ಹಳ್ಳ ಹಿಡಿದ ಪ್ರಧಾನಿಯ ಮಹತ್ವಾಕಾಂಕ್ಷೆ ಯೋಜನೆ-ಬಡವರ ಸಂಜೀವಿನಿಯಲ್ಲಿ ಮಹಾ ದೋಖಾ..!

Public TV
5 Min Read

ಬೆಂಗಳೂರು: ಭಾರತದಲ್ಲಿ ಬಡ ರೋಗಿಗಳು ಔಷಧಿಗಳನ್ನು ಕೊಳ್ಳಲಾಗದ ಪರಿಸ್ಥಿತಿ ಇನ್ನೂ ಇದೆ. ಇದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿಯವರು ಬಡರೋಗಿಗಳು ಔಷಧಿ ಸಿಗದೇ ಕಷ್ಟ ಅನುಭವಿಸಬಾರದು ಅಂತಾ ದೇಶಾದ್ಯಂತ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ಪ್ರಾರಂಭ ಮಾಡಿ ವರ್ಷಗಳೇ ಕಳೆದಿದೆ. ಅದರೆ ಇದೀಗ ಬಡವರ ಸಂಜೀವಿನಿ ಕೇಂದ್ರಗಳು ಹಳ್ಳ ಹಿಡಿದಿವೆ. ಜನಔಷಧಿ ಕೇಂದ್ರಗಳು ಬೆಂಗಳೂರಿನಲ್ಲಿ ಇದ್ದೂ ಇಲ್ಲದಂತಾಗಿವೆ. ಈ ಕುರಿತು ಪಬ್ಲಿಕ್ ಟಿವಿ ಸೋಮವಾರ ರಿಯಾಲಿಟಿ ಚೆಕ್ ನಡೆಸಿದೆ.

ರಿಯಾಲಿಟಿ ಚೆಕ್ 1
ಆಸ್ಪತ್ರೆ: ವಿಕ್ಟೋರಿಯಾ ಆಸ್ಪತ್ರೆ ಆವರಣ
ಸ್ಥಳ: ಕೆ.ಆರ್. ಮಾರುಕಟ್ಟೆ
ಮಳಿಗೆ: ಜೆನರಿಕ್ ಮಳಿಗೆ
ಸಮಯ: ಬೆಳಗ್ಗೆ 11.00


ಬಡವರಿಗೆ ಕೈಗೆಟುಕುವ ಜನೌಷಧಿ ಸಿಗುತ್ತಿಲ್ಲ ಅಂತ ಪಬ್ಲಿಕ್ ಟಿವಿಗೆ ನಿರಂತರ ಕರೆ ಬಂದ ಹಿನ್ನೆಲೆಯಲ್ಲಿ ರಿಯಾಲಿಟಿ ಚೆಕ್‍ಗೆ ನಾವು ಮುಂದಾದ್ವಿ. ಬೆಳಗ್ಗೆ 11.00 ಗಂಟೆ ಸುಮಾರಿಗೆ ಕೆ.ಆರ್. ಮಾರುಕಟ್ಟೆ ಆವರಣದಲ್ಲಿರೋ ಜೆನರಿಕ್ ಔಷಧಿ ಕೇಂದ್ರಕ್ಕೆ ಸಾಗಿದ್ವಿ. ಅಲ್ಲಿ ಬಿಪಿ ಡಯಾಬಿಟಿಕ್ ಹಾಗೂ ಕೆಲ ಕ್ಯಾನ್ಸರ್‍ಗೆ ಸಂಬಂಧಿಸಿದ ಮಾತ್ರೆಗಳು ಇದ್ಯಾ ಅಂತಾ ಕೇಳಿದ್ವಿ. ಅಲ್ಲಿ ಬಂದ ಉತ್ತರವೇ ಬೇರೆ. ಈ ಮಾತ್ರೆ ಇಲ್ಲ, ಬೇರೆ ಇದೆ, ಅಷ್ಟು ಎಂಜಿ ಮಾತ್ರೆಗಳಿಲ್ಲ. ಇಷ್ಟೇ ಇರೋದು, ಸದ್ಯಕ್ಕೆ ಸ್ಟಾಕ್ ಖಾಲಿಯಾಗಿದೆ ಅನ್ನೋ ಉತ್ತರನೇ ಬರುತ್ತಿದೆ.

ಪ್ರತಿನಿಧಿ – ಡಯಾಬಿಟ್ರಿಕ್ ಟ್ಯಾಬ್ಲೆಟ್ ಇದ್ಯಾ?
ವಿಕ್ಟೋರಿಯಾ ಜೆನರಿಕ್ ಕೇಂದ್ರದವರು – ಇಲ್ಲಾ
ಪ್ರತಿನಿಧಿ – ಬಿಪಿದು, ಯಾಕೆ ಮಾತ್ರೆಗಳು ಸ್ಟಾಕ್ ಇರಲ್ವಾ?
ವಿಕ್ಟೋರಿಯಾ ಜೆನರಿಕ್ ಕೇಂದ್ರದವರು- ಅದು ಕಂಟೆಂಡ್ ನಲ್ಲಿ ಬರೋದು ಸ್ಟಾಕ್ ಇಲ್ಲ ಅಂತಾ ಅಲ್ಲ. ಬಿಪಿದು 40 ಎಂಜಿದು ಇಲ್ಲ ನಮ್ಮ ಹತ್ರ 20 ಎಂಜಿದು ಇದೆ ಅಷ್ಟೆ ಅಂದ್ರು.

ಪ್ರತಿನಿಧಿ : ಸ್ಟಾಕ್ ಇಲ್ವಾ ಹೇಗೆ
ವಿಕ್ಟೋರಿಯಾ ಜೆನರಿಕ್ : ಹಾಗೇನಿಲ್ಲ (ಅಷ್ಟರಲ್ಲಿ ಸಾರ್ವಜನಿಕರು ಪ್ರಿಸ್ಕಿಪ್ರಶ್ಯನ್ ಹಿಡಿದುಕೊಂಡು ಬಂದ್ರು)
ಸಾರ್ವಜನಿಕರು – ಈ ಮಾತ್ರೆ ಇದ್ಯಾ (ಬಿಪಿ ಮಾತ್ರೆ)
ವಿಕ್ಟೋರಿಯಾ ಜೆನರಿಕ್ – ಇಲ್ಲ

ರಿಯಾಲಿಟಿ ಚೆಕ್ – 2
ಸ್ಥಳ: ರಾಜಾಜಿನಗರ
ಮಳಿಗೆ: ಜನೌಷಧಿ ಮಳಿಗೆ
ಸಮಯ: ಮಧ್ಯಾಹ್ನ 1.00

ಬೆಂಗಳೂರಿನ ರಾಜಾಜಿನಗರದಲ್ಲಿ ಜನೌಷಧಿ ಕೇಂದ್ರದ ಪರಿಸ್ಥಿತಿನೂ ಇದೇ ಆಗಿದೆ. ನೀವು ಯಾವ ಮಾತ್ರೆ ಕೇಳಿದ್ರೂ ಕೂಡ ಇಲ್ಲ ಅನ್ನೋ ಮಾತು ಬಿಟ್ರೆ ಅಲ್ಲಿ ಬರೆ ಮಾತೇ ಇಲ್ಲ.
ಪ್ರತಿನಿಧಿ: ಸರ್ ಈ ಔಷಧಿಗಳು ಇದ್ಯಾ…?
ಜನೌಷಧಿ ಕೇಂದ್ರ: ಯಾವುದೇ ಎಂಜಿಗಳು ಇಲ್ಲ. ಎಷ್ಟು ಎಷ್ಟು ಬೇಕು?
ಪ್ರತಿನಿಧಿ: ಒಂದು ದಿನಕ್ಕೆ ಅಗುವಷ್ಟು ಮಾತ್ರೆಗಳನ್ನು ಕೊಡಿ.
ಜನೌಷಧಿ ಕೇಂದ್ರ: ಇದರಲ್ಲಿ ಯಾವುದೂ ಇಲ್ಲ. ಒಂದು ಮಾತ್ರ ಇದೆ.
ಪ್ರತಿನಿಧಿ: ಯಾಕೆ ಉಳಿದಿದ್ದು ಇಲ್ಲ?
ಜನೌಷಧಿ ಕೇಂದ್ರ: ಯಾಕೆ ಇಲ್ಲ ಅಂದ್ರೆ ಸ್ಟಾಕ್ ಇಲ್ಲ.
ಪ್ರತಿನಿಧಿ: ಸ್ಟಾಕ್ ಯಾಕೆ ಇಲ್ಲ.?
ಜನೌಷಧಿ ಕೇಂದ್ರ: ಕಸ್ಟಮರ್ ಬಂದು ಎಲ್ಲಾ ತಗೂಂಡು ಹೋಗಿದ್ದಾರೆ.
ಪ್ರತಿನಿಧಿ: ಎಷ್ಟು ದಿನದಿಂದ ಸ್ಟಾಕ್ ಇಲ್ಲ?
ಜನೌಷಧಿ ಕೇಂದ್ರ: ಒಂದೂವರೆ ತಿಂಗಳಿಂದ ಸ್ಟಾಕ್ ಇಲ್ಲ.
ಪ್ರತಿನಿಧಿ: ಶುಗರ್, ಬಿಪಿ ಯಾವುದು ಇಲ್ವಾ?
ಜನೌಷಧಿ ಕೇಂದ್ರ: ಒಂದು ಮಾತ್ರೆ ಬಿಟ್ಟು ಯಾವುದು ಇಲ್ಲ..


ಇದು ಬೆಂಗಳೂರಿನ ರಾಜಾಜಿನಗರದ ಜನಔಷದ ಕೇಂದ್ರದ ಪರಿಸ್ಥಿತಿ. ಜನಔಷದಿ ಕೇಂದ್ರ ಪ್ರಕಾರವೇ ಒಂದೂವರೇ ತಿಂಗಳಿನಿಂದ ರೋಗಿಗಳಿಗೆ ಅಗತ್ಯವಾಗಿ ಬೇಕಾಗುವ ಬಿಪಿ ಶುಗರ್ ಮಾತ್ರೆಗಳೇ ಇಲ್ಲ. ಇದು ರಾಜಾಜಿನಗರದ ಪರಿಸ್ಥಿತಿಯಾದ್ರೆ. ಮತ್ತಿಕೆರೆ ಜನಔಷಧ ಕೇಂದ್ರದ ಪರಿಸ್ಥಿತಿ ಭಿನ್ನವಾಗಿಲ್ಲ.

ಮತ್ತಿಕೆರೆ ಜನಔಷಧ ಕೇಂದ್ರದಲ್ಲಿ ಕೂಡ ಒಂದು ಟಾಬ್ಲೆಟ್‍ಗಳು ಇದ್ರೆ ಇನ್ನೊಂದು ಇಲ್ಲ. ಶ್ರೀರಾಂಪುರ ಜನಔಷಧಿ ಕೇಂದ್ರದ ಮಾಲೀಕರನ್ನ ಯಾವ ಯಾವ ಟಾಬ್ಲೇಟ್ ಇದೆ ಸರ್, ಶುಗರ್, ಬಿಪಿ ಮಾತ್ರೆಗಳು ಇದೀಯಾ ಅಂದ್ರೆ. ಯಾವುದು ಇದೆ ಅಂತಾ ಹೇಳಕ್ಕೆ ಅಗಲ್ಲ ರೀ ಅಂತಾ ಹೇಳುತ್ತಾರೆ

ರಿಯಾಲಿಟಿ ಚೆಕ್ 3
ಆಸ್ಪತ್ರೆ: ಶಂಕರ ಆಸ್ಪತ್ರೆ
ಸ್ಥಳ: ಶಂಕರಪುರಂ, ಬಸವನಗುಡಿ,
ಮಳಿಗೆ: ಜನೌಷಧಿ ಮಳಿಗೆ
ಸಮಯ: ಮಧ್ಯಾಹ್ನ 2 ಗಂಟೆ

ಸಾರ್ ಬಿಪಿ ಟ್ಯಾಬ್ಲೆಟ್ ಕೊಡಿ, ಸ್ಟಾಕ್ ಇಲ್ಲ, ಶುಗರ್‍ದು, ಅಯ್ಯೋ ಸ್ಟಾಕ್ ಇಲ್ಲ, ಫೀವರ್‍ದು ಇದ್ಯಾ? ಈ ಟ್ಯಾಬ್ಲೆಟ್ ಇಲ್ಲ ಬೇರೆ ಕಡೆ ಹೋಗಿ ಅಂತ ಹೇಳುತ್ತಾರೆ.
ಪ್ರತಿನಿಧಿ – ಮೆಟಾಫಾರ್ಮಿನ್ ಇದ್ಯಾ
ಜನೌಷಧ ಸೆಂಟರ್‍ನವರು – ಇಲ್ಲ
ಪ್ರತಿನಿಧಿ – ಗ್ಲೂಕೋ ಮೀಟರ್, ಡಯಾಬಿಟಾನೋ
ಜನೌಷಧ ಸೆಂಟರ್‍ನವರು – ಸ್ಟಾಕೇ ಇಲ್ಲ ನಾವೇನ್ ಮಾಡೋಣ

ಕೇಂದ್ರದ ಮಾಹಿತಿ ಪ್ರಕಾರ ಕರ್ನಾಟಕಕ್ಕೆ ಅತಿ ಹೆಚ್ಚು ಔಷಧಿ ವಿತರಣೆಯಾಗುತ್ತಿದೆ. ಆದ್ರೆ ಕಳ್ಳಮಾರ್ಗದಲ್ಲಿ ಎಲ್ಲಿ ಹೋಗುತ್ತಿದೆ ಅನ್ನೋದೆ ಮಿಲಿಯನ್ ಡಾಲರ್ ಪ್ರಶ್ನೆ. ಕಳ್ಳನ ಮನಸು ಹುಳ್ಳ ಹುಳ್ಳಗೆ ಅನ್ನೋ ಹಾಗೆ ಜನೌಷಧ ಕೇಂದ್ರದ ಖಾಲಿ ಔಷಧ ರ್ಯಾಕ್‍ಗಳನ್ನು ಸೆರೆ ಹಿಡಿಯಲು ಹೋದಾಗ ಪಬ್ಲಿಕ್ ಟಿವಿ ಕ್ಯಾಮೆರ ಕಿತ್ತುಕೊಳ್ಳಲು ಮುಂದಾದ್ರು. ದುಗುಡದಲ್ಲಿ ಬಂದಿದ್ದ ಬಡಜೀವಗಳಿಗೆ, ದುಬಾರಿ ದುಡ್ಡು ಕೊಡಲಾಗದೇ ಜೀವ ಉಳಿಸುವ ಆಸೆಯಲ್ಲಿ ಜನೌಷಧಿ ಕೇಂದ್ರಕ್ಕೆ ಬರುವ ರೋಗಿಗಳಿಗೆ ಹಾಗೆ ವಾಪಸು ಕಳಿಸುತ್ತಿದ್ದಾರೆ ಜನಔಷಧಿ ಕೇಂದ್ರದವರು. ಜನೌಷಧ ಕೇಂದ್ರಕ್ಕೆ ಅಲೆದು ಅಲೆದು ಜನ ಹಿಡಿಶಾಪ ಹಾಕಿದ್ರು.

ರಿಯಾಲಿಟಿ ಚೆಕ್ – 4
ಎನ್ ಆರ್ ಕಾಲೋನಿ
ಪ್ರತಿನಿಧಿ – ಗ್ಲಿಮಿಸ್ಟಾರ್ ಇದ್ಯಾ ಸರ್
ಜನೌಷಧಿಯವರು – ಇಲ್ಲ
ಪ್ರತಿನಿಧಿ – ಮೆಟಾಫಾರ್ಮಿನ್ ಇದ್ಯಾ
ಜನೌಷಧಿಯವರು – ಅದ್ ಇಲ್ಲ ಸ್ಟಾಕ್ ಖಾಲಿಯಾಗಿದೆ, ಬರುತ್ತೆ ಅನಿಸುತ್ತೆ ಸದ್ಯದಲ್ಲಿಯೇ.

ಹಾಗಿದ್ರೆ ಸದ್ಯ ಜೆನರಿಕ್ ಹಾಗೂ ಜನೌಷಧದಲ್ಲಿ ಯಾವೆಲ್ಲ ಮಾತ್ರೆಗಳು ಸಿಗಲ್ಲ ಇದಕ್ಕೆ ಏನು ಕಾರಣ ಅನ್ನೋದನ್ನು ಹೇಳ್ತೀವಿ ಕೇಳಿ

ಮೆಟಾಫಾರ್ಮಿನ್ – ಹೈ ಬ್ಲಡ್ ಶುಗರ್ ಕಂಟ್ರೋಲ್‍ಗೆ
ಗ್ಲೂಕೋ ಮೀಟರ್ – ಡಯಾಬಿಟಿಕ್
ಡಯಾಬಿಟಾನೋ – ಡಯಾಬಿಟಿಸ್
ಆಂಟಿಹೈಪರ್‍ಟೆನ್ಸಿವ್ – ಬಿಪಿ ಸಮಸ್ಯೆಗೆ
ಟ್ಯಾಜಿಲ್ಕೋ – ಹೈಬ್ಲಡ್ ಶುಗರ್

ಸಾಮಾನ್ಯವಾಗಿ ಡಯಾಬಿಟಿಸ್, ಶುಗರ್ ಹಾಗೂ ಬಿಪಿ ಮಾತ್ರೆಗಳು ದುಬಾರಿ. ಖಾಸಗಿ ಮೆಡಿಕಲ್‍ಗಿಂತ ಜನೌಷಧದಲ್ಲಿ ಶೇ 75 ರಷ್ಟು ಕಡಿಮೆ ಇರುತ್ತೆ. ಉದಾಹರಣೆಗೆ ಖಾಸಗಿ ಮೆಡಿಕಲ್‍ನಲ್ಲಿ ನೂರು ರೂ ಇರುವ ಬಿಪಿ ಮಾತ್ರೆ ಜನೌಷಧ ಕೇಂದ್ರದಲ್ಲಿ ಕೇವಲ ಹದಿನೈದು ರೂಗೆ ಲಭ್ಯ ಇರುತ್ತೆ. ಆದ್ರೇ ಈಗ ಅತಿ ಹೆಚ್ಚು ಜನ ಬಳಸೋ ಈ ಮಾತ್ರೆಗಳು ಜನೌಷಧ ಕೇಂದ್ರದಲ್ಲಿ ಸಿಗ್ತಾ ಇಲ್ಲ ಇದಕ್ಕೆ ಕಾರಣಗಳೇನು ಅನ್ನೋದನ್ನು ನೋಡಿದ್ರೆ

ಜನೌಷಧ ಔಷಧಿ ಅಲಭ್ಯಕ್ಕೆ ಏನ್ ಕಾರಣ?
1. ಖಾಸಗಿಯವರ ಲಾಬಿಗೆ ಮಣಿದಿರುವ ಸಾಧ್ಯತೆ. ಕೆಲ ಔಷಧಿಗಳು ಅಕ್ರಮವಾಗಿ ಮಾರಾಟವಾಗಿರುವ ಶಂಕೆಯೂ ಇದೆ.
2. ಲಾರಿ ಮುಷ್ಕರದಿಂದ ಕೊಂಚ ಸಮಸ್ಯೆ ಆಗಿರೋದು ನಿಜ, ಆದ್ರೆ ಕೆಲ ಸ್ಟೋರ್‍ನಲ್ಲಿ ಕಳೆದೆರಡು ತಿಂಗಳಿಂದ ಸಮಸ್ಯೆ
3. ಡೀಲರ್ಸ್ ಹಾಗೂ ವಿತರಕರ ಮಧ್ಯೆ ಸಂವಹನ ಕೊರತೆನೂ ಇರಬಹುದು.
4. ಕೆಲ ಔಷಧಗಳನ್ನು ಸ್ಟೋರೆಜ್ ಮಾಡುವ ಅತ್ಯಾಧುನಿಕ ಸಾಧನ ಅನೇಕ ಕಡೆ ಇಲ್ಲ. ಇದ್ರಿಂದ ದೀರ್ಘಾವದಿಗೆ ಔಷಧಗಳನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ
5 ಅತಿ ಹೆಚ್ಚು ಡಿಮ್ಯಾಂಡ್ ರಾಜ್ಯದಲ್ಲಿರೋದ್ರಿಂದ ಪೂರೈಕೆ ಸಮಸ್ಯೆ ಆಗುತ್ತಿರುವ ಸಾಧ್ಯತೆಯೂ ಇದೆ.

ರಾಜ್ಯ ಸರ್ಕಾರದ ಬುಡದಲ್ಲಿಯೇ ಇರುವ ಜೆನೆರಿಕ್ ಔಷಧದಲ್ಲೂ ಸಮಸ್ಯೆಯಾಗಿದೆ. ಕೇಂದ್ರ ಜನೌಷಧದಲ್ಲೂ ಅವ್ಯವಸ್ಥೆ. ಜೀವ ನೀಡುವ ಭರವಸೆ ಕೊಟ್ಟು ಕೊಲ್ಲುವ ಕಟುಕರಾಗಿದೆ ಇರಲಿ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮೊದಲು ಔಷಧಿ ಕೇಂದ್ರವನ್ನು ಸರಿಪಡಿಸಲಿ .

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *