ಮತ್ತೊಮ್ಮೆ ಭಾರತದ ಸಹಾಯಕ್ಕೆ ಬಂದ ಮಿತ್ರ ಇಸ್ರೇಲ್

Public TV
2 Min Read

ಬೆಂಗಳೂರು: ಮತ್ತೊಮ್ಮೆ ಭಾರತದ ಸಹಾಯಕ್ಕೆ ಮಿತ್ರದೇಶ ಇಸ್ರೇಲ್ ಬಂದಿದೆ. ಬಾಹ್ಯಾಕಾಶ ಸಂಸ್ಥೆ ಚಂದ್ರನ ಮೇಲೆ ಲ್ಯಾಂಡರ್ ಪತನ ಕುರಿತು ಪರಸ್ಪರ ಮಾಹಿತಿ ಹಂಚಿಕೊಳ್ಳಲು ಇಸ್ರೇಲ್ ಮುಂದಾಗಿವೆ.

ಲ್ಯಾಂಡರ್ ಸಂಪರ್ಕ ಕಳೆದುಕೊಂಡ ಬಗ್ಗೆ ತನಿಖೆ ಪೂರ್ಣಗೊಳಿಸಿರುವ ಇಸ್ರೋದ ಅವಲೋಕನಾ ಸಮತಿ, ಲ್ಯಾಂಡರ್ ಮಾಸ್ಟರ್ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಳ್ಳಲು ಕಾರಣ ಏನು ಎಂಬುದರ ಕುರಿತು ಇಸ್ರೋ ಮುಖ್ಯಸ್ಥರು ಹಾಗೂ ಇಸ್ರೇಲ್ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥರು ಪರಸ್ಪರ ಮಾಹಿತಿ ಹಂಚಿಕೊಳ್ಳಲಿದ್ದಾರೆ. ನಿನ್ನೆಯಷ್ಟೇ ವಿಕ್ರಮ್ ಪತ್ತೆ ಬಗ್ಗೆ ಇಸ್ರೋ ಮಾಹಿತಿ ನೀಡಿತ್ತು.

ಈ ವರ್ಷದ ಏಪ್ರಿಲ್ 11 ರಂದು ಇಸ್ರೇಲಿನ ರೊಬೊಟಿಕ್ ಲೂನಾರ್ ಲ್ಯಾಂಡರ್ ಪತನ ಹೊಂದಿತ್ತು. ಚಂದ್ರನ ಅಂಗಳಕ್ಕೆ ಇಳಿಯುವ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಭಾರತ ಮತ್ತು ಇಸ್ರೇಲಿನ ಚಂದ್ರಯಾನಗಳಿಗೆ ಸಾಮ್ಯತೆ ಇರುವ ಕಾರಣ ಈಗ ಎರಡು ದೇಶಗಳು ಅಧ್ಯಯನ ನಡೆಸಲಿದೆ.

ಈ ಸಂಬಂಧ ಇಸ್ರೇಲ್ ದೇಶದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ಭಾರತದ ಪ್ರಯತ್ನವನ್ನು ಶ್ಲಾಘಿಸಿದೆ. ಭಾರತದ ಪ್ರಯತ್ನ ನಿಜವಾಗಿಯೂ ಕಷ್ಟದ ಕೆಲಸವಾಗಿತ್ತು. ಇಸ್ರೋ ಮತ್ತು ಭಾರತದ ವಿಜ್ಞಾನಿಗಳು ದೊಡ್ಡ ಸಾಧನೆ ಮಾಡಿದ್ದಾರೆ. ಭಾರತ ಚಂದ್ರನನ್ನು ತಲುಪುತ್ತದೆ ಎನ್ನುವ ಆಶಾಭಾವವನ್ನು ಇಟ್ಟುಕೊಂಡಿದ್ದೇವೆ ಎಂದು ಟ್ವೀಟ್ ನಲ್ಲಿ ತಿಳಿಸಿದೆ.

ಚಂದ್ರನಿಂದ ಕೇವಲ 2.1 ಕಿ.ಮೀ ದೂರದಲ್ಲಿದ್ದಾಗ ಸಂಪರ್ಕ ಕಳೆದುಕೊಂಡ ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಬಿದ್ದಿರುವ ಸ್ಥಳವನ್ನು ಪತ್ತೆ ಹಚ್ಚಲಾಗಿದೆ. ಸಂಪರ್ಕ ಕಳೆದುಕೊಂಡ ಮರು ದಿನವೇ ದಿನವೇ ಚಂದ್ರನ ಮೇಲ್ಮೈನಲ್ಲಿ ಲ್ಯಾಂಡರ್ ವಿಕ್ರಮನನ್ನು ಆರ್ಬಿಟರ್ ಪತ್ತೆ ಹಚ್ಚಿದೆ. ಚಂದ್ರನ ಕಕ್ಷೆಯಲ್ಲಿ ಸುತ್ತುವ ಆರ್ಬಿಟರ್ ವಿಕ್ರಮ್ ಲಿಂಕ್ ತಪ್ಪಿದ ಸ್ಥಳದಲ್ಲಿ ಹಾದು ಹೋಗುವಾಗ ಹೈ ರೆಸಲ್ಯೂಷನ್ ಕ್ಯೆಮರಾದ ಮೂಲಕ ಥರ್ಮಲ್ ಇಮೇಜ್‍ಗಳನ್ನು ಕ್ಲಿಕ್ಕಿಸಿದೆ. ಈಗ ಉಳಿದಿರುವ 13 ದಿನಗಳ ಅವಧಿಯಲ್ಲಿ ಹೇಗಾದರೂ ಮಾಡಿ ವಿಕ್ರಮನ ಸಂಪರ್ಕಿಸಲು ಇಸ್ರೋ ವಿಜ್ಞಾನಿಗಳು  ಶತ ಪ್ರಯತ್ನ ಮಾಡುತ್ತಿದ್ದಾರೆ.

ಇಲ್ಲಿಯವರೆಗೆ ಲ್ಯಾಂಡರ್ ಏನಾಗಿತ್ತು ಎನ್ನುವುದು ತಿಳಿದಿರಲಿಲ್ಲ. ಈಗ ಲ್ಯಾಂಡರ್ ಪತ್ತೆಯಾಗಿದ್ದು ಅದು ಸರಿಯಾಗಿ ಕೆಲಸ ಮಾಡಿದರೆ ಅದರ ಒಳಗಡೆ ಇರುವ ಪ್ರಜ್ಞಾನ್ ರೋವರ್‍ನನ್ನು ಸಹ ಕೆಳಗಡೆ ಇಳಿಸಿ ಅಧ್ಯಯನ ನಡೆಸಬಹುದು.

Share This Article
Leave a Comment

Leave a Reply

Your email address will not be published. Required fields are marked *