ಇಂದು ಸಿಎಂ ಸಿದ್ದರಾಮಯ್ಯ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ!

Public TV
1 Min Read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಿದ್ದಾರೆ. ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ಮಧ್ಯೆಯೇ ಸಿಎಂ ಸಿದ್ದರಾಮಯ್ಯ ಅವರು `ಸಮ್ಮರ್ ಹಾಲಿಡೇಸ್’ ಸಿನಿಮಾಕ್ಕಾಗಿ ಇಂದು ಬಣ್ಣ ಹಚ್ಚಲಿದ್ದಾರೆ.

ನಿರ್ದೇಶಕಿ ಕವಿತಾ ಲಂಕೇಶ್ ಅಭಿನಯದ ಸಮ್ಮರ್ ಹಾಲಿಡೇಸ್ ಚಿತ್ರದಲ್ಲಿ ಸಿಎಂ ಬಣ್ಣಹಚ್ಚೋಕೆ ಸಮ್ಮತಿ ಸೂಚಿಸಿದ್ದು, ಈ ಚಿತ್ರದಲ್ಲಿ ಸಿದ್ದರಾಮಯ್ಯ 10 ನಿಮಿಷ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಮಕ್ಕಳ ಚಿತ್ರವಾಗಿದ್ದು ಈ ಚಿತ್ರದಲ್ಲಿ ಕವಿತಾ ಲಂಕೇಶ್ ಮಗಳು ಈಶ ಹಾಗೂ ಕವಿತಾ ತಮ್ಮ ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಅಭಿನಯಿಸುತ್ತಿದ್ದಾರೆ. ಅಂದಹಾಗೆ ಸಿ ಎಂ ಸಿದ್ದರಾಮಯ್ಯನವರು ಚಿತ್ರದಲ್ಲಿ ಮಾಡುತ್ತಿರೋದು ಸಿಎಂ ಪಾತ್ರವೇ ಆಗಿರುತ್ತೆ ಅನ್ನೋದನ್ನ ಚಿತ್ರತಂಡ ತಿಳಿಸಿದೆ.

ದಿಡ್ಡಳ್ಳಿ ಮಾದರಿಯ ಗಿರಿಜನ ಹೋರಾಟದಲ್ಲಿ ಭಾಗಿಯಾಗೋ ಮಕ್ಕಳು ನೆರವು ಕೋರಿ ಸಿಎಂಗೆ ಮನವಿ ಮಾಡ್ತಾರೆ. ಮಕ್ಕಳಿಗೆ ಸಹಾಯ ಮಾಡೋ ಪಾತ್ರವನ್ನು ಸಿದ್ದರಾಮಯ್ಯ ನಿರ್ವಹಿಸಲಿದ್ದಾರೆ. ಜೊತೆಗೆ ಇವತ್ತೇ, `ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಶೂಟಿಂಗ್‍ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *