ಜೈಲೂಟ ಫಿಕ್ಸ್ ಆದ್ರೂ ತಾನು ತಪ್ಪೇ ಮಾಡಿಲ್ಲ ಅಂತಿರೋ ವಂಚಕಿ ನಿಶಾ ನರಸಪ್ಪ!

Public TV
2 Min Read

ಟ ಮಾಸ್ಟರ್ ಆನಂದ್ (Master Anand) ಪುತ್ರಿ, ಬಾಲನಟಿ ವಂಶಿಕಾ (Vamshika)  ಹೆಸರಿನಲ್ಲಿ ವಂಚನೆ ಮಾಡಿದ್ದ ಆರೋಪಿ ನಿಶಾ ನರಸಪ್ಪ (Nisha Narasappa) 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತ ನಿಶಾ ಕುರಿತು ಬಗೆದಷ್ಟು ಕರ್ಮಕಾಂಡ ಬಯಲಾಗುತ್ತಿದೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ಬಳಿಕ ಒಂದೊಂದು ಕೇಸ್ ಬೆಳಕಿಗೆ ಬರುತ್ತಿವೆ. ನಿಶಾ ಅಂದರ್ ಆಗಿ ಮೂರನೇ ದಿನವೂ ಆಕೆಯ ವಿರುದ್ಧ ದೂರು ದಾಖಲಾಗುತ್ತಿದೆ. ಜೈಲಿನಲ್ಲಿ ದೂರು ದಾಖಲಿಸಿದ ಪೋಷಕರು ನಿಶಾ ಬಳಿ ಮಾತಾನಾಡುವಾಗ ತಪ್ಪೇ ಮಾಡಿಲ್ಲ ಅಂತಾ ವಾದ ಮಾಡಿದ್ದಾರೆ. ವೀಡಿಯೋ ಮಾಡಲು ಹೋದಾಗ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ.

ವಂಶಿಕಾ (Vamshika)  ಸೇರಿದಂತೆ ಹಲವು ಸೆಲೆಬ್ರಿಟಿಗಳ ಹೆಸರಲ್ಲಿ ವಂಚನೆ ಮಾಡುತ್ತಿದ್ದ ನಿಶಾಗೆ ಈಗ 14 ದಿನಗಳ ನ್ಯಾಯಾಂಗ (Jail) ಬಂಧನದಲ್ಲಿದ್ದಾರೆ. ಮೋಸ ಹೋದ ಪೋಷಕರೊಂದಿಗೆ ಆರೋಪಿ ನಿಶಾ ಮಾತುಕತೆ ಮಾಡಿದ್ದಾರೆ. ಕೊಟ್ಟ ಹಣವನ್ನ ವಾಪಸ್ ಕೇಳಲು ಹೋದಾಗ ವೀಡಿಯೋ ಮಾಡಲು ಯತ್ನಿಸಿದ್ದಾರೆ. ನಿಶಾ ಅವರ ಫೋನ್ ಅನ್ನ ಕಸಿದುಕೊಳ್ಳಲು ಹೋಗಿರುವ ಘಟನೆ ನಡೆದಿದೆ.

ಕಾಲ್ ಯಾಕೆ ಪಿಕ್ ಮಾಡುತ್ತಿಲ್ಲ ಎಂದು ಪೋಷಕರು ಈ ವೇಳೆ ಪ್ರಶ್ನಿಸಿದ್ದಾರೆ. ಅದಕ್ಕೆ ನಿಶಾ ಉತ್ತರವೇ ಕೊಟ್ಟಿಲ್ಲ. ಆಗ ನಾನು ತಪ್ಪೇ ಮಾಡಿಲ್ಲ ಎಂದು ನಿಶಾ ವಾದ ಮಾಡಿದ್ದಾರೆ. ಹಣ ಕೇಳಲು ಹೋದಾಗ ಬಾಗಿಲಲ್ಲೇ ನಿಂತು ವಾದ ಮಾಡಿದ್ದಾರೆ. ಇದಾದ ಬಳಿಕ ಮಾಧ್ಯಮದ ಮುಂದೆ ಈ ಬಗ್ಗೆ ಹೇಳಿಕೆ ನೀಡಲು ಪೋಷಕರು ನಿರಾಕರಿಸಿದ್ದಾರೆ.

ಕಳೆದ ತಿಂಗಳು ದಾಖಲಾದ ದೂರುಗಳ ಬೆನ್ನಲ್ಲೇ ಇದೀಗ ಸಾಕಷ್ಟು ಮಂದಿಯಿಂದ ದೂರುಗಳು ದಾಖಲೆಯಾಗುತ್ತಿವೆ. ಈ ಹಿಂದೆ ತಾರಾ ಎಂಬುವರಿಗೆ ನಿಶಾ ಇಪ್ಪತ್ತು ಲಕ್ಷ ರೂಪಾಯಿ ವಂಚನೆ ಮಾಡಿದ್ದರು ಎನ್ನುವ ಆರೋಪ ಕೂಡ ಇದೆ. ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ನಿಶಾ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿದ್ದಾರಂತೆ. ಈ ಬಗ್ಗೆ ಕಳೆದ ತಿಂಗಳು ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ:ತಮಿಳು ನಟ ಸೂರ್ಯ ಜೊತೆಗಿನ ಫೋಟೋ ಶೇರ್ ಮಾಡಿದ ರಮ್ಯಾ

ಅಲ್ಲದೇ, ಕೋಣನಕುಂಟೆ ಹಾಗೂ ಜ್ಞಾನಭಾರತಿ ಠಾಣೆಯಲ್ಲಿ ನಿಶಾ ವಿರುದ್ದ ವಂಚನೆ ದೂರುಗಳು ದಾಖಲಾಗಿವೆ. ಸದಾಶಿವನಗರ ಠಾಣೆಯಲ್ಲಿ ದಾಖಲಾದ ಕೇಸ್ ನಲ್ಲಿ ಬರೋಬ್ಬರಿ 35 ಲಕ್ಷ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಸಾಲದ ರೂಪದಲ್ಲಿ ಹಾಗೂ ಇನ್ವೆಸ್ಟ್ ಮಾಡಿದ್ರೆ ಲಾಭಾಂಶ ನೀಡುವುದಾಗಿ ನಿಶಾ ವಂಚನೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಮೊದ ಮೊದಲು ಲಾಭಾಂಶದ ಹಣ ಕೊಟ್ಟು ಎರಡರಷ್ಟು ಹಣ ಪಡೆದು ವಂಚನೆ ಮಾಡಿದ್ದಾರಂತೆ ನಿಶಾ. ಬೆಂಗಳೂರು ದೊಡ್ಡ ಮಾಲ್ ಗಳಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ಮಾಡ್ತಿದ್ದ ರಾಮನಗರ ಮೂಲದ ನಿಶಾ, ಬೆಂಗಳೂರು ಹೊರಹೊಲಯದಲ್ಲಿನ ರೆಸಾರ್ಟ್ ಗಳಲ್ಲಿ ಶೂಟಿಂಗ್ ಮಾಡುವ ಮೂಲಕ ಪೋಷಕರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸದಾಶಿವನಗರ ಠಾಣೆಗೆ ಬರುತ್ತಿರುವ ದೂರುಗಳನ್ನು ತಮ್ಮ ಮನೆ ವ್ಯಾಪ್ತಿಯ ಠಾಣೆಯಲ್ಲಿ ನೀಡಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್