ನಟ ಪ್ರಕಾಶ್ ರೈ ವಿರುದ್ಧ ಸಚಿವ ಪರಮೇಶ್ವರ್, ಮಾಜಿ ಸಚಿವ ಅಶೋಕ್ ಗರಂ

Public TV
1 Min Read

ಬೆಂಗಳೂರು: ಚಂದ್ರಯಾನದ (Chandrayaan-3) ಬಗ್ಗೆ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದ್ದ ಪ್ರಕಾಶ್ ರೈ (Prakash Raj) ವಿರುದ್ಧ ಗೃಹ ಸಚಿವ ಜಿ. ಪರಮೇಶ್ವರ್ (G Parameshwara), ಮಾಜಿ ಸಚಿವ ಆರ್. ಅಶೋಕ್ (R Ashoka) ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್, ಚಂದ್ರಯಾನ-3 ಲ್ಯಾಂಡಿಗ್‌ಗೆ ಕೌಂಟ್ ಡೌನ್ ಶುರುವಾಗಿದೆ, ಚಂದ್ರಯಾನಕ್ಕಿಂತ ದೊಡ್ಡದು ಯಾವುದಿದೆ? ಇದು ಬಹಳ ಸಂತೋಷದ ವಿಚಾರವಾಗಿದೆ. ವ್ಯಂಗ್ಯವಾಗಿ ಟ್ವೀಟ್ ಮಾಡಿದವರಿಗೆ ಚಂದ್ರಯಾನ-3 ಎಂದರೆ ಏನು ಅಂತಾ ಗೊತ್ತಾಗಿಲ್ಲ. ಚಿಕ್ಕಮಕ್ಕಳಾಗಿದ್ದಾಗ ಚಂದ್ರನ ನೋಡು ಅಂತಾರಲ್ಲ ಅವರು ಅಲ್ಲೇ ಇದ್ದಾರೆ ಎಂದು ಪ್ರಕಾಶ್ ರೈಗೆ ಪರಮೇಶ್ವರ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಚಂದ್ರಯಾನ ವ್ಯಂಗ್ಯ: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

ಮಾಜಿ ಸಚಿವ ಆರ್. ಅಶೋಕ್ ಮಾತನಾಡಿ, ನಾಳೆ ಚಂದ್ರಯಾನ-3 ಲ್ಯಾಂಡ್ ಆಗುತ್ತಿದೆ. ಭಗವಂತನ ಇಚ್ಚೆ ಇದೆ, ಶುಭ ಕೋರುತ್ತೇನೆ. ಪ್ರಕಾಶ್ ರೈ ಒಬ್ಬ ವಿಕೃತ ಮನುಷ್ಯ. ನಾನು ಕೂಡ ಕಾರ್ಟೂನ್ ನೋಡಿದ್ದೇನೆ. ಟೀ ಮಾರುವ ಮೂಲಕ ವಿಜ್ಞಾನಿಗಳನ್ನು ಟೀಕೆ ಮಾಡುವುದನ್ನು ನೋಡಿದರೆ ಇದು ಕೀಳು ಪ್ರವೃತ್ತಿ ಎನಿಸುತ್ತದೆ. ಸಾಕಷ್ಟು ಕಲಾವಿದರನ್ನು ನೋಡಿದ್ದೇನೆ. ಈತನೂ ಸಹ ಕಲಾವಿದ. ಡಾ. ರಾಜ್‌ಕುಮಾರ್ ಹಾಗೂ ರಜನಿಕಾಂತ್ ಅವರೆಲ್ಲಾ ಉತ್ತಮ ಕಲಾವಿದರು. ಆದರೆ ಪ್ರಕಾಶ್ ರೈ ಕಲಾವಿದ ಅಂತ ಕರೆಯೋಕೆ ಆಗಲ್ಲ. ಸಿನಿಮಾ ರೀತಿಯಲ್ಲೇ ನಿಜ ಜೀವನದಲ್ಲೂ ಪ್ರಕಾಶ್ ರೈ ವಿಲನ್ ಆಗಿದ್ದಾನೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:  Chandrayaan-3; ರಾಜ್ಯದ ಎಲ್ಲಾ ಶಾಲೆಗಳಲ್ಲೂ ಲ್ಯಾಂಡಿಂಗ್‌ ನೇರ ಪ್ರಸಾರ: ಯೋಗಿ ಆದಿತ್ಯನಾಥ್‌

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್