ಚಂದ್ರನ ಮೇಲೆ ಭಾರತದ ಮುದ್ರೆ – ಚಂದ್ರಯಾನ 3 ಸಕ್ಸಸ್ ಮುಂದೇನು?

Public TV
2 Min Read

ಬೆಂಗಳೂರು: ಚಂದ್ರಯಾನ-3 (Chandrayaan-3) ಲ್ಯಾಂಡರ್ ಚಂದ್ರನ (Moon) ಮೇಲ್ಮೈಯನ್ನು ಸ್ಪರ್ಶಿಸಿದ ನಂತರ ಮುಂದೆ ಏನು ಎನ್ನುವ ಕುತೂಹಲ ಜನರಲ್ಲಿ ಮೂಡಿದೆ. ಪ್ರಸ್ತುತ ಈ ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸುರಕ್ಷಿತವಾಗಿ ಇಳಿದಿದೆ. ಈ ಲ್ಯಾಂಡಿಂಗ್ ನಂತರವೇ ನಿಜವಾದ ಕೆಲಸಗಳು ಪ್ರಾರಂಭವಾಗಿವೆ. ಸದ್ಯಕ್ಕೆ ವಿಜ್ಞಾನಿಗಳು ಒಂದು ಚಂದ್ರನ ದಿನಕ್ಕೆ ಅಂದರೆ 14 ದಿನಗಳ ರೋವರ್ ಕಾರ್ಯಾಚರಣೆಗಳ ತಿಳಿಯುವ ಪ್ಲಾನ್ ಮಾಡಿದ್ದಾರೆ.

ವಿಕ್ರಮ್ ಲ್ಯಾಂಡರ್‌ನಲ್ಲಿ ಡೇಟಾವನ್ನು ಒದಗಿಸುವ ಐದು ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಿದ್ದು, ಲ್ಯಾಂಡಿಂಗ್ ನಂತರ ಪ್ರಗ್ಯಾನ್ ರೋವರ್‌ಗಾಗಿ ರಾಂಪ್ ಅನ್ನು ರಚಿಸುತ್ತದೆ. ಆರು ಚಕ್ರಗಳ ಪ್ರಗ್ಯಾನ್ ರೋವರ್‌ನಲ್ಲಿ ಎರಡು ಚಕ್ರಗಳಲ್ಲಿ ಒಂದರಲ್ಲಿ ಅಶೋಕ ಚಕ್ರದ (Ashoka Emblem) ಚಿಹ್ನೆಯಿದ್ದು, ಮತ್ತೊಂದರಲ್ಲಿ ಇಸ್ರೋ (ISRO) ಲಾಂಛನವಿದ್ದು, ಇವುಗಳು ಚಂದ್ರನ ಮೇಲ್ಮೈ ಮೇಲೆ ಭಾರತದ ಮುದ್ರೆಯನ್ನು ಅಚ್ಚು ಒತ್ತುತ್ತವೆ. ಈ ಮುದ್ರೆ ಸಾವಿರಾರು ವರ್ಷಗಳ ಕಾಲ ಹಾಗೆ ಇರಲಿದೆ. ಏಕೆಂದರೆ ಚಂದ್ರನ ಮೇಲೆ ಗಾಳಿ, ನೀರು ಇಲ್ಲ ಅಂತಾ ವಿಜ್ಞಾನಿಗಳು ಹೇಳುತ್ತಾರೆ.  ಇದನ್ನೂ ಓದಿ: ಬೆಂಗಳೂರಿನ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ ಇಸ್ರೋ ವಿಜ್ಞಾನಿಗಳು ಯಾರು? ಅವರ ಪಾತ್ರ ಏನು?

 

 

ಈ ರೋವರ್ ಚಂದ್ರನ ಮೇಲ್ಮೈಯನ್ನು ಸ್ಕ್ಯಾನ್ ಮಾಡಲು ನ್ಯಾವಿಗೇಷನ್ ಕ್ಯಾಮೆರಾಗಳನ್ನು ಬಳಸುತ್ತದೆ. ರೋವರ್‌ನ ವೈಜ್ಞಾನಿಕ ಪೇಲೋಡ್‍ಗಳು ಚಂದ್ರನ ಅಂಶಗಳು, ವಾತಾವರಣ ಮತ್ತು ಇತರ ಅಂಶಗಳನ್ನು ಅಧ್ಯಯನ ಮಾಡುತ್ತದೆ. ಇದು ಚಂದ್ರಯಾನದ ವಸ್ತು, ಸ್ಯಾಂಪಲ್ ಗಳನ್ನು ನೀಡಲಿದೆ. ಚಂದ್ರನ ಮೇಲಿನ ಕಂಪನಗಳು,ಚಂದ್ರನ ಒಳರಚನೆ ಬಗ್ಗೆ ಸುಳಿವು ತಿಳಿಯುತ್ತದೆ. ಚಂದ್ರನ ಮಣ್ಣಿನಿಂದ ರಾಸಾಯನಿಕ ಸಂಯೋಜನೆ ಸಿಗುತ್ತದೆ. ಉಷ್ಣ ಗುಣಲಕ್ಷಣಗಳನ್ನು ಅಧ್ಯಯನ ಮಾಡುತ್ತದೆ ಮತ್ತು ಭೂಕಂಪನ ಚಟುವಟಿಕೆಯನ್ನು ಅಳೆಯುತ್ತದೆ. ಚಂದ್ರ ಮತ್ತು ಭೂಮಿಯ ನಡುವಿನ ಅಂತರವನ್ನು ಮಾಪನ ಮಾಡಲು ಸಹಾಯ ಮಾಡುತ್ತದೆ. ಇದು ಚಂದ್ರನ ಡೈನಾಮಿಕ್ಸ್‍ನ ಬಗ್ಗೆ ಮಾಹಿತಿ ನೀಡಲಿದೆ.

ಒಟ್ಟಿನಲ್ಲಿ ಚಂದ್ರಯಾನ-3 ಚಂದ್ರನ ಸಂಯೋಜನೆ, ಇತಿಹಾಸ ಮತ್ತು ಭವಿಷ್ಯದ ಕಾರ್ಯಾಚರಣೆಗಳ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಲಿದೆ.

 


Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್