ಶಿವಾಜಿ ಪ್ರತಿಮೆಯ ಕಾಂಗ್ರೆಸ್, ಬಿಜೆಪಿ ಕ್ರೆಡಿಟ್ ವಾರ್‌ಗೆ MES ಎಂಟ್ರಿ – ಕ್ಷೀರಾಭಿಷೇಕಕ್ಕೆ ನಿರ್ಧಾರ

Public TV
1 Min Read

ಬೆಳಗಾವಿ: ರಾಜಹಂಸಗಡ ಕೋಟೆ ಶಿವಾಜಿ ಪ್ರತಿಮೆಯ ಬಿಜೆಪಿ (BJP), ಕಾಂಗ್ರೆಸ್ (Congress) ಕ್ರೆಡಿಟ್ ಪಾಲಿಟಿಕ್ಸ್‌ಗೆ ಎಂಇಎಸ್ (MES) ಎಂಟ್ರಿಯಾಗಿದೆ.

ರಾಜಹಂಸಗಡ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ (Chhatrapati Shivaji Maharaj Statue) ವಾರ್ ಮುಂದುವರಿದಿದ್ದು ಶಿವಾಜಿ ಪ್ರತಿಮೆಗೆ ಇಂದು ಎಂಇಎಸ್ ಮುಖಂಡರು ಕ್ಷೀರಾಭಿಷೇಕ ಮಾಡಲು ನಿರ್ಧರಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ ನಾಯಕರಿಂದ ಛತ್ರಪತಿ ಶಿವಾಜಿ ಮಹಾರಾಜರಿಗೆ ಅಪಮಾನ ಆರೋಪಿಸಿ ಭಾನುವಾರ ಎಂಇಎಸ್‌ನಿಂದ ರಾಜಹಂಸಗಡದ (Rajahamsagada) ಶಿವಾಜಿ ಪ್ರತಿಮೆ ಶುದ್ಧೀಕರಣ ಕಾರ್ಯಕ್ರಮ ನಡೆಸಲಾಗುತ್ತಿದೆ.

ಈಗಾಗಲೇ ಎರಡು ಬಾರಿ ಲೋಕಾರ್ಪಣೆ ಆದರೂ ವಿಧಿವಿಧಾನವಾಗಿ ಆಗಿಲ್ಲ ಎಂದು ಆರೋಪಿಸಿ ಎಂಇಎಸ್ ಮುಖಂಡರು ಇಂದು ಶಿವಾಜಿ ಮಹಾರಾಜರ ಪ್ರತಿಮೆ ಶುದ್ಧೀಕರಣ ಹೆಸರಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ರಾಜಹಂಸಗಡ ಕೋಟೆಯ ಪ್ರವೇಶ ದ್ವಾರದಿಂದ ರಾಜಹಂಸಗಡ ಕೋಟೆವರೆಗೆ ಮೆರವಣಿಗೆ ನಡೆಯಲಿದ್ದು, ಬಳಿಕ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಬಳಿಯ ಚಿಕ್ಕ ಮೂರ್ತಿಗೆ ಕ್ಷೀರಾಭಿಷೇಕಕ್ಕೆ ನಿರ್ಧಾರ ಮಾಡಲಾಗಿದೆ. ಇತ್ತೀಚೆಗಷ್ಟೇ ರಾಜಹಂಸಗಡ ಕೋಟೆಯ ಶಿವಾಜಿ ಪ್ರತಿಮೆ ಎದುರು ನಿಂತು ಎಂಇಎಸ್ ಮುಖಂಡರು ನಾಡದ್ರೋಹಿ ಘೋಷಣೆ ಕೂಗಿದ್ದರು‌. ಹೀಗಾಗಿ ಎಂಇಎಸ್‌ನ ಇಂದಿನ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿಯನ್ನು ಬೆಳಗಾವಿ ಜಿಲ್ಲಾಡಳಿತ ನೀಡಿದೆ. ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ – ಎಫ್‌ಐಆರ್ ದಾಖಲು

ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆಗೆ ಕ್ಷೀರಾಭಿಷೇಕ ನೆರವೇರಿಸದಂತೆ ಷರತ್ತು ಹಾಕಲಾಗಿದ್ದು, ಇಂದು ರಾಜಹಂಸಗಡ ಕೋಟೆಯಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆಗೆ ನಿರ್ಧರಿಸಲಾಗಿದೆ. ಇತ್ತೀಚೆಗೆ ರಾಜಹಂಸಗಡ ಕೋಟೆಯಲ್ಲಿ ನಾಡದ್ರೋಹಿ ಘೋಷಣೆ ಕೂಗಿದ್ದ ಎಂಇಎಸ್ ಮುಖಂಡರ ವಿರುದ್ಧ ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದು ಪರ ಬ್ಯಾಟ್‌ ಬೀಸಿದ ಬಿಜೆಪಿ ಶಾಸಕ ರಾಜುಗೌಡ

Share This Article
Leave a Comment

Leave a Reply

Your email address will not be published. Required fields are marked *