ಓವರ್ ಟೇಕ್ ಮಾಡಿದ್ದಕ್ಕೆ ಹಲ್ಲೆ ಆರೋಪ – ಅನಂತ್ ಕುಮಾರ್ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್

Public TV
2 Min Read

– ತಪ್ಪಿದ್ರೆ ಅನಂತ್ ಕುಮಾರ್ ಕ್ಷಮೆ ಕೇಳ್ತಾರೆ: ಶಾಸಕ ಸುರೇಶ್‌ಗೌಡ

ಬೆಂಗಳೂರು: ಕಾರು ಓವರ್ ಟೇಕ್ (Car Overtake) ಮಾಡಿದ್ದಕ್ಕೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಬಿಜೆಪಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಸೇರಿ ಮೂವರ ವಿರುದ್ಧ ದಾಬಸ್‌ಪೇಟೆಯಲ್ಲಿ (Dabaspete) ಪ್ರಕರಣ ದಾಖಲಾಗಿದೆ.

ಓವರ್‌ಟೇಕ್ ವಿಚಾರವಾಗಿ ನೆಲಮಂಗಲದ ಹಳೇ ನಿಜಗಲ್ ಬಳಿ ಕಾರು ಅಡ್ಡಗಟ್ಟಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಸಲ್ಮಾನ್, ಸೈಫ್, ಇಲಿಯಾಜ್, ಗುಲಷಿರ್ ಉನ್ನೀಸಾ ಎಂಬವರು ದೂರು ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಹೆಗಡೆ ಕಾರಿನಲ್ಲಿದ್ದ ನಾಲ್ವರನ್ನೂ ನೆಲಮಂಗಲ ಡಿವೈಎಸ್‌ಪಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ. ಇದನ್ನೂ ಓದಿ: 2 ಕೋಟಿಗೂ ಅಧಿಕ ಮೌಲ್ಯದ ಫ್ಲ್ಯಾಟ್‌ ಸೇರಿ ʻಬಂಗಾರಿʼಗೌಡಳ 3.98 ಕೋಟಿ ಆಸ್ತಿ ಜಪ್ತಿ

ಅನಂತ್ ಕುಮಾರ್ ಹೆಗಡೆ ಅವರಿಗೆ ಬೆದರಿಕೆ ಇರುವ ಕಾರಣ ಗನ್ ತೆಗೆದಿರೋದಾಗಿ ಗನ್‌ಮ್ಯಾನ್ ಶ್ರೀಧರ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ದಾಬಸ್ ಪೇಟೆ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಾಜಿ ಸಂಸದ ಡಿಕೆ ಸುರೇಶ್‌ಗೆ ಇಡಿ ಡ್ರಿಲ್ – ಜು.8ಕ್ಕೆ ಮತ್ತೆ ಬುಲಾವ್

ಘಟನೆ ಸಂಬಂಧ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಪ್ರತಿಕ್ರಿಯಿಸಿ, ಅನಂತ್‌ಕುಮಾರ್ ಹೆಗಡೆ ಸೇರಿದಂತೆ ಮೂವರ ಮೇಲೆ ಎಫ್‌ಐಆರ್ ದಾಖಲಾಗಿದೆ, ಎ.1 ಅನಂತ್‌ಕುಮಾರ್ ಹೆಗಡೆ, ಎ2 ಗನ್ ಮ್ಯಾನ್, ಎ3- ಚಾಲಕ ಆರೋಪಿಗಳಾಗಿದ್ದಾರೆ. ತನಿಖೆ ಮಾಡಿ ಅಗತ್ಯವಿದ್ದರೆ ಬಂಧಿಸುತ್ತೆವೆ. ಇದರೊಂದಿಗೆ ಗಾಯಾಳುಗಳ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ ಪ್ರಕಟ – ಎಎಪಿ 2, ಬಿಜೆಪಿ, ಕಾಂಗ್ರೆಸ್, ಟಿಎಂಸಿ ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು

ತಪ್ಪಿದ್ದರೆ ಕ್ಷಮೆ ಕೇಳ್ತಾರೆ: ಶಾಸಕ ಸುರೇಶ್
ಈ ಕುರಿತು ಮಾತನಾಡಿರುವ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಮಾತನಾಡಿ, 5 ಬಾರಿ ಸಂಸದರಾಗಿ ಆಯ್ಕೆಯಾದವರು ಅನಂತ್ ಕುಮಾರ್. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುವಾಗ ಮಾರ್ಗ ಮಧ್ಯೆದಲ್ಲಿ ಗಲಾಟೆ ನಡೆದಿದೆ. ಅನಂತ್ ಕುಮಾರ್ ಹೆಗಡೆ ಇದ್ದ ಕಾರಿಗೆ ಪಕ್ಕದಲ್ಲಿ ಬಂದ ಕಾರಿನವರು ಚಮಕ್ ಕೊಟ್ಟಿದ್ದಾರೆ. ಆಗ ಸರಿಯಾದ ರೀತಿಯಲ್ಲಿ ಹೋಗಿ ಅಂತ ಹೇಳಿದ್ದಾರೆ. ಗೊಂದಲವಾಗಿ ಗಲಾಟೆ ಶುರುವಾಗಿದೆ. ಗನ್ ಮ್ಯಾನ್ ಮತ್ತು ಡ್ರೈವರ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ರಸ್ತೆಯಲ್ಲಿ ಸಾಕಷ್ಟು ಆಕ್ಸಿಡೆಂಟ್, ಗೊಂದಲ ಆಗೋದು ಸರ್ವೇ ಸಾಮಾನ್ಯ. ಇಂತಹ ವಿಚಾರದಲ್ಲಿ ಗೊಂದಲ ಬೇಡ. ಕೂತು ಮಾತನಾಡಿ ಬಗೆಹರಿಸಿಕೊಳ್ಳೋಣ. ಅನಂತ್ ಕುಮಾರ್ ಹೆಗಡೆ ತಪ್ಪಿದ್ರೆ ಅವರು ಕ್ಷಮೆ ಕೇಳುತ್ತಾರೆ. ನಿಮ್ಮ ತಪ್ಪಿದ್ರೆ ನೀವು ಕ್ಷಮೆ ಕೇಳಿ ಅಂತ ಹೇಳಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನನಗೆ ಚರಂಡಿ, ರಸ್ತೆಯೂ ಮಾಡಿಸೋಕೆ ಆಗ್ತಿಲ್ಲ – ಮೊಳಕಾಳ್ಮೂರು ಶಾಸಕ ಗೋಪಾಲಕೃಷ್ಣ ಅಸಹಾಯಕತೆ

ಕಾಫಿ ಡೇಯಲ್ಲಿ ಕರೆಸಿ ಮುಸ್ಲಿಂ ಅವರ ಜೊತೆ ಮಾತನಾಡಿದ್ದೇನೆ. ಈ ಕೇಸ್ ಮುಂದುವರಿಸೋದು ಬೇಡ ಅಂತ ಹೇಳಿದ್ದೇನೆ. ಕಾಂಗ್ರೆಸ್‌ನವರು ಯಾವಾಗಲೂ ರಾಜಕೀಯವಾಗಿ ತುಷ್ಟಿಕರಣ ಮಾಡುತ್ತಿರುತ್ತಾರೆ. ಪೊಲೀಸ್ ಅವರು ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗುವುದು ಬೇಡ. ಕಾನೂನಿನ ಪ್ರಕಾರ ತಪ್ಪಿದ್ರೆ ಕ್ರಮ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: 2 ಶತಕ, ಡಿಫರೆಂಟ್ ಸೆಲೆಬ್ರೇಷನ್ – ಈ ಸಾಧನೆ ಮಾಡಿದ ಏಷ್ಯಾದ ಏಕೈಕ ವಿಕೆಟ್‌ ಕೀಪರ್‌ ಪಂತ್‌

Share This Article