ಮನಸ್ಸಿಗೆ ಮುದನೀಡುವ ‘ಚೇಸ್’ ಗಾನಲಹರಿ ಹೊತ್ತ ಜುಕ್ ಬಾಕ್ಸ್ ರಿಲೀಸ್

Public TV
2 Min Read

ಸಿನಿಮಾ ಮಾಡುವುದು ಒಂದು ಸವಾಲು. ಅದರಲ್ಲಿಯೂ ಮಾಡಿದ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವುದು ದೊಡ್ಡ ಸವಾಲು. ಅದೇ ರೀತಿ ಸಿನಿಮಾ ರಿಲೀಸ್ ಆದ್ಮೇಲೆ ಸೌಂಡ್ ಮಾಡೋದು ಕಾಮನ್. ಆದರೆ ‘ಈಟ್ಸ್ ನಾಟ್ ಎ ಈಸಿ ಜಾಬ್’ ಹಾಡು ರಿಲೀಸ್‍ಗೂ ಮುನ್ನ ಸ್ಯಾಂಪಲ್‌ನಿಂದಲೇ ಕಿಚ್ಚು ಹಚ್ಚಿದೆ. ಆದರೆ ಹಾಡುಗಳು, ಟೀಸರ್ ಮೂಲಕವೇ ಕ್ರೇಜ್ ಕ್ರಿಯೇಟ್ ಮಾಡಿರುವ ಸಿನಿಮಾ ‘ಚೇಸ್’.

ಬೆಳ್ಳಿತೆರೆ ಬಾನಂಗಳದಲ್ಲಿ ಮಿಂಚಲು ಸನ್ನದ್ಧವಾಗಿರುವ ‘ಚೇಸ್’ ಸಿನಿಮಾದ ಆರು ಹಾಡುಗಳು ವೈರೆಟಿ ಫ್ಲೇವರ್‌ಗಳು. ಮೆಲೋಡಿ, ಎನರ್ಜಿಟಿಕ್ ನಂಬರ್ ಎಲ್ಲವೂ ಕೇಳುಗರಿಗೆ ಮುದ ನೀಡುತ್ತಿವೆ. ನಿಂತಲ್ಲೇ ಗುನುಗುವಂತೆ ಮಾಡಿವೆ. ಈಗ ಚಿತ್ರತಂಡ ಇಡೀ ಆಲ್ಬಂ ಗಾನಲಹರಿ ಬಿಡುಗಡೆ ಮಾಡಿ ಗಮನಸೆಳೆಯುತ್ತಿದೆ. ಇದನ್ನೂ ಓದಿ:  90 ಕಿ.ಮೀವರೆಗೂ ಬೈಕ್‍ನಲ್ಲಿ ಮೃತಮಗನ ಸಾಗಿಸಿದ ತಂದೆ

ವಿಜಯ್ ಪ್ರಕಾಶ್ ಮತ್ತು ಕೇರಳದ ಪ್ರಖ್ಯಾತ ಗಾಯಕ ಮನ್ಸೂರ್ ಮೊಹಮದ್ ಕಂಠಸಿರಿಯಲ್ಲಿ ಮೂಡಿಬಂದಿರುವ ‘ಮನದ ಹೊಸಿಲಾ ಡ್ಯುಯೇಟ್ ಸಿಂಗಿಂಗು’, ಬಾಲಿವುಡ್ ಗಾಯಕ ಬೆನ್ನಿ ದಯಾಳ್ ಕಂಠಕುಣಿಸಿರುವ ‘ಶಾ ಲಾಲಾ ಗಾನಬಜಾನ’, ಸಂಚಿತ್ ಹೆಗ್ಡೆ ಧ್ವನಿಯಾಗಿರುವ ಹಾಡು, ಟೈಟಲ್ ಟ್ರ್ಯಾಕ್ ಸೇರಿದಂತೆ ಚೇಸ್ ಸಿನಿಮಾದ ಎಲ್ಲ ಹಾಡುಗಳು ಸಂಗೀತ ಪ್ರಿಯರ ಮನಸ್ಸಿನಲ್ಲಿ ನೆಲೆಸಿವೆ.

ಇಷ್ಟು ಹಾಡುಗಳನ್ನು ನಿರ್ದೇಶಕ ಅಲೋಕ್ ಶೆಟ್ಟಿ ಚೆಂದವಾಗಿ ರೂಪಿಸುವುದರ ಜೊತೆಗೆ ಹಾಡೊಂದಕ್ಕೆ ತಾವೇ ಪದಗಳನ್ನು ಪೊಣಿಸಿ ಸಾಹಿತ್ಯ ಬರೆದಿದ್ದಾರೆ. ಉಳಿದಂತೆ ಎಲ್ಲ ಗಾನಲಹರಿಗೂ ಉಮೇಶ್ ಪಿಲಿಕುಡೇಲು ಸಾಹಿತ್ಯದ ತಂಪು, ಕಾರ್ತಿಕ್ ಆಚಾರ್ಯ ಸಂಗೀತದ ಇಂಪು ಹಾಡುಗಳಿಗಿದೆ.

ಮನೋಹರ್ ಸುವರ್ಣ ನಿರ್ಮಾಣದ ಚೇಸ್ ಸಿನಿಮಾಗೆ ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಅನಂತ್ ರಾಜ್ ಅರಸ್ ಕ್ಯಾಮೆರಾ ಕೈಚಳಕ, ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ ಸಿನಿಮಾಕ್ಕಿದೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಮಿ, ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದನ್ನೂ ಓದಿ:  ವಾಲ್ಮೀಕಿ, ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಕಿಚ್ಚ ಸುದೀಪ್ 

ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *