ಭಾರತದ ಚಂದ್ರಯಾನ-3 V/S ರಷ್ಯಾದ ಲೂನಾ-25: ಚಂದ್ರನ ಮೇಲೆ ಮೊದಲು ಹೆಜ್ಜೆ ಇಡೋದು ಯಾರು?

Public TV
3 Min Read

ನವದೆಹಲಿ: ಇತ್ತ ಭಾರತದ ಚಂದ್ರಯಾನ-3 (Chandrayaan-3) ಮಿಷನ್‌.. ಅತ್ತ ರಷ್ಯಾದ (Russia) ಲೂನಾ-25 (Luna-25) ಮಿಷನ್‌. ಈ ಎರಡೂ ದೇಶಗಳು ತಿಂಗಳ ಅಂತರದಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಡಲು ಬಾಹ್ಯಾಕಾಶ ನೌಕೆಗಳನ್ನು ಉಡಾಯಿಸಿವೆ. ಕ್ರಿಕೆಟ್‌ನಲ್ಲಿ ಭಾರತ v/s ಪಾಕಿಸ್ತಾನ ಎನ್ನುವಂತೆ ಈಗ ವಿಜ್ಞಾನ ವಲಯದಲ್ಲಿ ಭಾರತ v/s ರಷ್ಯಾ ಎನ್ನುವಂತಾಗಿದೆ. ಇವೆರಡರಲ್ಲಿ ಯಾವ ದೇಶ ಮೊದಲು ಚಂದ್ರನ ಮೇಲೆ ಕಾಲಿಡುತ್ತದೆ ಎಂಬ ಚರ್ಚೆ ಕೂಡ ಜೋರಾಗಿದೆ.

ಚಂದ್ರನ ಅಂಗಳದ ಮೇಲೆ ಮೂರನೇ ಹೆಜ್ಜೆ ಇಡಲು ಭಾರತ ಜು. 14 ರಂದು ಚಂದ್ರಯಾನ-3 ಬಾಹ್ಯಾಕಾಶ ನೌಕೆ ಉಡಾವಣೆ ಮಾಡಿತು. ಇದಕ್ಕೆ ಸರಿಸುಮಾರು ತಿಂಗಳ ಅಂತರದಲ್ಲಿ (ಆ.11) ಚಂದ್ರನ ಕಡೆಗೆ ರಷ್ಯಾ ಕೂಡ ಲೂನಾ-25 ಉಪಗ್ರಹ ಉಡಾವಣೆ ಮಾಡಿದೆ. ಎರಡೂ ಬಾಹ್ಯಾಕಾಶ ನೌಕೆಗಳು ಈಗ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಸ್ಪರ್ಧೆಯಲ್ಲಿವೆ. ಇವೆರಡರಲ್ಲಿ ಯಾವುದು ಮೊದಲು ಚಂದ್ರನ ಅಂಗಳ ತಲುಪುತ್ತದೆ ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಚಂದ್ರನ ಮೇಲ್ಮೈ ಹೇಗಿದೆ ನೋಡಿ – Chandrayaan-3 ಲ್ಯಾಂಡರ್ ಸೆರೆಹಿಡಿದ ಫೋಟೋ ಹಂಚಿಕೊಂಡ ಇಸ್ರೋ

ಇಸ್ರೋದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್‌ ಲ್ಯಾಂಡಿಂಗ್ ಮಾಡುವ ನಿರೀಕ್ಷೆಯಿದೆ. ಆದಾಗ್ಯೂ, ತಡವಾಗಿ ಉಡಾವಣೆಯಾದರೂ ರಷ್ಯಾದ ಮಿಷನ್ ಶೀಘ್ರದಲ್ಲೇ ಈ ಸಾಧನೆ ಮಾಡಬಹುದು. ಲೂನಾ-25 ಮಿಷನ್ ಸುಮಾರು 50 ವರ್ಷಗಳ ಬಳಿಕ ರಷ್ಯಾದ ಮೊದಲ ಚಂದ್ರನ ಕಾರ್ಯಾಚರಣೆಯಾಗಿದೆ.

ಚಂದ್ರನ ಕಕ್ಷೆಯನ್ನು ತಲುಪಲು ಐದು ದಿನಗಳನ್ನು ತೆಗೆದುಕೊಳ್ಳುತ್ತದೆ. ನಂತರ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಮೊದಲು ಇನ್ನೂ ಐದರಿಂದ ಏಳು ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು Luna-25 ಗಾಗಿ ಮಹತ್ವಾಕಾಂಕ್ಷೆಯ ಟೈಮ್‌ಲೈನ್ ಅನ್ನು ರಷ್ಯಾದ Roscosmos ವಿವರಿಸಿದೆ. ಲೂನಾ-25 ಆಗಸ್ಟ್ 16 ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸುತ್ತದೆ. ನಂತರ ಆಗಸ್ಟ್ 21 ರ ವೇಳೆಗೆ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಸಾಧ್ಯತೆ ಇದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಲೂನಾ -25 ರ ಯಶಸ್ವಿ ಉಡಾವಣೆಗೆ ರೋಸ್ಕೋಸ್ಮೊಸ್‌ಗೆ (ರಷ್ಯಾದ ಬಾಹ್ಯಾಕಾಶ ಸಂಸ್ಥೆ) ಅಭಿನಂದನೆಗಳು. ನಮ್ಮ ಬಾಹ್ಯಾಕಾಶ ಯಾನದಲ್ಲಿ ಮತ್ತೊಂದು ಭೇಟಿಗೆ ಇದು ಪೂರಕವಾಗುತ್ತಿರುವುದು ಅದ್ಭುತ ಎಂದು ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವೀಟ್ ಮಾಡಿದೆ.

ಭಾರತದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈನಲ್ಲಿ ಇಳಿದ ಬಳಿಕ ಎರಡು ವಾರಗಳ ಕೆಲಸ ಮಾಡಲಿದೆ. ಆದರೆ ಸಣ್ಣ ಕಾರಿನ ಗಾತ್ರ ಇರುವ ರಷ್ಯಾದ ಲೂನಾ-25 ನೌಕೆಯು ಬರೋಬ್ಬರಿ ಒಂದು ವರ್ಷ ಚಂದ್ರನ ದಕ್ಷಿಣ ಧ್ರುವದಲ್ಲಿ ಕೆಲಸ ಮಾಡಲಿದೆ. ರಷ್ಯಾದ ಲೂನಾ-25 ನೌಕೆಯು 1.8 ಟನ್ ತೂಕವನ್ನು ಹೊಂದಿದೆ. 31 ಕೆಜಿ (68 ಪೌಂಡ್) ವೈಜ್ಞಾನಿಕ ಉಪಕರಣಗಳನ್ನು ಒಳಗೊಂಡಿದೆ. ಈ ಎರಡೂ ದೇಶಗಳ ಚಂದ್ರಯಾನದ ಮುಖ್ಯ ಉದ್ದೇಶ ಚಂದ್ರನ ಮೇಲ್ಮೈನಲ್ಲಿ ನೀರಿನ ಶೋಧ. ಇದರ ಜೊತೆಗೆ ರಷ್ಯಾದ ನೌಕೆಯು ಚಂದ್ರನ ಧ್ರುವೀಯ ರೆಗೊಲಿತ್ ಮತ್ತು ಚಂದ್ರನ ಧ್ರುವೀಯ ಹೊರಗೋಳದ ಪ್ಲಾಸ್ಮಾ ಮತ್ತು ಧೂಳಿನ ಕಣದ ಬಗ್ಗೆಯೂ ಶೋಧಿಸಲಿದೆ. ಇದನ್ನೂ ಓದಿ: ಚಂದ್ರನ ಮೇಲ್ಮೈ ಸಮೀಪಕ್ಕೆ Chandrayaan-3 ಬಾಹ್ಯಾಕಾಶ ನೌಕೆ – ಇಷ್ಟು ದೂರ ಹೋದ್ರೆ ಚಂದ್ರನ ಮೇಲೆ ಲ್ಯಾಂಡಿಂಗ್‌ ಪಕ್ಕಾ!

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್