ಚೆನ್ನೈನಲ್ಲಿ ಭಾರೀ ಮಳೆ- ಶಾಲಾ ಕಾಲೇಜುಗಳಿಗೆ ಇಂದು ರಜೆ

Public TV
1 Min Read

ಚೆನ್ನೈ: ಕಳೆದ ರಾತ್ರಿಯಿಂದ ಬಿಟ್ಟುಬಿಡದೇ ಸುರಿಯುತ್ತಿರೋ ಮಹಾಮಳೆಗೆ ಚೆನ್ನೈ ನಗರ ಮುಳುಗಿದೆ. ಒಂದೇ ರಾತ್ರಿಗೆ 12 ಸೆಂಟಿಮೀಟರ್ ಮಳೆಯಾಗಿದೆ.

ಭಾರೀ ಮಳೆಯ ಕಾರಣ ಇಂದು ಚೆನ್ನೈ ಹಾಗೂ ತಮಿಳುನಾಡಿನ ಇತರೆ ಕರಾವಳಿ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಐಟಿ ಸಂಸ್ಥೆಗಳಿಗೂ ರಜೆ ಘೋಷಿಸುವಂತೆ ಸರ್ಕಾರ ಸೂಚನೆ ನೀಡಿದೆ.

 

ತಮಿಳುನಾಡಿನ ಕರಾವಳಿ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಳೆದ ರಾತ್ರಿಯಿಂದ ಜನರಿಗೆ ಮಳೆಯ ಬಗ್ಗೆ ಎಚ್ಚರಿಕೆ ಹಾಗೂ ಸಲಹೆಗಳನ್ನ ಟ್ವೀಟ್ ಮಾಡುತ್ತಿದೆ.

ಸತತ 5 ಗಂಟೆ ಕಾಲ ಸುರಿದ ಮಳೆಗೆ ನಗರದ ರಸ್ತೆಗಳು, ಬಡಾವಣೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಎಲ್ನೋಡಿದ್ರೂ ನೀರೋ ನೀರು. ಮರೀನಾ ಬೀಚ್ ರಸ್ತಯಲ್ಲಂತೂ ರಸ್ತೆಯೇ ನದಿಯಂತಾಗಿದ್ದು, ಮೊಣಕಾಲುವರೆಗಿನ ನೀರಿನ ಮಧ್ಯೆ ಜನರು ವಾಹನ ಚಾಲನೆ ಮಾಡುವಂತಾಯ್ತು. ರಸ್ತೆಯಲ್ಲಿ ನೀರು ನಿಂತು ಕಿಲೋಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

 

https://twitter.com/MersalJazz/status/926148050355085312

 

Share This Article
Leave a Comment

Leave a Reply

Your email address will not be published. Required fields are marked *