ಜೈಲಿನಲ್ಲಿ ಚೇತನ್ ಕೂಲ್ ಆಗಿದ್ದಾರೆ : ಪತ್ನಿ ಮೇಘಾ

By
1 Min Read

ನ್ಯಾಯಮೂರ್ತಿಗಳ ಮೇಲೆ ಆಕ್ಷೇಪಾರ್ಹ ಟ್ವೀಟ್ ಮಾಡಿ ಮಂಗಳವಾರ ಜೈಲುಪಾಲಾಗಿರುವ ನಟ ಚೇತನ್, ಜೈಲಿನಲ್ಲಿ ಕೂಲ್ ಆಗಿದ್ದಾರೆ. ಅವರಿಗೆ ಯಾವುದೇ ಭಯವಿಲ್ಲ ಎಂದಿದ್ದಾರೆ ಚೇತನ್ ಪತ್ನಿ ಮೇಘಾ. ಪತಿಯನ್ನು ಜೈಲಿನಲ್ಲಿ ಭೇಟಿಯಾಗಿ ಬಂದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಚೇತನ್ ಬಗ್ಗೆ ಆತಂಕ ಪಡಬೇಕಾಗಿಲ್ಲ. ಅವರೂ ಭಯ ಪಡುತ್ತಿಲ್ಲ. ನಾವೆಲ್ಲರೂ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಚೇತನ್ ಅವರಿಗೆ ಜಾಮೀನು ಸಿಗುವ ವಿಶ್ವಾಸವಿದೆ’ ಎಂದರು. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

ನೆನ್ನೆ ಏಕಾಏಕಿ ಶೇಷಾದ್ರಿಪುರಂ ಪೊಲೀಸ್ ಠಾಣೆ ಅಧಿಕಾರಿಗಳು ಚೇತನ್ ಅವರನ್ನು ವಿಚಾರಣೆಗೆ ಎಂದು ಕರೆದೊಯ್ದಿದ್ದರು. ತಮ್ಮ ಗಮನಕ್ಕೆ ಬಾರದಂತೆ ಚೇತನ್ ಅವರನ್ನು ಪೊಲೀಸ್ ನವರು ಕರೆದುಕೊಂಡು ಹೋಗಿದ್ದಕ್ಕೆ ಮೇಘಾ, ತಮ್ಮ ಪತಿ ಕಾಣೆಯಾಗಿದ್ದಾರೆ ಎಂದು ದೂರಿದ್ದರು. ಚೇತನ್ ಅಭಿಮಾನಿಗಳು ಪೊಲೀಸ್ ಠಾಣೆಯ ಮುಂದೆ ಜಮಾಯಿಸುತ್ತಿದ್ದಂತೆಯೇ  ಚೇತನ್ ತಮ್ಮ ವಶದಲ್ಲಿರುವ ಬಗ್ಗೆ ಶೇಷಾದ್ರಿಪುರಂ ಪೊಲೀಸ್ ಖಚಿತ ಪಡಿಸಿದರು. ಆನಂತರ ಅವರನ್ನು 8ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ ಚೇತನ್ ಗೆ 14 ದಿನ ನ್ಯಾಯಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತ್ತು. ಇದನ್ನೂ ಓದಿ : ಬಾಲಿವುಡ್ ನಟಿ ಹುಮಾ ಖುರೇಶಿಗೆ ಬೆಂಗಳೂರಿನ ಕೋರಮಂಗಲದ ನಂಟು

ಪೊಲೀಸರು ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ಚೇತನ್ ಅವರನ್ನು ಕರೆತಂದಾಗ, ಅವರ ಕೈಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಬರೆದ Annihilation of cast’ ಪುಸ್ತಕವಿತ್ತು. ಅದನ್ನು ತಗೆದುಕೊಂಡೇ ಅವರು ಜೈಲಿನೊಳಗೆ ಹೋದರು.

Share This Article
Leave a Comment

Leave a Reply

Your email address will not be published. Required fields are marked *