ನಿದ್ರೆಗೆ ಜಾರಿದ ಚಂದ್ರಯಾನ-3 ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್‌

Public TV
2 Min Read

ನವದೆಹಲಿ: ಚಂದ್ರನ (Moon) ಮೇಲ್ಮೈಯನ್ನು ಯಶಸ್ವಿಯಾಗಿ ಮುಟ್ಟಿದ ದಿನಗಳ ನಂತರ ಚಂದ್ರಯಾನ-3 ರ (Chandrayaan-3) ಪ್ರಗ್ಯಾನ್ ರೋವರ್ (Pragyan Rover) 100 ಮೀಟರ್‌ಗಳಷ್ಟು ಕ್ರಮಿಸಿದೆ. ರೋವರ್ ತನ್ನ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಿದೆ. ಈಗ ವಿಕ್ರಮ್‌ ಲ್ಯಾಂಡರ್‌ (Vikram Lander) ಮತ್ತು ಪ್ರಗ್ಯಾನ್ ರೋವರನ್ನು ಸ್ಲೀಪ್‌ ಮೋಡ್‌ಗೆ (Sleep Mode) ಹೊಂದಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.

ರೋವರನ್ನು ಈಗ ಸುರಕ್ಷಿತವಾಗಿ ನಿಲುಗಡೆ ಮಾಡಲಾಗಿದೆ. ಸ್ಲೀಪ್ ಮೋಡ್‌ಗೆ ಹೊಂದಿಸಲಾಗಿದೆ. APXS ಮತ್ತು LIBS ಪೇಲೋಡ್‌ಗಳನ್ನು ಆಫ್ ಮಾಡಲಾಗಿದೆ. ಈ ಪೇಲೋಡ್‌ಗಳಿಂದ ದತ್ತಾಂಶವು ಲ್ಯಾಂಡರ್ ಮೂಲಕ ಭೂಮಿಗೆ ರವಾನೆಯಾಗುತ್ತದೆ ಎಂದು ಇಸ್ರೋ (ISRO) ಟ್ವೀಟ್‌ ಮಾಡಿ ಮಾಹಿತಿ ನೀಡಿದೆ. ಇದನ್ನೂ ಓದಿ: ಚಂದ್ರ, ಸೂರ್ಯ ಮಿಷನ್‌ ಆಯ್ತು; ಇಸ್ರೋ ಮುಂದಿನ ಆಪರೇಷನ್‌ ಯಾವುದು?

ಪ್ರಸ್ತುತ, ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಿದೆ. ಸೌರ ಫಲಕವು ಸೆಪ್ಟೆಂಬರ್ 22, 2023 ರಂದು ನಿರೀಕ್ಷಿತ ಮುಂದಿನ ಸೂರ್ಯೋದಯದಲ್ಲಿ ಬೆಳಕನ್ನು ಸ್ವೀಕರಿಸಲು ಆಧಾರಿತವಾಗಿದೆ. ರಿಸೀವರ್ ಅನ್ನು ಇರಿಸಲಾಗಿದೆ. ಅದು ಯಶಸ್ವಿಯಾಗಿ ಮತ್ತೊಂದು ಕಾರ್ಯಯೋಜನೆ ಮಾಡುವ ಆಶಯ ಹೊಂದಲಾಗಿದೆ. ಇಲ್ಲದಿದ್ದರೆ, ಅದು ಭಾರತದ ಚಂದ್ರನ ರಾಯಭಾರಿಯಾಗಿ ಶಾಶ್ವತವಾಗಿ ಉಳಿಯುತ್ತದೆ ಎಂದು ಇಸ್ರೋ ತಿಳಿಸಿದೆ.

ರಾತ್ರಿಯಾದಾಗ ಚಂದ್ರನ ಮೇಲ್ಮೈನಲ್ಲಿ – 230 ಡಿಗ್ರಿ ತಾಪಮಾನ ಇರುತ್ತದೆ. ಈ ಸಂದರ್ಭದಲ್ಲಿ ಸಂಶೋಧನೆ ಅಸಾಧ್ಯ. ಹೀಗಾಗಿ ರೋವರನ್ನು ಇಸ್ರೋ ಸುರಕ್ಷಿತವಾಗಿ ನಿಲುಗಡೆ ಮಾಡಿದೆ. ಇದನ್ನೂ ಓದಿ: Aditya L1 Launch: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ

ಇದಕ್ಕೂ ಮೊದಲು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಅವರು, “ಒಳ್ಳೆಯ ಸುದ್ದಿ ಏನೆಂದರೆ, ಲ್ಯಾಂಡರ್‌ನಿಂದ ರೋವರ್‌ ಸುಮಾರು 100 ಮೀಟರ್‌ಗಳಷ್ಟು ಚಲಿಸಿದೆ. ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ರೋವರ್‌, ಲ್ಯಾಂಡರ್‌ ನಿದ್ರೆ ಮಾಡುವ ಪ್ರಕ್ರಿಯೆಯನ್ನು ನಾವು ಪ್ರಾರಂಭಿಸಲಿದ್ದೇವೆ. ಏಕೆಂದರೆ ಅವೆರಡು ಮುಂಬರುವ ರಾತ್ರಿಯನ್ನು ತಡೆದುಕೊಳ್ಳಬೇಕಾಗುತ್ತದೆ” ಎಂದು ತಿಳಿಸಿದ್ದರು.

ವಿಕ್ರಮ್‌ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಇನ್ನೂ ಕಾರ್ಯನಿರ್ವಹಿಸುತ್ತಿವೆ. ವೈಜ್ಞಾನಿಕ ಉಪಕರಣಗಳನ್ನು ಹೊಂದಿರುವ ತಂಡವು ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದ್ದರು.

ಭಾರತದ ಚಂದ್ರಯಾನ-3, ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ ಮೊದಲ ದೇಶ ಎಂಬ ಇತಿಹಾಸವನ್ನು ಸೃಷ್ಟಿಸಿತು. ಆ ಮೂಲಕ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಸಾಧಿಸಿದ ಅಮೆರಿಕ, ರಷ್ಯಾ ಮತ್ತು ಚೀನಾ, ಜಪಾನ್‌ ದೇಶಗಳ ಸಾಲಿಗೆ ಭಾರತ ಸೇರಿತು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್