ಮಗಳ ಮೃತ ದೇಹ ಹೊತ್ತು 10 ಕಿ.ಮೀ ಸಾಗಿದ ತಂದೆ

Public TV
2 Min Read

ರಾಯಪುರ: ತಂದೆಯೊಬ್ಬ 7 ವರ್ಷದ ತನ್ನ ಮೃತ ಮಗಳ ದೇಹವನ್ನು ಭುಜದ ಮೇಲೆ ಹೊತ್ತು 10 ಕಿ.ಮೀ ಸಾಗಿದ ಘಟನೆ ಶುಕ್ರವಾರ ಬೆಳಗ್ಗೆ ಸರ್ಗುಜಾ ಜಿಲ್ಲೆಯ ಲಖನ್‍ಪುರ್ ಗ್ರಾಮದಲ್ಲಿ ನಡೆದಿದೆ.

ಘಟನೆ ವೀಡೀಯೋವು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ದೃಶ್ಯವನ್ನು ಕಂಡ ಆರೋಗ್ಯ ಮಂತ್ರಿ ಟಿ.ಎಸ್ ಸಿಂಗ್ ದೇವ್ ತನಿಖೆಗೆ ಆದೇಶಿಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾದ ಕೈದಿ

ವೀಡಿಯೋದಲ್ಲಿ ವ್ಯಕ್ತಿ ತನ್ನ ಹೆಗಲ ಮೇಲೆ ಶವವನ್ನು ಹೊತ್ತುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಅಮದಲದಲ್ಲಿರುವ ಮನೆ ತಲುಪಲು ಕಾಲ್ನಡಿಗೆಯಲ್ಲಿ ಸುಮಾರು 10 ಕಿ.ಮೀ ದೂರ ಕ್ರಮಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಶುಕ್ರವಾರ ಜಿಲ್ಲಾ ಕೇಂದ್ರವಾದ ಅಂಬಿಕಾಪುರದಲ್ಲಿದ್ದ ಆರೋಗ್ಯ ಸಚಿವ ಸಿಂಗ್ ದೇವ್ ಅವರು ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿಗೆ ಸೂಚಿಸಿದ್ದಾರೆ.

ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ವಿಡಿಯೋ ನೋಡಿದೆ. ಇದು ಗೊಂದಲದ ಸಂಗತಿಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂಎಚ್‍ಒಗೆ ಹೇಳಿದ್ದೇನೆ. ಅಲ್ಲಿ ನೇಮಕಗೊಂಡು ಕರ್ತವ್ಯ ನಿರ್ವಹಿಸಲು ಸಾಧ್ಯವಾಗದವರನ್ನು ವಜಾಗೊಳಿಸಬೇಕು ಎಂದು ಹೇಳಿದ್ದೇನೆ ಎಂದು ತಿಳಿಸಿದರು.

ಕರ್ತವ್ಯ ನಿರತ ಆರೋಗ್ಯ ಸಿಬ್ಬಂದಿ ಮನೆಯವರ ಮನವೊಲಿಸಿ ವಾಹನಕ್ಕಾಗಿ ಕಾಯಬೇಕು. ಅಂತಹ ಘಟನೆಗಳು ನಡೆಯದಂತೆ ಅವರು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ಅಧಿಕಾರಿಗಳ ಪ್ರಕಾರ, ಜಿಲ್ಲೆಯ ಲಖನ್‍ಪುರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ಬಾಲಕಿ ಮೃತಪಟ್ಟಿದ್ದು, ಶವ ವಾಹನ ಬರುವ ಮುನ್ನ ಆಕೆಯ ತಂದೆ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: Galwan Clash ಚೀನಾದ ಸುಳ್ಳು ಬಯಲು – 38 ಪಿಎಲ್‌ಎ ಯೋಧರು ಸಾವು – ಭಾರತದ ಸೇನೆಗೆ ಹೆದರಿ ಪರಾರಿಯಾದ ಚೀನಿ ಸೈನಿಕರು

ಅಮದಾಳ ಗ್ರಾಮದವರಾದ ಈಶ್ವರ ದಾಸ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪುತ್ರಿ ಸುರೇಖಾಳನ್ನು ಬೆಳಗ್ಗೆ ಲಖನಪುರ ಸಿಎಚ್‍ಸಿಗೆ ಕರೆತಂದಿದ್ದರು.

60ರ ಆಸುಪಾಸಿನಲ್ಲಿ ಬಾಲಕಿಯ ಆಮ್ಲಜನಕದ ಪ್ರಮಾಣ ತೀರಾ ಕಡಿಮೆಯಾಗಿತ್ತು. ಆಕೆಯ ಪೋಷಕರ ಪ್ರಕಾರ, ಆಕೆ ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಅಗತ್ಯ ಚಿಕಿತ್ಸೆ ನೀಡಿದರು ಸಹ ಅವಳ ಸ್ಥಿತಿ ಹದಗೆಟ್ಟಿತು. ಬೆಳಿಗ್ಗೆ 7:30 ರ ಸುಮಾರಿಗೆ ಅವರು ಸಾವನ್ನಪ್ಪಿದರು ಎಂದು ಹೇಳಿದರು.

ಡಾ ವಿನೋದ್ ಭಾರ್ಗವ್, ಗ್ರಾಮೀಣ ವೈದ್ಯಕೀಯ ಸಹಾಯಕ (ಆರ್‍ಎಮ್‍ಎ) ಆರೋಗ್ಯ ಕೇಂದ್ರದಲ್ಲಿ ಈ ಬಗ್ಗೆ ನನಗೆ ತಿಳಿಸಿದ್ದಾರೆ. ಶೀಘ್ರದಲ್ಲೇ ಶವ ಸಾಗಾಟ ವಾಹನ ಬರಲಿದೆ ಎಂದು ಕುಟುಂಬ ಸದಸ್ಯರಿಗೆ ತಿಳಿಸಿದ್ದೇವೆ. ಶವ ಸಾಗಾಟ ವಾಹನವು 9:20ರ ಸುಮಾರಿಗೆ ಬಂದಿತು. ಆದರೆ ಆ ಹೊತ್ತಿಗೆ ಅವರು ದೇಹದೊಂದಿಗೆ ಹೊರಟು ಹೋಗಿದ್ದರ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *