ಮಕ್ಕಳಾದ ಮೇಲೆ ಮೊದಲ ಪತಿಗೆ ಕೈಕೊಟ್ಟು 2ನೇ ಮದುವೆ, 24 ಲಕ್ಷ ದೋಚಿ ಮತ್ತೊಬ್ಬನ ಜೊತೆ ಜೂಟ್‌!

1 Min Read

ಚಿಕ್ಕಬಳ್ಳಾಪುರ: ಮಹಿಳೆಯೊಬ್ಬಳು ತನ್ನ ಗಂಡ ಬದುಕಿದ್ದರೂ ಸತ್ತು ಹೋಗಿದ್ದಾನೆ ಎಂದು ಮತ್ತೆರೆಡು ಮದುವೆಯಾಗಿರುವುದು (Marriage) ದೊಡ್ಡಬಳ್ಳಾಪುರದಲ್ಲಿ (Doddaballapura) ನಡೆದಿದೆ.

ದೊಡ್ಡಬಳ್ಳಾಪುರ ಮೂಲದ ಮಹಿಳೆ 11 ವರ್ಷದ ಹಿಂದೆ ವೀರೇಗೌಡ ಎಂಬವರನ್ನು ಪ್ರೀತಿಸಿ (Love) ಮದುವೆಯಾಗಿದ್ದಳು. ಬಳಿಕ ಎರಡು ಮಕ್ಕಳಾದ ಮೇಲೆ ಗಂಡ ಸತ್ತು ಹೋಗಿದ್ದಾನೆ ಎಂದು ಹೇಳಿಕೊಂಡು, ಒಂದೂವರೆ ವರ್ಷದ ಹಿಂದೆ ಡೆಲಿವರಿ ಬಾಯ್‌ ಆಗಿದ್ದ ಅನಂತ್ ಎಂಬವರನ್ನು ಮದುವೆಯಾಗಿದ್ದಳು. ಅವರ ಬಳಿ 24 ಲಕ್ಷ ರೂ. ಹಣ ಪಡೆದು ಈಗ ಕನಕಪುರ ಮೂಲದ ಮತ್ತೊಬ್ಬನ ಜೊತೆ ಮದುವೆಯಾಗಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ಮದುವೆಯಾಗಿ ಎರಡೇ ತಿಂಗಳಿಗೆ ಪರಾರಿ – ಪತಿ ಆತ್ಮಹತ್ಯೆಗೆ ಕಾರಣರಾದ ಪತ್ನಿ, ಪ್ರಿಯಕರ ಅಂದರ್‌

ಮೋಸ ಹೋದ ಮೊದಲ ಹಾಗೂ ಎರಡನೇ ಗಂಡ ಸೇರಿ ದೊಡ್ಡಬೆಳವಂಗಲ ಪೊಲೀಸರ ಮೊರೆ ಹೋಗಿದ್ದಾರೆ.  ಇದನ್ನೂ ಓದಿ: ಲಾರಿ ಹರಿದು ಪಾದಾಚಾರಿ ಸಾವು ಪ್ರಕರಣ – 32 ವರ್ಷಗಳ ಬಳಿಕ ಚಾಲಕ ಸೆರೆ

Share This Article