ರಾಜ್ಯದಲ್ಲಿ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇ ಸಂಚಾರ ಮುಕ್ತ

Public TV
1 Min Read

ಬೆಂಗಳೂರು: ದಕ್ಷಿಣ ಭಾರತದ ಅತಿ ದೊಡ್ಡ ಎಕ್ಸ್‌ಪ್ರೆಸ್ ವೇನಲ್ಲಿ ಒಂದಾಗಿರುವ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇ (Chennai-Bengaluru Expressway) ಕರ್ನಾಟಕ ಭಾಗದಲ್ಲಿ ಸಂಚಾರಕ್ಕೆ ಮುಕ್ತವಾಗಿದೆ.

ಕರ್ನಾಟಕ ಭಾಗದ ಮಾರ್ಗದ ಕೆಲಸಗಳು ಸಂಪೂರ್ಣ ಹಿನ್ನೆಲೆ, ಸಂಚಾರ ಮುಕ್ತಗೊಳಿಸಲಾಗಿದೆ. ತಾತ್ಕಾಲಿಕವಾಗಿ ಟೋಲ್ ಇಲ್ಲದೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾರ್ಗಸೂಚಿ ಫಲಕಗಳು, ನಾಮಫಲಕಗಳು, ಡಿಜಿಟಲ್ ಫಲಕಗಳು ಸೇರಿದಂತೆ ರಾಜ್ಯ ಭಾಗದ 71 ಕಿ.ಮೀನ ಸಂಪೂರ್ಣ ಕಾರ್ಯ ಮುಕ್ತಾಯಗೊಂಡ ಹಿನ್ನೆಲೆ ಸಂಚಾರ ಮುಕ್ತಗೊಳಿಸಲಾಗಿದೆ. ಇದನ್ನೂ ಓದಿ: ವ್ಯಕ್ತಿಯೊಬ್ಬನಿಂದ ಕಿರುಕುಳ ಆರೋಪ – ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಆತ್ಮಹತ್ಯೆ

ಹೊಸಕೋಟೆಯ ಇಂಟರ್ ಚೇಂಜ್‌ನಿಂದ ಚೆನ್ನೈವರೆಗೆ 280 ಕಿ.ಮೀ ಉದ್ದದ ಎಕ್ಸ್‌ಪ್ರೆಸ್ ವೇ ಇದಾಗಿದೆ. ಸದ್ಯ ಹೊಸಕೋಟೆ ಸ್ಯಾಟಲೈಟ್ ರಿಂಗ್ ರಸ್ತೆಯಿಂದ, ಆಂಧ್ರ ಗಡಿ ಸುಂದರಪಾಳ್ಯದವರೆಗಿನ ರಸ್ತೆ ಸಂಚಾರಕ್ಕೆ ರೆಡಿಯಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಆಗಾಗ್ಗೆ ಭೂಕಂಪನಕ್ಕೆ ಕಾರಣವೇನು?

ಆಂಧ್ರ ಪ್ರದೇಶ, ತಮಿಳುನಾಡು ಭಾಗದಲ್ಲಿ ಕಾಮಗಾರಿ ಮುಂದುವರೆದಿದೆ. ಈ ವರ್ಷಾಂತ್ಯಕ್ಕೆ ಸಂಪೂರ್ಣ ಮಾರ್ಗ ಸಂಚಾರ ಮುಕ್ತಗೊಳ್ಳುವ ಸಾಧ್ಯತೆಯಿದೆ. ಸಂಪೂರ್ಣ ಕಾಮಗಾರಿ ಮುಕ್ತಾಯಗೊಂಡು ಅಧಿಕೃತ ಉದ್ಘಾಟನೆ ಬಳಿಕ ಟೋಲ್ ಸಂಗ್ರಹ ಆರಂಭಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರದೇಶಿಕ ಅಧಿಕಾರಿ ವಿಲಾಸ್ ಪಿ.ಬ್ರಹ್ಮಂಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಮರಾಠಿ ಪುಂಡರಿಂದ ಕಂಡಕ್ಟರ್ ಮೇಲೆ ಹಲ್ಲೆ – ಇಂದು ಬೆಳಗಾವಿಗೆ ರಾಮಲಿಂಗಾ ರೆಡ್ಡಿ ಭೇಟಿ

ಈ ಎಕ್ಸ್‌ಪ್ರೆಸ್ ವೇಗೆ ಮಾಲೂರು, ಬಂಗಾರಪೇಟೆ, ಮತ್ತು ಆಂಧ್ರ ಗಡಿ ಸುಂದರ ಪಾಳ್ಯದಲ್ಲಿ ಮೂರು ಇಂಟರ್ ಚೇಂಜ್‌ಗಳಿವೆ. ವೇಗದ ಮಿತಿ 100ಕ್ಕೆ ಸೀಮಿತಗೊಳಿಸಲಾಗಿದೆ. ಇದನ್ನೂ ಓದಿ: ಸುಳ್ಳಾಯ್ತು ಐಐಟಿ ಬಾಬಾ ಭವಿಷ್ಯ – ಪಾಕ್‌ ವಿರುದ್ಧ ಗೆದ್ದು ಬೀಗಿದ ಭಾರತ

Share This Article