ಬಿಗ್ ಬಾಸ್‌ಗೆ ಚಾರ್ಲಿ ಯಾಕೆ ಬಂದಿಲ್ಲ- ಅಪ್‌ಡೇಟ್‌ ಕೊಟ್ರು ನಿರ್ದೇಶಕ ಕಿರಣ್‌ ರಾಜ್

Public TV
2 Min Read

ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ಗೆ (Bigg Boss Kannada 10) ಈ ಬಾರಿ ಚಾರ್ಲಿ ಪ್ರವೇಶ ಮಾಡಲಿದೆ ಎಂದು ವಾಹಿನಿ ಹೇಳಿಕೊಂಡಿತ್ತು. ಚಾರ್ಲಿ (Charlie) ದೊಡ್ಮನೆಗೆ ಬಂದೇ ಬರುತ್ತಾಳೆ ಎಂದು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದರು. ಆದರೆ ಗ್ರ್ಯಾಂಡ್ ಓಪನಿಂಗ್ ಸಮಯದಲ್ಲಿ ಚಾರ್ಲಿ ಬರಲೇ ಇಲ್ಲ. ಹಾಗಾಗಿ ಸಹಜವಾಗಿ ಚಾರ್ಲಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಹಾಗಾದರೆ ಚಾರ್ಲಿ ಬಿಗ್‌ಬಾಸ್ ಮನೆಗೆ (Bigg Boss) ಬರಲ್ವಾ? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ಗುಡ್ ನ್ಯೂಸ್.

ಬಿಗ್‌ಬಾಸ್‌ಗೆ ಮೊದಲ ಸ್ಪರ್ಧಿಯಾಗಬೇಕಿದ್ದ ಚಾರ್ಲಿ ಖಂಡಿತ ದೊಡ್ಮನೆಗೆ ಹೆಜ್ಜೆ ಇಡುತ್ತಾಳೆ. 777 ಚಾರ್ಲಿ ಸಿನಿಮಾ ನೋಡಿ ಇಷ್ಟಪಟ್ಟವರಿಗೆ ದೊಡ್ಮನೆಯಲ್ಲಿ ಚಾರ್ಲಿ ಹೇಗೆ ಇರುತ್ತಾಳೆ ಎಂಬ ಕುತೂಹಲವಿದೆ. ಅದಕ್ಕೂ ಉತ್ತರ ಇಲ್ಲಿದೆ. ಬಿಗ್ ಮನೆಗೆ ಚಾರ್ಲಿ ಸ್ಪೆಷಲ್ ಆಗಿ ಎಂಟ್ರಿ ಕೊಡುತ್ತಾಳೆ. ಈ ಬಗ್ಗೆ ಸ್ವತಃ ಚಾರ್ಲಿ ಚಿತ್ರ ನಿರ್ದೇಶಕ ಕಿರಣ್ ರಾಜ್ ಪಬ್ಲಿಕ್‌ ಟಿವಿ ಡಿಜಿಟಲ್‌ಗೆ ಮಾಹಿತಿ ನೀಡಿದ್ದಾರೆ.‌ ಇದನ್ನೂ ಓದಿ:ಬಂದೂಕು ಹಿಡಿದು ಬೀದಿಗೆ ಬಂದ ರಾಖಿ ಸಾವಂತ್

ಬಿಗ್ ಬಾಸ್ ಮನೆಗೆ ಚಾರ್ಲಿ ಬಂದೇ ಬರುತ್ತಾಳೆ. ಸದ್ಯದಲ್ಲೇ ಅವಳು ಸ್ಪೆಷಲ್ ಎಂಟ್ರಿ ಕೊಡುತ್ತಾಳೆ. ಅದಕ್ಕಾಗಿ ಸಕಲ ತಯಾರಿ ಕೂಡ ನಡೆಯುತ್ತಿದೆ. ಈ ಸ್ಪೆಷಲ್ ಎಂಟ್ರಿ ಕೊಡಲೆಂದೇ ಗ್ರ್ಯಾಂಡ್ ಓಪನಿಂಗ್‌ನಲ್ಲಿ ಚಾರ್ಲಿ ಎಂಟ್ರಿ ಕೊಟ್ಟಿಲ್ಲ. ವೀಕ್ಷಕರಿಗೆ ಚಾರ್ಲಿ ನಿರಾಸೆ ಮಾಡಲ್ಲ ಅಂತಾ ಕಿರಣ್ ರಾಜ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಮತ್ತೊಂದು ಪರಭಾಷಾ ಚಿತ್ರವನ್ನು ಒಪ್ಪಿಕೊಂಡ ಶಿವಣ್ಣ

ದೊಡ್ಮನೆಯ ಆಟಕ್ಕೆ ಚಾರ್ಲಿಯನ್ನು ಕಳುಹಿಸಲು ಅನಿಮಲ್ ಬೋರ್ಡ್‌ನಿಂದ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮನರಂಜನೆಯ ಮೇರೆಗೆ ಚಾರ್ಲಿ ದೊಡ್ಮನೆಗೆ ಬರುತ್ತಾಳೆ. ಆದರೆ ಎಷ್ಟು ದಿನ ಚಾರ್ಲಿ ಬಿಗ್ ಬಾಸ್ ಒಳಗೆ ಇರುತ್ತಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಅಪ್‌ಡೇಟ್ ಹಂಚಿಕೊಂಡಿದ್ದಾರೆ.

‘777 ಚಾರ್ಲಿ’ ಚಿತ್ರದಲ್ಲಿ ನಟಿ ಸಂಗೀತಾ- ಚಾರ್ಲಿ ಕಾಂಬೋ ಕೂಡ ಚೆನ್ನಾಗಿತ್ತು. ಬಿಗ್ ಬಾಸ್‌ನಲ್ಲಿ ಇಬ್ಬರು ಜೊತೆಯಾದರೆ ಹೇಗಿರುತ್ತೆ ಎಂಬ ಕೌತುಕ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಚಾರ್ಲಿ ಯಾಕೆ ತಡವಾಗಿ ಬಿಗ್ ಮನೆಗೆ ಕಾಲಿಡ್ತಿದ್ದಾರೆ ಎಂಬುದರ ಬಗ್ಗೆ ಉತ್ತರ ಸಿಕ್ಕಿದೆ.

ಶೃತಿ ನಾಗೇಶ್‌, ಪಬ್ಲಿಕ್‌ ಟಿವಿ ಡಿಜಿಟಲ್‌ 

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್