ವೈಭವದಿಂದ ನೆರವೇರಿದ ಕಲ್ಯಾಣ ಕರ್ನಾಟಕದ ಸಿದ್ದಿ ಪುರುಷ ಶ್ರೀ ವಿಶ್ವಾರಾಧ್ಯರ ರಥೋತ್ಸವ

1 Min Read

ಯಾದಗಿರಿ: ಕಲ್ಯಾಣ ಕರ್ನಾಟಕದ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ದಿ ಪುರುಷ ಶ್ರೀ ವಿಶ್ವಾರಾಧ್ಯರ ರಥೋತ್ಸವ ವೈಭವದಿಂದ ನೆರವೇರಿದೆ.

ಭಾನುವಾರ ಬೆಳಿಗ್ಗೆ ವಿಶ್ವಾರಾಧ್ಯರ ಮಂದಿರದಲ್ಲಿ ರಥಾಂಗ ಹೋಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಶ್ರೀ ಮಠದ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಸಲಾಯಿತು. ನಂತರ ನಂದಿಕೋಲು ನೃತ್ಯ ಹಾಗೂ ವಿವಿಧ ಕಲಾತಂಡಗಳ ನೃತ್ಯ ನಡೆಯಿತು. ಸಂಜೆ ಲಕ್ಷಾಂತರ ಭಕ್ತ ಸಮೂಹದಲ್ಲಿ ಭವ್ಯವಾಗಿ ರಥೋತ್ಸವ ಜರುಗಿತು. ಈ ವೇಳೆ ಭಕ್ತರ ಜಯಘೋಷ ಮೊಳಗಿತು. ನೆರೆದ ಭಕ್ತಸಮೂಹ ರಥಕ್ಕೆ ಕಾರಿಕಾ, ಉತ್ತತ್ತಿ, ಬಾಳೆ ಹಣ್ಣು ಅರ್ಪಿಸಿದರು. ಇದನ್ನೂ ಓದಿ:ಒಳ ಮೀಸಲಾತಿಯಲ್ಲಿರೋ ಗೊಂದಲ ನಿವಾರಣೆ ಮಾಡಿ – ರಾಜ್ಯಪಾಲರಿಗೆ ಬಿಜೆಪಿ ನಿಯೋಗ ದೂರು

ಜಾತ್ರೆಯಲ್ಲಿ ಸಚಿವರಾದ ಶರಣಬಸ್ಸಪ್ಪಗೌಡ ದರ್ಶನಾಪುರ, ರಾಮಲಿಂಗಾರೆಡ್ಡಿ ವಿವಿಧ ರಾಜಕೀಯ ಗಣ್ಯರು ಹಾಗೂ ಕೊಪ್ಪಳದ ಗವಿಸಿದ್ದೇಶ್ವರ ಮಹಾಸಂಸ್ಥಾನದ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರು ಜಾತ್ರೆಯಲ್ಲಿ ಸಾನಿಧ್ಯವಹಿಸಿದರು. ಜಾತ್ರೆಯಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಭಾಗದಿಂದ ಲಕ್ಷಾಂತರ ಭಕ್ತರು ಆಗಮಿಸಿ, ದೇವರ ಕೃಪೆಗೆ ಪಾತ್ರರಾದರು.

Share This Article