ಕಳ್ಳ ಕಳ್ಳ ಅಂತ ಅಟ್ಟಾಡಿಸಿದ ಜನ – ಬಾಂಗ್ಲಾದಲ್ಲಿ ಕಾಲುವೆಗೆ ಹಾರಿ ಹಿಂದೂ ವ್ಯಕ್ತಿ ಸಾವು

1 Min Read

ಢಾಕಾ: ಕಳ್ಳತನ (Theft Suspicion) ಮಾಡಿದ್ದಾನೆ ಅಂತ ಬೆನ್ನಟ್ಟಿ ಬರುತ್ತಿದ್ದ ಗುಂಪಿನಿಂದ ತಪ್ಪಿಸಿಕೊಳ್ಳಲು ಓಡುವಾಗ ಕಾಲುವೆಗೆ ಜಿಗಿದು 25 ವರ್ಷದ ಹಿಂದೂ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬಾಂಗ್ಲಾದೇಶದಲ್ಲಿ (Bangladesh) ನಡೆದಿದೆ.

ಬಾಂಗ್ಲಾದ ನೌಗಾಂವ್ ಜಿಲ್ಲೆಯ ಮಹಾದೇಬ್‌ಪುರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಮೃತದೇಹ ಹೊರ ತೆಗೆಯಲಾಗಿದೆ. ಬಲಿಪಶುವನ್ನ ಭಂಡಾರ್‌ಪುರ ಗ್ರಾಮದ ನಿವಾಸಿ ಮಿಥುನ್ ಸರ್ಕಾರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮಸೀದಿ ಬಳಿಯ ಅಕ್ರಮ ಕಟ್ಟಡಗಳು ಧ್ವಂಸ – ದೆಹಲಿಯಲ್ಲಿ ಕಲ್ಲುತೂರಾಟ, ಐವರು ಪೊಲೀಸರಿಗೆ ಗಾಯ

ಏನಾಯ್ತು?
ಸ್ಥಳೀಯರು ಹೇಳುವಂತೆ, ಮಿಥುನ್‌ ಸರ್ಕಾರ್‌ ಕಳ್ಳತನ ಮಾಡಿದ್ದಾರೆ ಅಂತ ತಿಳಿದು ಸ್ಥಳೀಯರ ಗುಂಪೊಂದು ಅಟ್ಟಾಡಿಸಿಕೊಂಡು ಹೋಗ್ತಿತ್ತು. ತಪ್ಪಿಸಿಕೊಳ್ಳೋದಕ್ಕಾಗಿ ಓಡ್ತಿದ್ದ ಮಿಥುನ್‌ ಕಾಲುವೆಗೆ ಹಾರಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನ ಹೊರಕ್ಕೆ ತೆಗೆದಿದ್ದಾರೆ. ಆದ್ರೆ ಮಿಥುನ್‌ ಕಳ್ಳತನ ಮಾಡಿದ್ದಾರೆಯೇ ಇಲ್ಲವೇ ಅನ್ನೋದು ಇನ್ನೂ ದೃಢವಾಗಿಲ್ಲ.

ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪ ಸಂಖ್ಯಾತರ ಮೇಲಿನ ಸರಣಿ ದಾಳಿಗಳು ನಡೆಯುತ್ತಿರುವ ಬೆನ್ನಲ್ಲೇ ಈ ಘಟನೆ ನಡೆಸಿದೆ. ಮಿಥುನ್‌ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ವೆನೆಜುವೆಲಾದಂತೆ ಟ್ರಂಪ್ ಭಾರತದ ಪ್ರಧಾನಿ ಮೋದಿಯನ್ನು ಕಿಡ್ನ್ಯಾಪ್ ಮಾಡ್ತಾರಾ? – ಪೃಥ್ವಿರಾಜ್ ಚವಾಣ್ ವಿವಾದಿತ ಹೇಳಿಕೆ

Share This Article