Exclusive | ಲಕ್ಷ ಲಕ್ಷ ಹಣ ವಂಚನೆ ಆರೋಪ – ನನ್ನ ಹೆಸರು ಹಾಳು ಮಾಡುವ ಉದ್ದೇಶ ಬಿಟ್ಟು ಬೇರೆನಿಲ್ಲ: ಗೋಲ್ಡ್‌ ಸುರೇಶ್‌

Public TV
2 Min Read

ಕನ್ನಡದ ಬಿಗ್‌ಬಾಸ್‌ ಸೀಸನ್ 11ರ (Bigg Boss 11) ಸ್ಪರ್ಧಿ ಗೋಲ್ಡ್ ಸುರೇಶ್ (Gold Suresh) ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ ಕೇಳಿಬಂದಿದೆ. ಕೇಬಲ್‌ ಚಾನೆಲ್‌ ಸೆಟ್‌ಅಪ್‌ ಮಾಡಿಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾರೆಂದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ.

ಯಾರಿಗೂ ಹಣ ಕೊಡಬೇಕಿಲ್ಲ:
ವಂಚನೆ ಆರೋಪ ಕುರಿತು ಗೋಲ್ಡ್ ಸುರೇಶ್‌ ಮೊದಲ ಬಾರಿಗೆ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ. ಇದು ಊಹಾಪೋಹದ ಆರೋಪ. ಅಧಿಕೃತವಾಗಿ ನನ್ನ ಮೇಲೆ‌ ಎಲ್ಲೂ ಎಫ್‌ಐಆರ್ (FIR) ಆಗಿಲ್ಲ. 2018ರಲ್ಲಿ ನನ್ನ ಸ್ನೇಹಿತನ ಮೂಲಕ ಆ ವ್ಯಕ್ತಿ ಪರಿಚಯ ಆಗಿದ್ರು. ಅವರ ಕೆಲಸ ಮಾಡಿಕೊಟ್ಟಿದ್ದೀನಿ. ನಾನು ಯಾರಿಗೂ ಯಾವುದೇ ಹಣ ಕೊಡಬೇಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ

 ದಾಖಲೆ ಇದ್ರೆ ದೂರು ಕೊಡಲಿ:
ನಾನೊಬ್ಬ ಸಿವಿಲ್ ಕಂಟ್ರ್ಯಾಕ್ಟರ್‌, ಬ್ಯುಸಿನೆಸ್ ಮೆನ್, ಬೇರೆ ಬೇರೆ ವ್ಯವಹಾರ ಮಾಡ್ತಿನಿ. ಅವರ ಹತ್ರ ದಾಖಲೆ ಇದ್ದಿದ್ರೆ, ಈ ಆರೋಪ ಮೊದಲೇ ಮಾಡಬೇಕಿತ್ತು. ಬಿಗ್ ಬಾಸ್‌ನಿಂದ ಹೊರಗೆ ಬಂದಮೇಲೆ ಈಗ್ಯಾಕೆ ಮಾಡ್ತಿದ್ದಾರೆ? ಇದು ನಡೆದಿರೋದು 2018 ರಲ್ಲಿ ಇಷ್ಟು ದಿನ ಏನ್ ಮಾಡ್ತಿದ್ರು? ಅವರ ಹತ್ರ ದಾಖಲೆ ಇದ್ರೆ ಹೋಗಿ ದೂರು ಕೊಡಲಿ, ಕೇಸ್ ಹಾಕಲಿ, ಇದು ದುಡ್ಡಿಗಾಗಿ ಮಾಡಿರೋ ಕೆಲಸ ಅಷ್ಟೇ. ನಾನ್ ಕದ್ದು ಮುಚ್ಚಿ ಓಡಾಡ್ತಿಲ್ಲ, ಎಲ್ಲರಿಗೂ ಪರಿಚಿತ ಎಂದು ಹೇಳಿದ್ದಾರೆ. ಇದನ್ನೂ ಓದಿ: 6 ಲಕ್ಷ ಹಣ ನೀಡುವಂತೆ ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್‌ಗೆ ಬೆದರಿಕೆ – ಎನ್‌ಸಿಆರ್ ದಾಖಲು

ನಾನು ಸಮಾಜ ಸೇವಕ
ನಿನ್ನೆ ಬೆಳಗ್ಗೆ ಕಾಲ್ ಮಾಡಿ ದುಡ್ಡು ಕೊಟ್ಟಿಲ್ಲ ಅಂದರೆ ಮಾಧ್ಯಮಕ್ಕೆ ಹೋಗ್ತಿನಿ ಅಂತಾರೆ. ಇದರಿಂದಲೇ ಗೊತ್ತಾಗುತ್ತೆ ಇಂತಹ ಬೆದರಿಕೆಗೆಲ್ಲಾ ನಾನು ಜಗ್ಗಲ್ಲ, ತಲೆನೂ ಕೆಡಿಸಿಕೊಳ್ಳಲ್ಲ. ನಾನು ಸಮಾಜ ಸೇವಕ, ಹಾಗಾಗಿ ತುಂಬಾ ಕೇಳಿಕೊಂಡ್ರು ಅಂತಾ 50 ಸಾವಿರ ಸಹಾಯ ಮಾಡಿದ್ದೀನಿ ಅಷ್ಟೇ. ನಾನ್ ಏನು ಅಂತಾ ನಂಗೆ ಮಾತ್ರ ಗೊತ್ತು, ಕಾಮೆಂಟ್ ಮಾಡೋರಿಗೆಲ್ಲಾ ಉತ್ತರ ಕೊಡಲ್ಲ. ಇದರಲ್ಲಿ ನನ್ನ ಹೆಸರು ಹಾಳು ಮಾಡುವ ಉದ್ದೇಶ ಬಿಟ್ಟು ಬೇರೆನಿಲ್ಲ. ನಾನು ಈಗಾಗಲೇ ದೂರು ಕೊಟ್ಟಿದ್ದೀನಿ, ಕ್ರಮ ಆಗುತ್ತೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ ಶಂಕೆ – ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ

Share This Article