ಇಂದು ಚಂದ್ರಯಾನ-3 ಉಡಾವಣೆ – ನಿಮಗೆ ತಿಳಿದಿರಲೇ ಬೇಕಾದ 10 ಅಂಶಗಳು

Public TV
2 Min Read

ಶ್ರೀಹರಿಕೋಟ: ಮತ್ತೊಂದು ಐತಿಹಾಸಿಕ ಸಾಧನೆಯತ್ತ ಇಸ್ರೋ (ISRO) ಹೆಜ್ಜೆ ಇಟ್ಟಿದೆ. ಶುಭ ಶುಕ್ರವಾರವಾದ ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಭಾರತದ ಗಗನನೌಕೆ ನಭಕ್ಕೆ ಚಿಮ್ಮಲಿದೆ. ಬಾಹುಬಲಿ ರಾಕೆಟ್ (Bahubali Rocket) ಎಂದೇ ಹೆಸರಾದ ಜಿಎಲ್‌ಎಲ್‌ವಿ ಮಾರ್ಕ್ 3 ರಾಕೆಟ್ ಇದನ್ನು ಹೊತ್ತೊಯ್ಯಲಿದೆ. ಚಂದ್ರಯಾನ-3 (Chandrayaan-3) ಉಡಾವಣೆ ಬಗ್ಗೆ ಈ 10 ಅಂಶಗಳನ್ನು ನೀವು ತಿಳಿದುಕೊಳ್ಳಲೇ ಬೇಕು.

* ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಜಿಎಸ್‌ಎಲ್‌ವಿ ಮಾರ್ಕ್ 3 ಹೆವಿ-ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನಲ್ಲಿ ಇಳಿಯುವ ಲ್ಯಾಂಡರ್ ವಿಕ್ರಮ್ ಅನ್ನು ಅಳವಡಿಸಲಾಗಿದೆ. ಇದು 43.5 ಮೀ ಎತ್ತರವಿದ್ದು, ಕುತುಬ್ ಮಿನಾರ್‌ನ ಅರ್ಧಕ್ಕಿಂತಲೂ ಹೆಚ್ಚು ಎತ್ತರವಾಗಿದೆ.
* ಇಂದು ಮಧ್ಯಾಹ್ನ 2:35ಕ್ಕೆ ಚಂದ್ರಯಾನ-3 ಉಡಾವಣೆಯಾಗಲಿದೆ. ಇದು 40 ದಿನಗಳ ಕಾಲ ಅಂತರಿಕ್ಷದಲ್ಲಿ ಪ್ರಯಾಣಿಸಲಿದ್ದು, ಆಗಸ್ಟ್ 23 ಇಲ್ಲವೇ 24ರಂದು ಚಂದ್ರನ ಮೇಲೆ ಇಳಿಯಲಿದೆ.
* 4 ವರ್ಷಗಳ ಹಿಂದೆ ಚಂದ್ರಯಾನ-2 ಪ್ರಯೋಗಿಸಿ ಚಂದ್ರನ ಅಂಗಳದಲ್ಲಿ ಲ್ಯಾಂಡಿಂಗ್ ವೇಳೆ ಉಂಟಾದ ವೈಫಲ್ಯದಿಂದ ಪಾಠ ಕಲಿತ ಇಸ್ರೋ ಇದೀಗ ಮತ್ತಷ್ಟು ಉತ್ಸಾಹದೊಂದಿಗೆ ಚಂದ್ರಯಾನ-3 ಪ್ರಯೋಗಕ್ಕೆ ಸಜ್ಜಾಗಿದೆ.

* 2008ರಲ್ಲಿ ಭಾರತದ ಮೊದಲ ಚಂದ್ರಯಾನ ಸಮಯದಲ್ಲಿ ಆದ ಸಂಶೋಧನೆಯೊಂದು ಜಗತ್ತನ್ನೇ ವಿಸ್ಮಯಗೊಳಿಸಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿನ ಅಣುಗಳು ಕಂಡುಬಂದಿದ್ದು, ಇದೀಗ ಚಂದ್ರಯಾನ-3 ಮೊದಲ ಬಾರಿಗೆ ಅದೇ ಸ್ಥಳದಲ್ಲಿ ಇಳಿಯಲಿದೆ.
* ವಿಕ್ರಮ್ ಸುರಕ್ಷಿತ ಹಾಗೂ ನಾಜೂಕಿನಿಂದ ಚಂದ್ರನ ಮೇಲೆ ಇಳಿಯಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

* ವಿಜ್ಞಾನಿಗಳು ಚಂದ್ರನ ಮಣ್ಣನ್ನು ವಿಶ್ಲೇಷಿಸಲು, ಚಂದ್ರನ ಮೇಲ್ಮೈ ಸುತ್ತಲೂ ತಿರುಗಲು ಹಾಗೂ ಚಂದ್ರನ ಕಂಪನಗಳನ್ನು ದಾಖಲಿಸಲಿಸಲು ಆಶಿಸಿದ್ದಾರೆ.
* ಕಳೆದ ಬಾರಿಯ ಚಂದ್ರಯಾನದ ಮಿಷನ್‌ನಿಂದ ಸಾಕಷ್ಟು ವೈಜ್ಞಾನಿಕ ವಿಷಯಗಳನ್ನು ಕಲಿತಿದ್ದು, ಈ ಬಾರಿ ಲ್ಯಾಂಡರ್‌ನಲ್ಲಿ ಎಂಜಿನ್‌ಗಳ ಸಂಖ್ಯೆಯನ್ನು 5 ರಿಂದ 4ಕ್ಕೆ ಇಳಿಸಲಾಗಿದೆ. ಮಾತ್ರವಲ್ಲದೇ ಸಾಫ್ಟ್‌ವೇರ್ ಅನ್ನು ನವೀಕರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಇದನ್ನೂ ಓದಿ: ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್‌ಡೌನ್‌

* ಚಂದ್ರಯಾನ-3ರಲ್ಲಿ ಆರ್ಬಿಟರ್ ಅಳವಡಿಸಲಾಗಿಲ್ಲ. ಕೇವಲ ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್, ರೋವರ್ ಮಾಡ್ಯೂಲ್ ಮಾತ್ರ ಇವೆ. ಏಕೆಂದರೆ ಚಂದ್ರಯಾನ-2ರಲ್ಲಿ ಪ್ರಯೋಗಿಸಿದ್ದ ಆರ್ಬಿಟರ್ 3 ವರ್ಷಗಳಿಂದ ಚಂದ್ರನ ಸುತ್ತ ತಿರುಗುತ್ತಾ ತನ್ನ ಕೆಲಸವನ್ನು ಮಾಡುತ್ತಿದೆ.
* ಚಂದ್ರಯಾನ-1 ಚಂದ್ರನ ಕಾರ್ಯಾಚರಣೆಯ ಭಾರತದ ಮೊದಲ ಮಿಷನ್ ಆಗಿತ್ತು. ಅಕ್ಟೋಬರ್ 2008 ರಲ್ಲಿ ಪ್ರಾರಂಭವಾದ ಮಿಷನ್ 2009ರ ಆಗಸ್ಟ್ ವರೆಗೆ ಕಾರ್ಯನಿರ್ವಹಿಸಿತ್ತು.

* 1969ರಲ್ಲಿ ಅಮೆರಿಕಾದ ನಾಸಾ ಕಳಿಸಿದ ಅಪೋಲೋ 11 ಎಂಬ ಮಾನವಸಹಿತ ರಾಕೆಟ್ 4 ದಿನಗಳಲ್ಲಿ ಗಮ್ಯ ಸ್ಥಾನವನ್ನು ಸೇರಿತ್ತು. ಆದರೆ ಇಸ್ರೋ ಜುಲೈ 14 ರಂದು ಕಳಿಸುತ್ತಿರುವ ಚಂದ್ರಯಾನ-3 ಚಂದ್ರನ ಕಕ್ಷೆಯನ್ನು ಸೇರಲು 40 ದಿನ ಹಿಡಿಯಲಿದೆ. ಇದನ್ನೂ ಓದಿ: Chandrayaan-3: ಚಂದ್ರನ ಅಂಗಳದಲ್ಲಿ 3ನೇ ಹೆಜ್ಜೆ ಇಡಲು ಕ್ಷಣಗಣನೆ; ಚಂದ್ರಯಾನ-1, 2 ಕ್ಕೆ ಹೋಲಿಸಿದ್ರೆ ಚಂದ್ರಯಾನ-3 ಹೇಗೆ ಭಿನ್ನ?

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್