಾಡಿ ಬಿಟ್ಟಿದ್ದಾರೆ. ಹೀಗಾಗಿ ಬೇರೆಯವರ ಮೇಲೆ ಸುಳ್ಳು ಆರೋಪಗಳನ್ನ ಮಾಡುತ್ತಿದ್ದಾರೆ ಅಷ್ಟೇ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: 136 ಶಾಸಕರಿಗೆ 1 ರೂಪಾಯಿ ಅನುದಾನ ಕೊಟ್ಟಿಲ್ಲ, ಇನ್ನೂ ಚನ್ನಪಟ್ಟಣಕ್ಕೆ 500 ಕೋಟಿ ಎಲ್ಲಿಂದ ಬರುತ್ತೆ?- ನಿಖಿಲ್

ಗ್ಯಾರಂಟಿ ನಿಲ್ಲಿಸಲ್ಲ:
ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಎಲ್ಲಿಯವರೆಗೂ ನಿಮ್ಮ ಆಶೀರ್ವಾದ ಇರುತ್ತೆ ಯಾರು ಏನು ಮಾಡಲು ಸಾಧ್ಯವಿಲ್ಲ. ಸ್ವಲ್ಪ ದಿನ ತೊಂದರೆ ಕೊಡಬಹುದು ಅಷ್ಟೇ. ನಾನು ಯಾರಿಗೂ ಹೆದರಲ್ಲ ಜಗಲ್ಲ, ಬಗ್ಗಲ್ಲ. ನನ್ನ ಆತ್ಮಸಾಕ್ಷಿಗೆ ಗೊತ್ತಿದೆ ನಾನು ಕ್ಲಿಯರ್ ಇದ್ದೇನೆ. ಹೆದರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಈ ವೇಳೆ ಸಿಎಂ ಮಾತು ಕೇಳಿ ಹೌದು ಹುಲಿಯಾ ಅಂತ ಜನ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಜಮೈಕಾ ಪ್ರಧಾನಿ ಭಾರತ ಪ್ರವಾಸ – ಸೋಮವಾರದಿಂದ 4 ದಿನಗಳ ಭೇಟಿ

ಇದೇ ವೇಳೆ ಮೈಸೂರಿನ ಹೊರವಲಯದಲ್ಲಿ ನಡೆದಿರುವ ಪಾರ್ಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಎಸ್ಪಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲಿಸರು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: 1 ಲಕ್ಷ ಕೋಟಿ ಲಾಸ್‌ನಲ್ಲಿರುವ 33 ಕಂಪನಿಗಳು ಚುನಾವಣಾ ಬಾಂಡ್‌ಗೆ 570 ಕೋಟಿ ಹಣ ನೀಡಿವೆ – ಪ್ರಿಯಾಂಕ್‌ ಖರ್ಗೆ

ನನಗೆ ಸ್ನೇಹಮಹಿ ಕೃಷ್ಣ ಯಾರು ಎಂಬುದೇ ಗೊತ್ತಿಲ್ಲ:
ಇದೇ ವೇಳೆ ಸ್ನೇಹಮಯಿ ಕೃಷ್ಣ ಇಡಿಗೆ ಇ-ಮೇಲ್‌ ಮೂಲಕ ದೂರು ನೀಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಸ್ನೇಹಮಹಿ ಕೃಷ್ಣ ಯಾರು ಎಂಬುದೇ ಗೊತ್ತಿಲ್ಲ. ನಾನು ಇವತ್ತಿನವರೆಗೂ ಅವರನ್ನ ನೋಡಿಯೇ ಇಲ್ಲ. ಅವರ ಮೇಲೆ ಏನೇನು ಕೇಸ್ ಗಳಿದೆ ಅದು ನನಗೆ ಗೊತ್ತಿಲ್ಲ. ಅವರು ಇಡಿ ಕೇಸ್ ಕೊಟ್ಟಿರಬಹುದು, ಕೊಡಲಿ ಬಿಡಿ. ಕೇಸ್ ಕೊಟ್ಟ ತಕ್ಷಣ ಅದು ತನಿಖೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈಗ ಮುಡಾ ವಿಚಾರ ನ್ಯಾಯಾಲಯದಲ್ಲಿದೆ, ಇದರ ಬಗ್ಗೆ ಹೆಚ್ಚು ಕಾಮೆಂಟ್ ಮಾಡುವುದಿಲ್ಲ ಎಂದು ಉತ್ತರಿಸಿದರು.

Share This Article