ಗದರ್‌-2 ಸಿನಿಮಾ ನೋಡಿ ‘ಹಿಂದೂಸ್ತಾನ್‌ ಜಿಂದಾಬಾದ್‌’ ಎಂದು ಕೂಗಿದ ವ್ಯಕ್ತಿಯನ್ನ ಹೊಡೆದು ಕೊಂದ ಸ್ನೇಹಿತರು

Public TV
1 Min Read

ರಾಯ್ಪುರ: ಗದರ್‌ 2 (Gadar 2) ಸಿನಿಮಾದ ಕ್ಲೈಮ್ಯಾಕ್ಸ್‌ ನೋಡಿ ಭಾವೋದ್ವೇಗದಿಂದ ‘ಹಿಂದೂಸ್ತಾನ್‌ ಜಿಂದಾಬಾದ್’‌ (Hindustan Zindabad) ಎಂದು ಕೂಗಿದ ವ್ಯಕ್ತಿಯನ್ನು ಆತನ ಸ್ನೇಹಿತರೇ ಹೊಡೆದು ಕೊಂದಿರುವ ಅಮಾನವೀಯ ಘಟನೆ ಛತ್ತೀಸಗಢದಲ್ಲಿ (Chhattisgarh) ನಡೆದಿದೆ.

ಮಲ್ಕಿತ್ ಸಿಂಗ್ ಅಲಿಯಾಸ್ ವೀರು ಹೆಸರಿನ ವ್ಯಕ್ತಿ ಕೊಲೆಯಾದವ. ತಸವ್ವೂರ್ ಮತ್ತು ಫೈಝಲ್ ಸೇರಿದಂತೆ ಆತನ ನಾಲ್ವರು ಸ್ನೇಹಿತರು ಹೊಡೆದು ಕೊಂದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರೆಲ್ಲರೂ ಸಂತ್ರಸ್ತನ ಸ್ನೇಹಿತರಾಗಿದ್ದರು. ಇದನ್ನೂ ಓದಿ: ಲಕ್ನೋದಲ್ಲಿ ಇಲಿ ಹಿಡಿಯೋದಕ್ಕೆ 69 ಲಕ್ಷ ರೂ. ಖರ್ಚು ಮಾಡಿದ ರೈಲ್ವೆ

ಮಲ್ಕಿತ್ ಸಿಂಗ್ ತನ್ನ ಸ್ನೇಹಿತನೊಂದಿಗೆ ಮೊಬೈಲ್‌ನಲ್ಲಿ ಬ್ಲಾಕ್‌ಬಸ್ಟರ್ ಚಲನಚಿತ್ರ ಗದರ್-2 ವೀಕ್ಷಿಸಿದ್ದ. ಸಿನಿಮಾದ ಕ್ಲೈಮ್ಯಾಕ್ಸ್‌ ವೇಳೆ ‘ಹಿಂದುಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದ್ದಾನೆ. ಈ ವೇಳೆ ಸಮೀಪದಲ್ಲೇ ಇದ್ದ ಅನ್ಯಕೋಮಿನ ಯುವಕರು, ತಮ್ಮನ್ನು ವಿನಾಕಾರಣ ಚುಡಾಯಿಸುವುದಕ್ಕೆ ಈತ ಹೀಗೆ ಕೂಗಿದ್ದಾನೆ ಎಂದು ಕುಪಿತಗೊಂಡು ಹಲ್ಲೆ ನಡೆಸಿದ್ದಾರೆ. ಘಟನೆ ನಡೆದಾಗ ಆರೋಪಿಗಳು ಪಾನಮತ್ತರಾಗಿದ್ದರು ಎಂದು ವರದಿಗಳು ತಿಳಿಸಿವೆ.

ಸಂತ್ರಸ್ತನ ಕುಟುಂಬಸ್ಥರು ಹಾಗೂ ಸಮುದಾಯದ ಜನತೆ ಖುರ್ಷಿಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ, ಸಂತ್ರಸ್ತನ ಕುಟುಂಬಸ್ಥರಿಗೆ 50 ಲಕ್ಷ ರೂ. ಪರಿಹಾರ ಹಾಗೂ ಮಲ್ಕಿತ್ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಸಮುದಾಯದ ಜನ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಜನ್ಮದಿನದಂದು ದೇಶದ ಮೊದಲ ಲಿಂಗತ್ವ ಅಲ್ಪಸಂಖ್ಯಾತರ ವಾರ್ಡ್ ತೆರೆದ  ಆರ್‌ಎಂಎಲ್ ಆಸ್ಪತ್ರೆ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್